ಜೈಪುರ:ಸುಮಾರು 15 ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ ಸತತವಾಗಿ ಒಂಬತ್ತು ದಿನಗಳವರೆಗೆ ಸಾಮೂಹಿಕ ಅತ್ಯಾಚಾರ ಎಸಗಿ ಅಟ್ಟಹಾಸ ಮೆರೆದಿದ್ದ 13 ಮಂದಿ ಕಾಮುಕರಿಗೆ ತಲಾ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ರಾಜಸ್ಥಾನದ ಜೈಪುರ ಕೋರ್ಟ್‌ ಆದೇಶಿಸಿದೆ.
ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಕಾಮುಕ ಬಾಲಕರು ಸ್ಥಳೀಯ ಬಾಲ ನ್ಯಾಯ ಮಂಡಳಿಯಲ್ಲಿ ಪ್ರತ್ಯೇಕವಾಗಿ ಪ್ರಕರಣದ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. 20 ವರ್ಷಗಳ ಜೈಲು ಶಿಕ್ಷೆಗೆ ಒಳಗಾದವರಿಗೆ ತಲಾ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಕಳೆದ ಮಾರ್ಚ್ 6 ರಂದು ಸುಕೇಶ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಭಯಾನಕ ಘಟನೆ ನಡೆದಿತ್ತು. ಕೋಟಾದ ನಿವಾಸಿಯಾಗಿದ್ದ ಬಾಲಕಿಯನ್ನು ಬುಲ್ಬುಲ್ ಅಲಿಯಾಸ್ ಪೂಜಾ ಜೈನ್ ಬ್ಯಾಗ್‌ ಕೊಡಿಸುವುದಾಗಿ ಕರೆದುಕೊಂಡು ಹೋಗಿದ್ದಳು. ನಂತರ ಆಕೆಯನ್ನು ಕೂಡಿಹಾಕಿದ್ದಳು. ಅಲ್ಲಿ ಬಾಲಕಿ ಮೇಲೆ ದಿನವೂ ಅತ್ಯಾಚಾರ ನಡೆಯುತ್ತಿತ್ತು. ಸತತ 9 ದಿನಗಳವರೆಗೆ ಕೊಠಡಿಯಲ್ಲಿ ಬಾಲಕಿಯನ್ನು ಕೂಡಿಹಾಕಲಾಗಿತ್ತು. ನಾಲ್ವರು ಬಾಲಕರು ಸೇರಿದಂತೆ 17 ಮಂದಿ ಆಕೆಯ ಮೇಲೆ ಅತ್ಯಾಚಾರ ನಡೆಸುತ್ತಿದ್ದರು.
ಅಲ್ಲಿಂದ ಬಾಲಕಿ ಹೇಗೋ ತಪ್ಪಿಸಿಕೊಂಡು ಬಂದಿದ್ದಳು. ಆಕೆಯ ಪಾಲಕರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ತನಿಖೆ ನಡೆಸಿದ್ದ ಪೊಲೀಸರು ಮೇ 7 ರಂದು ನ್ಯಾಯಾಲಯಕ್ಕೆ 1750 ಪುಟಗಳ ಚಾರ್ಜ್ ಶೀಟ್ ಅನ್ನು ಸಲ್ಲಿಸಿದರು. ಇದರ ಆಧಾರದ ಮೇಲೆ ಈಗ ಶಿಕ್ಷೆ ವಿಧಿಸಲಾಗಿದೆ.
ಈ ಪ್ರಕರಣದಲ್ಲಿ ಪ್ರಮುಖ ಭಾಗಿದಾರಳಾಗಿದ್ದ ಬುಲ್ಬುಲ್ ಅಲಿಯಾಸ್ ಪೂಜಾ ಜೈನ್‌ಗೆ ನಾಲ್ಕು ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ. ಅತ್ಯಾಚಾರಕ್ಕೆ ಸಹಾಯ ಮಾಡಿದ ಮಹಿಳೆಯ ವಿರುದ್ಧವೂ ಕ್ರಮವನ್ನು ತೆಗೆದುಕೊಳ್ಳಲಾಗಿದ್ದು, ಆಕೆಗೆ 4 ವರ್ಷಗಳ ಕಠಿಣ ಶಿಕ್ಷೆ ಜತೆಗೆ 7 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಮಾಲ್‌ಗೆ ಬೆಂಕಿ: ಷಾಪಿಂಗ್‌ ಮಾಡುತ್ತಿದ್ದ 27 ಮಂದಿ ಸಜೀವ ದಹನ- ಹಲವರ ಸ್ಥಿತಿ ಚಿಂತಾಜನಕ

VIDEO: ಏಟಿಗೆ ತಿರುಗೇಟು ನೀಡಿದ ದಲಿತ ಕುಟುಂಬ! ಕುದುರೆ ನೀಡದ ಗ್ರಾಮಸ್ಥರೇ ಕಣ್ ಕಣ್‌ ಬಿಡುವಂತೆ ಮಾಡಿದ ವರನ ಅಮ್ಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − two =
Remember me
