ಚೆನ್ನೈ(ತಮಿಳುನಾಡು):ತಮಿಳುನಾಡಿನಲ್ಲಿ ಭಾರಿ ಪ್ರಸಿದ್ಧಿ ಪಡೆದಿರುವ ಕೋಳಿ ಕಾಳಗಕ್ಕೆ ಇಲ್ಲಿಯ ಕೋರ್ಟ್‌ ಕೊನೆಗೂ ಅನುಮತಿ ನೀಡಿದೆ. ಥೇಣಿ ಜಿಲ್ಲೆಯ ಉತ್ತಮಪಾಲೈಯಂ ಗ್ರಾಮದಲ್ಲಿ ಇದೇ 17ರಂದು ಈ ಕಾಳಗ ನಡೆಯಲಿದ್ದು, ಇದರ ವಿವಾದ ಹೈಕೋರ್ಟ್‌ ಮೆಟ್ಟಿಲೇರಿತ್ತು.
ಪೊಂಗಲ್ ಹಬ್ಬದ ಹಿನ್ನೆಲೆಯಲ್ಲಿ ಪ್ರತಿವರ್ಷ ಇಂಥದ್ದೊಂದು ಕಾಳಗವನ್ನು ತಮಿಳುನಾಡು ಮಾತ್ರವಲ್ಲದೇ ಕರ್ನಾಟಕದಲ್ಲಿಯೂ ಹಲವೆಡೆ ನಡೆಸಲಾಗುತ್ತದೆ. ಆದರೆ ತಮಿಳುನಾಡಿನ ಥೇಣಿ ಜಿಲ್ಲೆಯ ಉತ್ತಮಪಾಳ್ಯದಲ್ಲಿ ಹುಂಜಗಳ ಕಾಲಿಗೆ ಬ್ಲೇಡ್‌ಗಳನ್ನು ಕಟ್ಟಿ ಭಾರಿ ಉತ್ಸಾಹದಿಂದ ಈ ಕಾಳಗವನ್ನು ನಡೆಸಲಾಗುತ್ತದೆ. ಆದರೆ ಇದು ಪಕ್ಷಿಗಳ ಕಾಲಿಗೆ ಬ್ಲೇಡುಗಳನ್ನು ಕಟ್ಟುವುದು ಹೀನಾಯವಾದದ್ದು ಎಂದು ಕೆಲವರು ಹೈಕೋರ್ಟ್‌ ಮೊರೆ ಹೋಗಿದ್ದರು.
ಆದರೆ ಎಲ್ಲಾ ರೀತಿಯ ಎಚ್ಚರಿಕೆಗಳನ್ನು ತೆಗೆದುಕೊಂಡು ಹಾಗೂ ಕಾನೂನಿನ ಅನ್ವಯ ಕೋಳಿ ಕಾಳಗ ನಡೆಸುವುದಾಗಿ ಆಯೋಜಕರು ಹೇಳಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಜಿ.ಆರ್.ಸ್ವಾಮಿನಾಥನ್, ಕೋಳಿ ಕಾಳಗದ ಸಂದರ್ಭದಲ್ಲಿ ಹುಂಜಗಳ ಕಾಲಿಗೆ ಬ್ಲೇಡ್ ಅಥವಾ ಚಾಕುಗಳನ್ನು ಕಟ್ಟಬಾರದು. ಕಾದಾಡುತ್ತಿದ್ದ ಕೋಳಿಗಳು ಜೀವಂತವಾಗಿರಬೇಕು ಎಂದು ಸೂಚಿಸಿ ಕಾಳಗ ನಡೆಸಲು ಅನುಮತಿ ನೀಡಿದರು.
ಲುಡೋ ಆಡುವಾಗ ಗಾಳ ಹಾಕಿದ ಪಾಕ್‌ ಯುವಕ: ಪ್ರಿಯಕರನ ಸಿಗಲು ಮಗುವನ್ನೂ ಬಿಟ್ಟುಹೋಗಿ ಸಿಕ್ಕಿಬಿದ್ದ ಅಮ್ಮ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 6 =
Remember me
