ಮುಂಬೈ:ಈಗಾಗಲೇ ಟಾಟಾ ಮೋಟಾರ್ಸ್‌, ಮಾರುತಿ ಸುಜುಕಿ, ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್ಸ್‌ ಸೇರಿದಂತೆ ಹಲವು ಕಾರು ತಯಾರಿಕಾ ಕಂಪನಿಗಳು ದರ ಏರಿಕೆ ಮಾಡಿವೆ. ಇದೀಗ ದ್ವಿಚಕ್ರ ವಾಹನ ತಯಾರಕರೂ ದರ ಏರಿಕೆ ಆರಂಭಿಸಿದ್ದಾರೆ.
ಭಾರತದಲ್ಲಿ ಅತಿ ದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿ ಎಂದು ಹೆಸರಿಸಲಾಗಿರುವ ಹೀರೋ ಮೋಟೋಕಾರ್ಪ್ ತನ್ನ ಎಲ್ಲಾ ಉತ್ಪನ್ನಗಳ ಬೆಲೆಯನ್ನು ಜುಲೈ 1ರಿಂದ ಹೆಚ್ಚಿಸುವುದಾಗಿ ಘೋಷಿಸಿದೆ. ಹೀರೋ ಮೋಟೋಕಾರ್ಪ್ ಕಂಪೆನಿಯ ಎಲ್ಲಾ ಶ್ರೇಣಿಯ ಮೋಟಾರ್ ಬೈಕ್‌ಗಳು ಮತ್ತು ಸ್ಕೂಟರ್‌ಗಳ ಬೆಲೆ ರೂ. 3,000ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದೆ. ಏರುತ್ತಿರುವ ವಸ್ತುಗಳ ಬೆಲೆಯ ಪರಿಣಾಮವನ್ನು ಸರಿದೂಗಿಸಲು ಉತ್ಪನ್ನದ ಬೆಲೆಗಳನ್ನು ಏರಿಸುತ್ತಿರುವುದಾಗಿ ಕಂಪೆನಿ ಹೇಳಿದೆ.
ಇದಾಗಲೇ ಕಳೆದ ಏಪ್ರಿಲ್​ನಲ್ಲಿಯೂ ಒಮ್ಮೆ ದರ ಏರಿಕೆಯಾಗಿತ್ತು. ಹೊಸ ಬೆಲೆಗಳು ಏಪ್ರಿಲ್ 5 ರಿಂದ ಜಾರಿಗೆ ಬಂದಿವೆ. ಮೊದಲು ಇದ್ದ ಬೆಲೆಗಿಂತ ಎರಡು ಸಾವಿರ ರೂಪಾಯಿ ಹೆಚ್ಚು ಬೆಲೆ ಏರಿಕೆಯಾಗಿತ್ತು.
ಹೀರೋ ಸಂಸ್ಥೆಯು ಪ್ರಸ್ತುತ 14 ವಿವಿಧ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಇದರಲ್ಲಿ ಹೀರೋ ಎಚ್ಎಫ್ ಡಿಲಕ್ಸ್ ಬೈಕ್ ರೂ. 52,260 ಬೆಲೆ ಹೊಂದಿದ್ದರೆ ಹೀರೋ ಎಕ್ಸ್​ಪಲ್ಸ್​ 200 4ವಿ ಬೈಕ್ ರೂ. 1,32,431 ಬೆಲೆ ಇದೆ. ಈಗ ಎಲ್ಲವುಗಳ ಬೆಲೆಯಲ್ಲಿ ಏರಿಕೆಯಾಗಲಿದೆ.
ಹೀರೋ ಮೋಟೋಕಾರ್ಪ್​ ಕಳೆದ ಏಪ್ರಿಲ್‌ನಲ್ಲಿ 418,622 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಮೇ ತಿಂಗಳಿನಲ್ಲಿ 4,86,704 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಅಂದರೆ ಒಂದು ತಿಂಗಳಲ್ಲಿ ಮಾರಾಟವು 16 ಪ್ರತಿಶತದಷ್ಟು ಬೆಳೆದಿದೆ. 2021ರ ಇದೇ ಅವಧಿಯಲ್ಲಿ ಕಂಪೆನಿಯು ಕೇವಲ 1,83,044 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಕೋವಿಡ್-19 ಪ್ರಕರಣಗಳ ಹೆಚ್ಚಳ ಮತ್ತು ಆ ಸಮಯದಲ್ಲಿ ಮಾರಾಟದ ಮೇಲೆ ಲಾಕ್‌ಡೌನ್‌ಗಳ ಪರಿಣಾಮ ಬೀರಿತ್ತು.
ಬಂದೂಕು ತೋರಿದವರಿಗೂ ಬಾಗಿಲು ತೆರೆದ ಭಾರತ! ಸಹಾಯ ಮಾಡುವವರಿಲ್ಲದೇ ತತ್ತರಿಸಿದ ಅಫ್ಘನ್ನರ ಕಣ್ಣೀರು ಒರೆಸಿದ ಸೇನೆ

VIDEO: ಒಳಗೆ ಸೇರಿದರೆ ಗುಂಡು… ರಸ್ತೆ ಮಧ್ಯೆ ಫುಲ್​ ಟೈಟ್​- ಪೊಲೀಸರೂ ಸುಸ್ತು, ಕ್ಯಾಬ್​ ಚಾಲಕನೂ ಬೇಸ್ತು- ವಿಡಿಯೋ ವೈರಲ್

ಸೋನಿಯಾ, ಮಮತಾ, ಶರದ್​ ಪವಾರ್​ಗೆ ಕರೆ ಮಾಡಿದ ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು

‘ತಿಥಿ’ ನಟಿಗೆ ಕಂಕಣ ಭಾಗ್ಯ: ರಾಣೆಬೆನ್ನೂರಿನಲ್ಲಿ ಸದ್ದಿಲ್ಲದೇ ಟೆಕ್ಕಿಯ ಜತೆ ಎಂಗೇಜ್​ಮೆಂಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
