ಭೋಪಾಲ್‌:ರಸ್ತೆಯಲ್ಲಿ ಹೋಗುವಾಗ, ವಾಹನ ಚಾಲನೆ ಮಾಡುವಾಗ ಮೊಬೈಲ್‌ಫೋನ್‌ನಲ್ಲಿ ಮಾತನಾಡಬೇಡಿ, ಹೆಡ್‌ಫೋನ್‌ ಹಾಕಿಕೊಂಡು ರಸ್ತೆಯಲ್ಲಿ ಹೋಗಬೇಡಿ… ಇದು ಪ್ರಾಣಕ್ಕೆ ಅಪಾಯ ಎಂದು ಯಾರು ಎಷ್ಟೇ ಹೇಳಿದರೂ, ಎಷ್ಟೇ ಘೋಷಣೆ ಮಾಡಿದರೂ, ಎಷ್ಟೇ ಬುದ್ಧಿವಾದ ಹೇಳಿದರೂ ನಮಗೇನೂ ಆಗುವುದಿಲ್ಲ ಎಂದು ಇದನ್ನು ಕಿವಿಯ ಮೇಲೆ ಹಾಕಿಕೊಳ್ಳದವರೇ ಹೆಚ್ಚು.
ಮೊಬೈಲ್‌ಫೋನ್‌ನಲ್ಲಿ ಮಾತನಾಡುತ್ತಾ ಹೋಗುವ ಸಮಯದಲ್ಲಿ ಮೈಮೇಲೆ ಎಚ್ಚರಿಕೆಯೇ ಕೆಲವರಿಗೆ ಇರದಿದ್ದರೆ, ಹೆಡ್‌ಪೋನ್‌ನಿಂದಾಗಿ ಅಕ್ಕಪಕ್ಕ ಬರುವ ಗಾಡಿಗಳ ಸದ್ದೂ ಕೇಳಿಸದೇ ಹೋಗುತ್ತದೆ. ಇಂಥ ಅನೇಕ ಸಂದರ್ಭಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವ ಹಲವಾರು ಘಟನೆಗಳು ನಡೆದಿವೆ.
हेडफोन लगाने वाले सावधान ! छोटी सी लापरवाही ने छीन ली महिला की जिंदगी, वीडियो देख हो जाओगे हैरान…@MPPoliceOnline@MPPolice2pic.twitter.com/C4kRV6Q0uT
— Punjab Kesari-MadhyaPradesh/Chhattisgarh (@punjabkesarimp)January 16, 2021

ಅಂಥದ್ದೇ ಒಂದು ಘಟನೆ ಮಧ್ಯಪ್ರದೇಶದ ಹೋಶಂಗಾಬಾದ್​ನಲ್ಲಿ ನಡೆದಿದೆ. ಕಿವಿಯಲ್ಲಿ ಹೆಡ್​ಪೋನ್​ ಹಾಕಿಕೊಂಡು ರೈಲ್ವೆ ಹಳಿ ದಾಟುತ್ತಿದ್ದ ಆರೋಗ್ಯ ಕಾರ್ಯಕರ್ತೆ ಮೇಲೆ ರೈಲ್ವೆ ಹರಿದಿದೆ. ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಿವಿಯಲ್ಲಿ ಹೆಡ್​ಫೋನ್​ ಹಾಕಿಕೊಂಡು ಹಾಡು ಕೇಳುತ್ತಾ ರೈಲ್ವೆ ಹಳಿ ದಾಟಲು ಮುಂದಾಗಿದ್ದಾರೆ. ಈ ವೇಳೆ ಸೂಪರ್​ ಫಾಸ್ಟ್​ ರೈಲು ಬಂದಿದ್ದು ಅವರಿಗೆ ತಿಳಿಯಲ್ಲಿ.
ಸಮೀಪ ಬರುತ್ತಿದ್ದಂತೆಯೇ ರೈಲು ಬರುವುದನ್ನು ನೋಡಿ ಏನು ಮಾಡಬೇಕು ಎಂದು ತಿಳಿಯದೇ ಹಳಿಯ ಮೇಲೆಯೇ ಓಡಿಬಿಟ್ಟಿದ್ದಾರೆ. ರೈಲು ಅವರ ಮೇಲೆಯೇ ಹರಿದಿದೆ. ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರಿಗೆ ಇದು ಪಾಠವಾಗಲಿದೆ.
ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡು ಮಗನನ್ನೇ ಮದುವೆಯಾಗಿ ಆತನ ಮಗುವನ್ನು ಹೆತ್ತಳೀ ತಾಯಿ!

13 ಸಾವಿರ ಕಿ.ಮೀ ಹಾರಿಬಂದ ‘ಜೋ ಬೈಡೆನ್‌‘ ಪಾರಿವಾಳಕ್ಕೆ ಮರಣದಂಡನೆ ಭೀತಿ!

ದೈಹಿಕವಾಗಿ ಆರೋಗ್ಯವಾಗಿದ್ದರೂ ವೀರ್ಯಾಣು ನಿಲ್‌ ಎಂದು ಬಂದಿದೆ- ನನಗೆ ಮಕ್ಕಳಾಗುವುದಿಲ್ಲವೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + nine =
Remember me
