ಇಂದೋರ್​ (ಮಧ್ಯಪ್ರದೇಶ):ಮಲಗಿದಾಗ ಸುಂದರ ಕನಸನ್ನು ಕಂಡಾಗ ಮನಸ್ಸು ದಿನಪೂರ್ತಿ ಅಹ್ಲಾದವಾಗಿರುತ್ತದೆ, ಅದೇ ರೀತಿ ಕೆಟ್ಟ ಕನಸು ಕಂಡಾಗ ಮೂಡ್​ ಆಫ್​ ಆಗಿರುತ್ತದೆ. ನಮಗೆ ಬಿದ್ದದ್ದು ಕನಸು ಮಾತ್ರ, ಅದು ನನಸಲ್ಲ ಎಂದು ತಿಳಿದರೂ ಅದರ ಮೇಲೆಯೇ ಆ ದಿನದ ನಮ್ಮ ಮೂಡ್​ ಕೆಲವೊಮ್ಮೆ ನಿರ್ಧರಿತವಾಗಿರುತ್ತದೆ.
ಅದೇ ರೀತಿ, ಕೆಲವೊಮ್ಮೆ ಕನಸು ಕಾಣುತ್ತಿರುವಾಗ ನಗುವುದು, ಅಳುವುದು, ಹೆದರುವುದು ಎಲ್ಲವೂ ನಡೆದಿರುತ್ತದೆ. ಇನ್ನು ಕೆಲವೊಮ್ಮೆ ಕನಸು ಕಾಣುತ್ತಲೇ ನಮ್ಮ ಅರಿವಿಗೆ ಬಾರದೇ ಹೊಡೆಯುವುದು, ಚಿವುಟುವುದು, ಬೈಯುವುದನ್ನು ಮಾಡುತ್ತಿರುತ್ತೇವೆ. ಇವೆಲ್ಲಾ ಓಕೆ. ಆದರೆ ಮಧ್ಯಪ್ರದೇಶ ಘನಾದ ಅಸ್ಸಿನ್ ಫೋಸು ಎಂಬಲ್ಲಿ ನಡೆದಿರುವ ಘಟನೆ ಮಾತ್ರ ಶಾಕಿಂಗ್​ ಆಗಿರುವಂಥದ್ದು.
ಅದೇನೆಂದರೆ ಸುಂದರವಾಗಿರುವ ಕನಸನ್ನು ಕಂಡ ಕೋಫಿ ಅಟ್ಟಾ ಎಂಬ ವ್ಯಕ್ತಿಯೊಬ್ಬ ತನ್ನ ಮರ್ಮಾಂಗವನ್ನೇ ಕಟ್​ ಮಾಡಿಕೊಂಡಿದ್ದಾನೆ! ಅಷ್ಟಕ್ಕೂ ಆತ ಕಂಡಿರುವ ಕನಸು ಎಂದರೆ ಮಾಂಸದೂಟವನ್ನು ಸವಿಯುತ್ತಿರುವುದು! ಮಾಂಸದೂಟ ಸವಿಯುವ ಕನಸು ಕಾಣುತ್ತಿರುವಾಗ ಮರ್ಮಾಂಗಕ್ಕೆ ಕತ್ತರಿ ಬಿದ್ದದ್ದು ಹೇಗೆ ಎಂದರೆ, ಈತನಿಗೆ ಮೇಕೆ ತಿನ್ನುವ ಆಸೆಯಾಗಿತ್ತಂತೆ. ಅದನ್ನೇ ಕನಸಿನಲ್ಲಿಯೂ ಕಂಡಿದ್ದಾನೆ.
ಕೋಫಿ ಅಟ್ಟಾ ಮಾರುಕಟ್ಟೆಯಿಂದ ಮೇಕೆ ಖರೀದಿ ಮಾಡಿದಂತೆ ಕನಸು ಕಂಡಿದ್ದಾನೆ. ನಂತರ ಆ ಮೇಕೆಯನ್ನು ಕಟ್​ ಮಾಡುತ್ತಿರುವಂತೆ ಕನಸು ಕಂಡಿದ್ದಾನೆ. ಅವನಿಗೆ ಅರಿವೇ ಇಲ್ಲದೇ ಎದ್ದು ಚಾಕು ತಂದಿದ್ದಾನೆ. ಮೇಕೆಯನ್ನು ಕಟ್​ ಮಾಡಿದಂತೆ ಭಾವಿಸಿದ ಆತ ತನ್ನ ಮರ್ಮಾಂಗನ್ನೇ ಕಟ್​ ಮಾಡಿಕೊಂಡಿದ್ದಾನೆ.
ನಿದ್ದೆಯಿಂದ ಎಚ್ಚರ ಆಗುತ್ತಿದ್ದಂತೆಯೇ ತೀವ್ರ ರಕ್ತಸ್ರಾವ ಉಂಟಾಗಿರುವುದನ್ನು ನೋಡಿದ್ದಾನೆ. ಕೂಡಲೇ ನೋವಿನಿಂದ ಕಿರುಚಿಕೊಂಡ ಆತನನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಇದರ ಕಾರಣ ಕೇಳಿ ಶಾಕ್ ಆಗಿದ್ದಾರೆ.
ಕೋಫಿ ಅಟ್ಟಾ ಹೇಳಿದ್ದೇನೆಂದರೆ, ನಾನು ನಿದ್ರಿಸಿದ್ದಾಗ ಕುರ್ಚಿಯಲ್ಲಿ ಕುಳಿತಿದ್ದೆ. ನಾನು ಮೇಕೆಯನ್ನು ಕತ್ತರಿಸುತ್ತಿದ್ದೇನೆ ಎಂದು ಕನಸು ಕಂಡೆ, ಆದರೆ ನನ್ನ ಜನನಾಂಗಕ್ಕೆ ಹೇಗೆ ಚಾಕು ಹಾಕಿಕೊಂಡೆ, ಚಾಕು ಹೇಗೆ ತಂದೆ ಎಂಬ ನೆನಪು ಇಲ್ಲ ಎಂದು ಹೇಳಿಕೊಂಡಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದ್ದು, ಶಸ್ತ್ರಚಿಕಿತ್ಸೆಗೆ ಸಕಲ ಸಿದ್ಧತೆ ನಡೆಸಲಾಗಿದೆ.(ಏಜೆನ್ಸೀಸ್​)
ನನ್ನ ಚಿತ್ರಕ್ಕೆ ನೀವೇ ಹೀರೋಯಿನ್​: ಖ್ಯಾತ ನಟಿಗೆ ‘777 ಚಾರ್ಲಿ’ ನಿರ್ದೇಶಕನ ಹೆಸರಲ್ಲಿ ಕಾಲ್​! ಮುಂದಾಗಿದ್ದೇ ಬೇರೆ…

VIDEO: ಜೊತೆಜೊತೆಯಲಿ ಧಾರಾವಾಹಿ ವಿವಾದಕ್ಕೆ ಟ್ವಿಸ್ಟ್​: ನಿರ್ದೇಶಕ ಜಗದೀಶ್​ ಹೇಳಿಕೆಯ ಆಡಿಯೋ ಲೀಕ್​..

ಹೆಣ್ಣುಮಕ್ಕಳಿಗೆ ವಯಸ್ಸು ಕೇಳೋ ಮುನ್ನ ಎಚ್ಚರ! ಡೊಮಿನೋಸ್ ಪಿಜ್ಜಾಗೆ 3.78 ಲಕ್ಷ ರೂ. ದಂಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 10 =
Remember me
