ಛತ್ತೀಸಗಢ:ಪತ್ನಿ ಮತ್ತು ಪತಿಯ ನಡುವೆ ಲೈಂಗಿಕ ಕ್ರಿಯೆ ನಡೆಯುವುದು ಸಹಜ. ಆದ್ದರಿಂದ ಪತಿ ತನ್ನ ಪತ್ನಿಯ ಮೇಲೆ ಬಲವಂತದ ಪ್ರಯೋಗ ಮಾಡಿ ಲೈಂಗಿಕ ಕ್ರಿಯೆ ನಡೆಸಿದರೂ ಅದು ಅಪರಾಧ ಅಲ್ಲ ಎಂದು ಛತ್ತೀಸಗಢ ಹೈಕೋರ್ಟ್‌ ಹೇಳಿದೆ.
ಮದುವೆಯಾದ ನಂತರ ಗಂಡ ತನ್ನ ಹೆಂಡತಿಯ ಇಚ್ಛೆಯ ವಿರುದ್ಧವಾಗಿ, ಬಲವಂತವಾಗಿ ಸೆಕ್ಸ್​​ ಮಾಡಿದರೆ ಅದು ಅತ್ಯಾಚಾರವೆಸಿಕೊಳ್ಳುವುದಿಲ್ಲ ಎನ್ನುವ ಮೂಲಕ ಪತಿಯೊಬ್ಬನನ್ನು ಬಿಡುಗಡೆ ಮಾಡಿದೆ ಹೈಕೋರ್ಟ್‌. ಪತ್ನಿ 18 ವರ್ಷ ಮೇಲ್ಪಟ್ಟಿದ್ದರೆ ಆಕೆಯೊಂದಿಗೆ ಪತಿ ನಡೆಸುವ ಬಲವಂತದ ಸಂಭೋಗ ರೇಪ್‌ ಎನಿಸುವುದಿಲ್ಲ. ಎನ್ನುವ ಮೂಲಕ ಪತಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್‌ ವಜಾ ಮಾಡಿದೆ.
ಮದುವೆಯಾದ ನಂತರ ಗಂಡ ತನ್ನ ಮೇಲೆ ಬಲವಂತದ ಪ್ರಯೋಗ ಮಾಡತೊಡಗಿದ. ಅಸಹಜ ಎನ್ನುವಂಥ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದ. ಇದಕ್ಕೆ ನಾನು ಒಪ್ಪದಿದ್ದರೂ ಬಲವಂತ ಮಾಡತೊಡಗಿದ. ಇದರಿಂದ ನಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿಹೋಗಿದ್ದೇನೆ ಎಂದು ಪತ್ನಿಯೊಬ್ಬರು ದೂರಿದ್ದರು. ಇದರ ಆಧಾರದ ಮೇಲೆ ಪತಿಯನ್ನು ಬಂಧಿಸಲಾಗಿತ್ತು.
ತನಗೆ ಜಾಮೀನು ನೀಡುವಂತೆ ಕೋರಿ ಆತ ಹೈಕೋರ್ಟ್‌ ಮೊರೆ ಹೋಗಿದ್ದ. ಆಗ ಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಬಲವಂತದ ಸೆಕ್ಸ್‌ ಎನ್ನಲಾಗದು ಎಂದು ಹೇಳಿದರೂ ಅಸಹಜ ಲೈಂಗಿಕ ಕ್ರಿಯೆ ನಡೆಸುವುದು ಸರಿಯಲ್ಲ ಎಂದಿದೆ.
ವೋಟಿಗಾಗಿ ಹಿಂದೂನನ್ನು ಮದ್ವೆಯಾಗಿ, ಡಿವೋರ್ಸ್‌ ಬಳಿಕ ಗರ್ಭಿಣಿಯಾಗಿ ಕನ್‌ಫ್ಯೂಸ್‌ ಆಗಿದ್ದ ಸಂಸದೆಗೆ ಗಂಡುಮಗು!

VIDEO: ಜೈಲಿನೊಳಗೇ ರೌಡಿಗಳ ಸ್ವರ್ಗ ಸುಖ… ಗುಂಡು… ತುಂಡು… ಮೋಜು, ಮಸ್ತಿ ವಿಡಿಯೋ ವೈರಲ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
