ತಿರುವನಂತಪುರ ​(ಕೇರಳ):ಬಸ್‌ಗಳಲ್ಲಿ ಸಂಚರಿಸುವಾಗ ಮಹಿಳೆಯರ ಅಂಗಾಂಗಗಳನ್ನು ಮುಟ್ಟಿ ಖುಷಿ ಪಡುವ ಕಾಮುಕರು ದಿನನಿತ್ಯವೂ ಕಾಣಸಿಗುತ್ತಾರೆ. ಎಷ್ಟೇ ತೊಂದರೆ, ಮುಜುಗರವಾದರೂ ಹೆಚ್ಚಿನ ಮಹಿಳೆಯರು ನಮಗೇಕೆ ಸಹವಾಸ ಎಂದುಕೊಂಡು ಸುಮ್ಮನಾಗಿಬಿಡುತ್ತಾರೆ. ಆದರೆ ಕೇರಳದ ಕೋಯಿಕ್ಕೋಡಿನ ಮಹಿಳೆಯೊಬ್ಬರು ಹಾಗೆ ಮಾಡದೇ ಅದನ್ನು ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿದ್ದು ಇದೀಗ ಆರೋಪಿ ಜತೆ ಕಂಡಕ್ಟರ್‌ಗೂ ಗ್ರಹಚಾರ ಬಂದಿದೆ.
ಆಗಿದ್ದೇನೆಂದರೆ, ಕೋಯಿಕ್ಕೋಡ್‌ಗೆ ತೆರಳುತ್ತಿದ್ದ ಕೇರಳದ ಕೆಎಸ್​​ಆರ್​ಟಿಸಿ ಬಸ್​​ನಲ್ಲಿ ಶನಿವಾರ ರಾತ್ರಿ ಸಂಚರಿಸುತ್ತಿದ್ದಾಗ ಶಿಕ್ಷಕಿಯೊಬ್ಬರಿಗೆ ಸಹ ಪ್ರಯಾಣಿಕ ಕಿರುಕುಳ ಕೊಟ್ಟಿದ್ದಾನೆ. ಶಿಕ್ಷಕಿ ಅದನ್ನು ಪ್ರತಿಭಟಿಸಿದ್ದಾರೆ. ಆದರೂ ಆತ ಕಿರುಕುಳ ಮುಂದುವರೆಸಿದ್ದಾನೆ. ಇದನ್ನು ಶಿಕ್ಷಕಿ ಕಂಡಕ್ಟರ್‌ ಗಮನಕ್ಕೆ ತಂದರೂ ಅವರು ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸದೇ ಸುಮ್ಮನಿದ್ದಾರೆ.
ಇದರಿಂದ ಕೆರಳಿದ ಶಿಕ್ಷಕಿ ಈ ಸಂಪೂರ್ಣ ಘಟನೆಯನ್ನು ವಿಡಿಯೋ ಮಾಡಿಕೊಂಡು, ನಡೆದದ್ದನ್ನೆಲ್ಲವನ್ನೂ ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ. ಸಾರಿಗೆ ಸಚಿವರಿಗೂ ಟ್ಯಾಗ್‌ ಮಾಡಿದ್ದಾರೆ. ವಿಡಿಯೋ ಮಾಡುತ್ತಿದ್ದುದು ತಿಳಿಯುತ್ತಿದ್ದಂತೆಯೇ ಕಾಮುಕ ಕ್ಷಮೆಯನ್ನೂ ಕೋರಿದ್ದಾನೆ, ಅದನ್ನೂ ಅವರು ಬರೆದುಕೊಂಡಿದ್ದಾರೆ.
ಈ ಫೇಸ್‌ಬುಕ್‌ ವಿಡಿಯೋ ಸಾರಿಗೆ ಸಚಿವ ಆಂಟನಿ ರಾಜು ಅವರ ಗಮನಕ್ಕೆ ಬರುತ್ತಿದ್ದಂತೆಯೇ ಅವರು ಸಿಟ್ಟಾಗಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ. ಬಸ್​ನಲ್ಲಿ ಮಹಿಳೆಯೊಂದಿಗೆ ನಡೆದ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು. ಆರೋಪಿ ವಿರುದ್ಧ ಕ್ರಮ ಜರುಗಿಸಲಾಗುವುದು. ಜತೆಗೆ ಈ ಘಟನೆಯಲ್ಲಿ ಕಂಡಕ್ಟರ್​​ ತಪ್ಪು ಅಥವಾ ಬೇಜವಾಬ್ದಾರಿ ಕಂಡು ಬಂದರೂ ಆತನ ವಿರುದ್ಧವೂ ಸೂಕ್ತ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ತೃತೀಯ ಲಿಂಗಿ ಮಗಳಿಗೆ ‘ಮುಟ್ಟಿನ ಸಂಭ್ರಮ’ ಮಾಡಿದ ಅಮ್ಮ: ಕಣ್ತುಂಬಿ ಬರುವ ಘಟನೆಯಿದು… ಶ್ಲಾಘನೆಗಳ ಮಹಾಪೂರ

ಯುದ್ಧದ ನಡುವೆಯೇ ಭಾರತೀಯನ ಹೃದಯ ಕದ್ದ ರಷಿಯನ್‌ ಬೆಡಗಿ… ಫೋಟೋ ಕ್ಲಿಕ್ಕಿಸುತ್ತಲೇ ಶುರುವಾಯ್ತು ಲವ್‌…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 6 =
Remember me
