ಹೈದರಾಬಾದ್:ಹೈದರಾಬಾದ್ ಹೊರ ವಲಯದ ಮಂಚಿರೇವಾ ಪ್ರದೇಶದಲ್ಲಿ ಇಸ್ಪೀಟ್ ಅಡ್ಡೆ ನಡೆಸುತ್ತಿದ್ದ ಆರೋಪದ ಮೇರೆಗೆ ಟಾಲಿವುಡ್‌ನ ಸುಪ್ರಸಿದ್ಧ ನಟ ನಾಗಶೌರ್ಯ ಅವರ ತಂದೆಯನ್ನು ಬಂಧಿಸಲಾಗಿದೆ.
ಈ ಭಾಗದಲ್ಲಿ ಇಸ್ಪಿಟ್‌ ಜೂಜು ಭಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅದರ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ನಿನ್ನೆ ದಾಳಿ ಮಾಡಿದ್ದಾರೆ. ಎರಡು ವಾರಗಳ ಹಿಂದೆ ಹೈದರಾಬಾದ್​ನ ಹೊರ ವಲಯದಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ವರದಿ ಆಗಿತ್ತು. ಆಗ ದಾಳಿ ಮಾಡಿದ್ದ ಪೊಲೀಸರು ಕೆಲವರನ್ನು ಬಂಧಿಸಿದ್ದರು. ಈ ಪ್ರಕರಣದ ಆಳಕ್ಕೆ ಹೋದಾಗ ಈ ಫಾರ್ಮ್​ ಹೌಸ್​ ನಟ ನಾಗಶೌರ್ಯ ತಂದೆ ಶಿವಲಿಂಗ ಪ್ರಸಾದ್​ಗೆ ಸೇರಿದ್ದು ಎಂಬುದು ತಿಳಿದು ಬಂದಿದೆ. ಈ ಅಕ್ರಮ ಚಟುವಟಿಕೆ ಹಿಂದೆ ಅವರ ಪಾತ್ರ ಕೂಡ ಇರುವ ಬಗ್ಗೆ ಅನುಮಾನ ಬಂದ ನಂತರದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರು ಕ್ಯಾಸಿನೊ ಕಿಂಗ್‍ಪಿನ್ ಗುಟ್ಟಾ ಸುಮನ್ ಜೊತೆ ಇಸ್ಪೀಟ್ ಆಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಸ್ಪೀಟ್ ಅಡ್ಡೆ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಪಿಡಿ ಕಾಯ್ದೆಯಡಿ (ಅಪಾಯಕಾರಿ ಚಟುವಟಿಕೆಗಳ ನಿಯಂತ್ರಣ ಕಾಯ್ದೆ) ಕೇಸ್ ದಾಖಲಾಗಿದ್ದು ತೆಲಂಗಾಣ ಅಪರಾಧ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಎನ್ನಲಾಗಿದೆ. ಇದಾಗಲೇ ಈ ಪ್ರಕರಣದಲ್ಲಿ ಸುಮಾರು 30 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರೂ ಗಣ್ಯ ವ್ಯಕ್ತಿಗಳಾಗಿದ್ದು, ಜೂಜಿನ ಜತೆ ಮದ್ಯಸೇವನೆ, ಭೋಜನ ಕೂಟ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ ಶಿವಲಿಂಗ ಪ್ರಸಾದ್ ಅವರನ್ನು ಹೈದರಾಬಾದ್‌ನ ಉಪ್ಪಾರಪಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇವರ ವಿರುದ್ಧ ಇದಾಗಲೇ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಸದ್ಯ ಅವರಿಗೆ ಕೋರ್ಟ್‌ ಜಾಮೀನು ನೀಡಿದೆ.
‘ಬದುಕು ಸಿನಿಮಾ ಅನ್ನೋದು ಎಷ್ಟು ನಿಜವಾಗೋಯ್ತು! ಪುನೀತ್‌ ನನ್ನ ಜೀವನದಲ್ಲಿ ಮೂರು ಪಾತ್ರ ವಹಿಸಿದ್ದಾರೆ…’

ಅಯ್ಯೋ… ನನ್ನ ಹೊಟ್ಟೆಯಲ್ಲೇ ಹುಟ್ಟಿದ್ರೂ ಈ ಮಗು ನನ್ನದಲ್ಲ…. ಕೋರ್ಟ್‌ಗೆ ಧಾವಿಸಿದ ಮಹಿಳೆ: ಮುಂದಾದದ್ದೇ ರೋಚಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
