ದಾದಾಸಾಹೇಬ್ ಫಾಲ್ಕೆ, ಪದ್ಮಭೂಷಣ, ಭಾರತರತ್ನದಂಥ ಅತ್ಯುನ್ನತ ಪ್ರಶಸ್ತಿಗಳನ್ನು ಮುಡಿಲಿಗೇರಿಸಿಕೊಂಡು 92ರ ಹರೆಯಲ್ಲಿಯೂ 20ರ ಯುವತಿಯ ಕಂಠದಂತೆ ಹಾಡುತ್ತಾ ಸಂಗೀತಲೋಕದಲ್ಲಿ ಧ್ರುವತಾರೆಯಂತೆ ಮಿಂಚಿದವರು ಗಾನಕೋಗಿಲೆ ಲತಾ ಮಂಗೇಶ್ಕರ್‌.
ಶಾಸ್ತ್ರೀಯ-ಸಂಗೀತಕಾರ ಮತ್ತು ರಂಗ-ನಟ ಪಂಡಿತ್ ದೀನಾನಾಥ್ ಮಂಗೇಶ್ಕರ್ ಅವರ ಪುತ್ರಿಯಾಗಿ ಮಧ್ಯಪ್ರದೇಶದ ಇಂದೋರಿನಲ್ಲಿ 1929ರ ಸೆಪ್ಟೆಂಬರ್‌ 28ರಂದು ಜನಿಸಿದ್ದ ಲತಾ ಅವರ ಮೂಲ ಹೆಸರು ಲತಾ ಮಂಗೇಶ್ಕರ್‌. ತಂದೆ ದೀನಾನಾಥ್‌ ಅವರು ಉತ್ತಮ ನಟ, ಗಾಯಕ, ಕೃತಿಶೀಲ ಸಮಾಜಸೇವಕ. ಆದ್ದರಿಂದ ಬಾಲ್ಯದಲ್ಲಿಯೇ ಲತಾ ಅವರಿಗೆ ಸಂಗೀತದ ಒಡನಾಟ ಬೆಳೆದಿತ್ತು.
ದೀನಾನಾಥ್ ಮನೆಯಲ್ಲಿ ಕೆಲವು ಮಕ್ಕಳಿಗೆ ಸಂಗೀತ ಪಾಠ ಹೇಳುತ್ತಿದ್ದರು. ಒಂದು ದಿನ ಒಬ್ಬ ಹುಡುಗ ಸಂಗೀತಾಭ್ಯಾಸ ಮಾಡುವಾಗ ತಪ್ಪುತ್ತಿದ್ದುದನ್ನು ಲತಾ ಮಂಗೇಶ್ಕರ್‌ ಗಮನಿಸಿದ್ದರು. ಆಗಲೇ ಅವರ ತಂದೆಗೆ ತಮ್ಮ ಮಗಳಲ್ಲಿ ಸಂಗೀತದ ಪ್ರತಿಭೆ ಇರುವುದು ತಿಳಿದದ್ದು, ಮರುದಿನದಿಂದಲೇ ಅವರು ಮಗಳಿಗೆ ಮನೆಯಲ್ಲಿ ಸಂಗೀತಪಾಠ ಪ್ರಾರಂಭಿಸಿದರು.
ಅಂದಹಾಗೆ ಲತಾ ಮಂಗೇಶ್ಕರ್‌ ಅವರ ಮೂಲ ಹೆಸರು ಹೇಮಾ. ಇವರು ಆರಂಭದಲ್ಲಿ ನಾಟಕದಲ್ಲಿ ಮಿಂಚಿದವರು. ಅವರು ಮಾಡಿದ್ದ “ಭಾವ್ ಬಂಧನ್” ನಾಟಕ ಬಹಳ ಜನಪ್ರಿಯಗೊಂಡಿತು. ಅದರಲ್ಲಿ ಅವರ ಹೆಸರು ಲತಾ ಎಂದು ಇತ್ತು. ಅಲ್ಲಿಂದ ಹೇಮಾ ಜನರ ಮನದಲ್ಲಿ ಲತಾ ಆಗಿಯೇ ಉಳಿದುಬಿಟ್ಟರು. ಹೇಮಾ ಮಂಗೇಶ್ಕರ್‌ ಬದಲು ಅವರನ್ನು ಎಲ್ಲರೂ ಲತಾ ಮಂಗೇಶ್ಕರ್‌ ಎಂದೇ ಗುರುತಿಸತೊಡಗಿದರು. ಅಂದಿನಿಂದ ಹೇಮಾ, ಎಲ್ಲರ ಬಾಯಲ್ಲಿಯೂ ಲತಾ ಮಂಗೇಶ್ಕರ್‌ ಆಗಿಯೇ ಸದಾ ಮನದಾಳದಲ್ಲಿ ನೆಲೆಯೂರಿದ್ದಾರೆ.
ಬಾಲ್ಯದ ತುಂಟಾಟಲತಾ ಮಂಗೇಶ್ಕರ್‌ ಅವರಿಗೆ ಶಾಲೆ ಅಂದರೆ ಅಷ್ಟಕ್ಕಷ್ಟೇ. ಒಮ್ಮೆ ತಮ್ಮ ತಂಗಿ ಆಶಾರ ಜತೆ ಶಾಲೆಗೆ ಹೋದಾಗ ಶಿಕ್ಷಕರು ಗದರಿದರಂತೆ. ಅದೇ ಕೊನೆ. ಮುಂದೆ ಎಂದೂ ಶಾಲೆಯ ಮೆಟ್ಟಿಲು ಹತ್ತುವುದಿಲ್ಲವೆಂದು ಪಣತೊಟ್ಟುಬಿಟ್ಟಳು ಪುಟ್ಟ ಹೇಮಾ ಮಂಗೇಶ್ಕರ್‌.
ಅಷ್ಟೇ ಅಲ್ಲ. ಇವರ ಬಾಲ್ಯದ ತುಂಟಾಟಕ್ಕೆ ಎಣೆಯೇ ಇಲ್ಲವಾಗಿತ್ತು. ಒಮ್ಮೆ ಸಂದರ್ಶನದಲ್ಲಿ ಲತಾ ಮಂಗೇಶ್ಕರ್‌ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದರು. ‘ಒಮ್ಮೆ ಮನೆಯವರು ಏನನ್ನೋ ತರಲು ನನಗೆ ಕಿರಾಣಿ ಅಂಗಡಿಗೆ ಕಳಿಸಿದ್ದರು. ನನ್ನ ಬಳಿ ಒಂದು ಸವಕಲು ನಾಣ್ಯ ಇತ್ತು. ಅದನ್ನು ಅಂಗಡಿಯವನಿಗೆ ಕೊಟ್ಟು ‘ತಗೋ ನಿನ್ನ ದುಡ್ಡಿನ ಪೆಟ್ಟಿಗೆಯಲ್ಲಿ ನಾಣ್ಯ ಹಾಕುತ್ತಿದ್ದೇನೆ, ನನಗೆ ದಿನಸಿ ಕೊಡು’ ಎಂದಿದ್ದೆ. ಅದು ಸವಕಲು ನಾಣ್ಯ ಎಂದು ಅಂಗಡಿಯವನಿಗೆ ಗೊತ್ತಾದರೆ ದಿನಸಿ ಕೊಡುವುದಿಲ್ಲ ಎಂದು ಹೀಗೆ ಮಾಡಿದ್ದೆ. ಮನೆಗೆ ಬಂದು ಅಪ್ಪನ ಎದುರು ಈ ಕೆಲಸವನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದೆ. ಆದರೆ ತಂದೆ ಚೆನ್ನಾಗಿ ಬೈದರು. ನಂತರ ಅಂಗಡಿಗೆ ಹೋಗಿ ಕ್ಷಮೆ ಕೇಳಿ ಬಂದೆ’ ಎಂದಿದ್ದರು ಲತಾ.
ತಂದೆಯೇ ಅವರ ಪ್ರಥಮ ಗುರು. ನಂತರ ರಾಮಕೃಷ್ಣ ಬುವಾವಚೆ ಮತ್ತು ‘ಉಸ್ತಾದ್ ಅಮಾನತ್ ಖಾನ್’ ಅವರ ಬಳಿ ಸಂಗೀತ ಶಿಕ್ಷಣ ಪಡೆದರು. ತಂದೆ 41ನೇ ವಯಸ್ಸಿನಲ್ಲಿ ತೀರಿಕೊಂಡರು. ಆಗ ಲತಾಗೆ ಇನ್ನೂ 13 ವರ್ಷ. ತಾಯಿ, ನಾಲ್ಕು ಜನ ತಂಗಿಯರು, ಒಬ್ಬ ತಮ್ಮ, ಇವರನ್ನು ನೋಡಿಕೊಳ್ಳಬೇಕಾಗಿ ಬಂದದ್ದು ಲತಾರಿಗೆ. ಅವರು ಮರಾಠಿ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದರು. ನಂತರ ಹಿನ್ನೆಲೆ ಗಾಯಕಿಯಾದರು. ಆರಂಭದಲ್ಲಿ ಅವರಿಗೆ ಆದದ್ದು ಸೋಲೇ. ನಂತರ ಛಲ ಬಡಿದ ತ್ರಿವಿಕ್ರಮನಂತೆ ಬಂದ ಎಲ್ಲಾ ಸವಾಲುಗಳನ್ನು ಎದುರಿಸಿ ಜನಮಾನಸದಲ್ಲಿ ಸದಾ ನೆನಪಿಡುವ ಗಾಯಕಿಯಾದರು ಲತಾ.
BREAKING: ಸಂಗೀತ ಲೋಕದಲ್ಲಿ ಲೀನರಾದ ಗಾನಕೋಗಿಲೆ ಲತಾ ಮಂಗೇಶ್ಕರ್‌

VIDEO: ಉ.ಪ್ರದೇಶದಲ್ಲಿ ರೋಡ್‌ಷೋ ನಿಲ್ಲಿಸಿ ಮುಗುಳು ನಕ್ಕ ಪ್ರಿಯಾಂಕಾ ಬಿಜೆಪಿ ಕಾರ್ಯಕರ್ತರಿಗೆ ನೀಡಿದರು ಸರ್‌ಪ್ರೈಸ್‌!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × five =
Remember me
