ಆಲಪ್ಪುಳ (ಕೇರಳ):ಈ ಕೋಳಿಯ ಹೆಸರು ಚಿನ್ನು. ಆಲಪ್ಪುಳ ಜಿಲ್ಲೆಯ ದಕ್ಷಿಣ ಪಂಚಾಯತ್​ನ ಚೆರ್ಕಟ್ಟಿಲ್ ಹೌಸ್​ನ ಸಿ.ಎನ್ ಬಿಜುಕುಮಾರ್ ಎನ್ನುವವರು ಸಾಕಿರುವ ಈ ಚಿನ್ನು ಈಗ ಭಾರಿ ಫೇಮಸ್ಸು. ರಾತ್ರೋರಾತ್ರಿ ಜಾಲತಾಣದ ಸ್ಟಾರ್​ ಈ ಕೋಳಿ|
ಭಾನುವಾರ ಬೆಳಗ್ಗೆ 8.30 ರಿಂದ ಮಧ್ಯಾಹ್ನ 2.30 ರ ನಡುವೆ 24 ಮೊಟ್ಟೆಗಳನ್ನು ಇಟ್ಟಿದ್ದೇ ಇದರ ಸಾಧನೆ. ಇದರ ಅರ್ಥ ಆರು ತಾಸು ಇದು ಮೊಟ್ಟೆಗಳನ್ನು ಇಡುತ್ತಾ ಹೋಗಿದೆ. ಪಶುವೈದ್ಯಕೀಯ ತಜ್ಞರು ಕೂಡ ಈ ಸುದ್ದಿ ಕೇಳಿ ಶಾಕ್​ ಆಗಿದ್ದಾರೆ. ಇಷ್ಟು ಸುದೀರ್ಘವಾಗಿ ಮೊಟ್ಟೆ ಇಟ್ಟಿರುವುದು ಕೋಳಿ ಬಹುಶಃ ಇದೇ ಮೊದಲು ಆಗಿರಬಹುದು. ಇದು ದಾಖಲೆ ಪುಟ ಸೇರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಜತೆಗೆ ಈ ಬಗ್ಗೆ ಅವರು ಅಧ್ಯಯನದಲ್ಲಿ ತೊಡಗಿದ್ದಾರೆ.
ಈ ಕೋಳಿ ಬಿವಿ380 ಎಂಬ ಹೈಬ್ರಿಡ್ ತಳಿಯದ್ದು. ಇದು ಮೊಟ್ಟೆ ಇಡುವ ಮೊದಲು ಏನು ಮಾಡಿತ್ತೆಂದು ವಿವರಿಸುವ ಬಿಜು ಅವರು, ಭಾನುವಾರ ಬೆಳಗ್ಗೆ ಚಿನ್ನು ಕುಂಟತೊಡಗಿತು. ಕಾಲಿಗೆ ಏನೋ ಆಗಿರಬೇಕು ಎಂದುಕೊಂಡು ಎಣ್ಣೆ ಹಚ್ಚಿದೆ. ಅಷ್ಟರಲ್ಲಿಯೇ ಅದು ಮೊಟ್ಟೆಗಳನ್ನು ಇಡಲು ಪ್ರಾರಂಭಿಸಿದೆ. ಎಷ್ಟು ಹೊತ್ತಾದರೂ ಮೊಟ್ಟೆ ಇಡುವುದನ್ನು ನಿಲ್ಲಿಸುತ್ತಲೆ ಇಲ್ಲ. ವಿಚಿತ್ರ ಎನಿಸಿ ಅಕ್ಕಪಕ್ಕದವರಿಗೆ ವಿಷಯ ತಿಳಿಸಿದೆವು. ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ನಮ್ಮ ಏರಿಯಾದವರೆಲ್ಲಾ ಬರಲು ಶುರು ಮಾಡಿದರು ಎಂದು ಬಿಜು ಹೆಮ್ಮೆಯಿಂದ ನುಡಿಯುತ್ತಾರೆ.
ಏಳು ತಿಂಗಳ ಹಿಂದೆ ಬ್ಯಾಂಕ್ ಸಾಲ ಪಡೆದು ಒಟ್ಟು 23 ಕೋಳಿಗಳನ್ನು ಖರೀದಿ ಮಾಡಿದ್ದೆವು. ಎಲ್ಲದ್ದಕ್ಕೂ ಹೆಸರು ಇಟ್ಟಿದ್ದೆವು. ಖರೀದಿ ಮಾಡುವಾಗ ಚಿನ್ನು ಕೋಳಿ ಇನ್ನೂ 8 ತಿಂಗಳದ್ದಾಗಿತ್ತು ಎನ್ನುತ್ತಾರೆ ಅವರು, ಮರಿಕೋಳಿ ಆಗಿತ್ತಂತೆ.
ಕಿಮ್ಸ್​ನಿಂದ ಮಗು ನಾಪತ್ತೆ ಕೇಸ್​ಗೆ ಟ್ವಿಸ್ಟ್​! ಪೊಲೀಸರಿಗೂ ಸಿಕ್ಕಿಲ್ಲ, ಸಿಸಿಟಿವಿಯೂ ಕಾಣಿಸಿಲ್ಲ- ದಿಢೀರ್​ ಪ್ರತ್ಯಕ್ಷ

ನಟ ಸಿದ್ಧಾಂತ್​​ಗೆ ಬೇಲ್​- ಡ್ರಗ್ಸ್​ ಕೇಸ್​ನಲ್ಲಿ ಹಿಂದೆಯೂ ಸಿಲುಕಿದ್ದ ಅಣ್ಣ-ತಂಗಿ: ಅಪ್ಪ ಶಕ್ತಿ ಕಪೂರ್​ ಹೇಳಿದ್ದೇನು?

ಎಂಟು ಐಷಾರಾಮಿ ಕಾರುಗಳನ್ನು ಖರೀದಿಸಿದ ನಟ ಪವನ್​ ಕಲ್ಯಾಣ್​- ಇದರ ಹಿಂದಿನ ರಹಸ್ಯವೇನು ಗೊತ್ತಾ?

VIDEO: ಕಾಳಿಯಮ್ಮ ಉತ್ಸವದಲ್ಲಿ ಭಕ್ತರ ಮೇಲೆ ಉರುಳಿದ ರಥ: ಇಬ್ಬರ ಸಾವು, ಮೂವರ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + four =
Remember me
