ಚೆನ್ನೈ(ತಮಿಳುನಾಡು):ಇದು ಭಾರತ ಮತ್ತು ಅಮೆರಿಕದ ಯುವಕ- ಯುವತಿಯರ ನಡುವಿನ ಪ್ರೇಮ್​ ಕಹಾನಿ. ಮದುವೆಗೆ ಸಿದ್ಧವಾದ ಈ ಜೋಡಿ ಕಾರಣಾಂತರಗಳಿಂದ ಒಟ್ಟಿಗೇ ಸೇರಿ ಮದುವೆಯಾಗುವುದು ಅಸಾಧ್ಯವಾಗಿದೆ. ಆದ್ದರಿಂದ ಆನ್​ಲೈನ್​ ಮೂಲಕ ಇವರು ಮದುವೆ ಮಾಡಿಕೊಳ್ಳಲು ಹೈಕೋರ್ಟ್​​ ಅನುಮತಿ ನೀಡಿದೆ.
ಇದು ತಮಿಳುನಾಡಿನ ಕನ್ಯಾಕುಮಾರಿಯ ಯುವತಿ ಸುದರ್ಶಿನಿ ಹಾಗೂ ಅಮೆರಿಕ ಪ್ರಜೆ ರಾಹುಲ್ ಮಧು ಅವರ ಕಥೆ. ಸದ್ಯ ವರ್ಚುವಲ್ ಮೋಡ್ ಮೂಲಕ ಮದುವೆಯಾಗಲು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಅನುಮತಿ ನೀಡಿದ್ದು, ಮದುವೆಗೆ ಸಕಲ ಸಿದ್ಧತೆ ನಡೆದಿದೆ.
ಸುದರ್ಶಿನಿ ಹಾಗೂ ಮಧು ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಲು ಬಯಸಿದ್ದರು, ಆ ಸಂದರ್ಭದಲ್ಲಿ ರಾಹುಲ್ ಭಾರತಕ್ಕೆ ಭೇಟಿ ನೀಡಿದ್ದರು. ಮದುವೆಯ ಸಂಬಂಧ ಕಳೆದ ಮೇ 5ರಂದು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಸಬ್ ರಿಜಿಸ್ಟ್ರಾರ್‌ಗೆ ಅರ್ಜಿ ಸಲ್ಲಿಸಿದ್ದರು. ನಿಯಮದ ಪ್ರಕಾರ, 30 ದಿನಗಳ ಕಾಯುವಿಕೆ ಅವಧಿ (ನೋಟಿಸ್​ ಪಿರಿಯಡ್​)ಇರುತ್ತದೆ. ಇಂಥ ಸಂದರ್ಭದಲ್ಲಿ ಯಾರಾದರೂ ಇದಕ್ಕೆ ಆಕ್ಷೇಪಣೆ ಸಲ್ಲಿಸುತ್ತಾರೆಯೇ ಎಂದು ನೋಡುತ್ತಾರೆ. ಈ ಮದುವೆ ರಾಹುಲ್​ ತಂದೆಯವರಿಗೆ ಇಷ್ಟವಿರಲಿಲ್ಲ. ಆದ್ದರಿಂದ ಇವರು ಮದುವೆಗೆ ಆಕ್ಷೇಪಣೆ ಸಲ್ಲಿಸಿದ್ದರು.
ವಿಚಾರಣೆ ನಡೆದ ಬಳಿಕ ಈ ರೀತಿ ಆಕ್ಷೇಪಣೆಗಳು ಸಮಂಜಸವಲ್ಲ ಎಂಬ ತೀರ್ಮಾನಕ್ಕೆ ನೋಂದಣಿ ಅಧಿಕಾರಿ ಬಂದರು. ಆದ್ದರಿಂದ ವಿವಾಹಕ್ಕೆ ಸಮ್ಮತಿಸಿದರು. ಈ ನಡುವೆಯೇ ರಾಹುಲ್​ ವಾಪಸ್​ ಹೋಗಿದ್ದರು. ಆದರೆ ವೀಸಾಕ್ಕೆ ಸಂಬಂಧಿಸಿದಂತೆ ಕೆಲವೊಂದು ಕಾನೂನು ಸಮಸ್ಯೆ ಇರುವ ಕಾರಣ ರಾಹುಲ್ ಭಾರತಕ್ಕೆ ಹಿಂತಿರುಗಲು ಸಾಧ್ಯವಾಗಿಲ್ಲ. ಯುವತಿ ತವರಿನಲ್ಲಿಯೇ ಇದ್ದರು. ಈ ಸಮಯದಲ್ಲಿ ರಿಜಿಸ್ಟ್ರಾರ್​ ಕಚೇರಿಯ 30 ದಿನಗಳ ನೋಟಿಸ್​ ಅವಧಿ ಮುಗಿದ ಕಾರಣ, ಜೋಡಿ ಮದುವೆಯಾಗಬೇಕಿದೆ.
ಈ ಹಿನ್ನೆಲೆಯಲ್ಲಿ ಇಬ್ಬರೂ ಕೋರ್ಟ್​ ಮೊರೆ ಹೋಗಿದ್ದರು. ಮದುವೆ ಮಾನವನ ಮೂಲಭೂತ ಹಕ್ಕು, ಆದ್ದರಿಂದ ವಿಶೇಷ ವಿವಾಹ ಕಾಯ್ದೆ 1954 ರ ಸೆಕ್ಷನ್ 12 ಮತ್ತು 13ರ ಅಡಿ ಇವರ ವಿವಾಹ ನಡೆಯಬಹುದು ಎಂದು ಹೇಳಿದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಆನ್​ಲೈನ್​ ಮದುವೆಗೆ ಗ್ರೀನ್​ ಸಿಗ್ನಲ್​ ನೀಡಿದರು. 1954ರ ಹಿಂದೂ ವಿಶೇಷ ವಿವಾಹ ಕಾಯ್ದೆಯಡಿ ವಿವಾಹ ನೋಂದಣಿ ಮಾಡಿಸಿ ವಿವಾಹ ಪ್ರಮಾಣಪತ್ರ ನೀಡಬೇಕು ಎಂದು ಮಾಡಿಕೊಂಡ ಈ ಜೋಡಿಯ ಅರ್ಜಿ ಪುರಸ್ಕೃತವಾಗಿದೆ.
ಮೂರು ಸಾಕ್ಷಿಗಳ ಸಮ್ಮುಖದಲ್ಲಿ ವರ್ಚುವಲ್ ಮೋಡ್ ಮೂಲಕ ಇವರ ವಿವಾಹಕ್ಕೆ ಬೇಕಾಗಿರುವ ಸಕಲ ದಾಖಲೆಗಳನ್ನು ನೀಡುವಂತೆ ಕೋರ್ಟ್​ ಸಬ್ ರಿಜಿಸ್ಟ್ರಾರ್‌ಗೆ ನಿರ್ದೇಶಿಸಿದೆ. (ಏಜೆನ್ಸೀಸ್​)
ಲೈಂಗಿಕ ಕ್ರಿಯೆ ವೇಳೆ ಸಂಗಾತಿಯ ಒಪ್ಪಿಗೆಯಿಲ್ಲದೆ ಕಾಂಡೋಮ್ ತೆಗೆಯುವುದು ಅಪರಾಧ: ಸುಪ್ರೀಂಕೋರ್ಟ್​

ಸಾವಿರಾರು ಕೋಟಿ ರೂ. ಅಕ್ರಮ ವರ್ಗಾವಣೆ: ಸತ್ತರೂ ಶರಣಾಗಲ್ಲ ಎಂದಿದ್ದ ಸಂಸದ​ ರಾವತ್​ ಅರೆಸ್ಟ್​

ರಾಶಿ ರಾಶಿ ಹಣದೊಂದಿಗೆ ಸಿಕ್ಕಿಬಿದ್ದ ಮೂವರು ಶಾಸಕರ ಅಮಾನತು ಮಾಡಿದ ಸೋನಿಯಾ: ಬಿಜೆಪಿ ಕುತಂತ್ರ ಎಂದ ಪಕ್ಷ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
