ಕೊಚ್ಚಿ:ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇರುವ ಕಾನೂನಿನ ಕುರಿತು ವಿವರಣೆ ನೀಡಿರುವ ಕೇರಳ ಹೈಕೋರ್ಟ್​, ಸಂತ್ರಸ್ತೆಯೊಂದಿಗೆ ಆರೋಪಿ ಸಂಭೋಗ ನಡೆಸಿದರಷ್ಟೇ ಅತ್ಯಾಚಾರ ಎನ್ನಿಸಿಕೊಳ್ಳುವುದಿಲ್ಲ. ಬದಲಿಗೆ ಪುರುಷ ತನ್ನ ಖಾಸಗಿ ಅಂಗವನ್ನು ಆಕೆಯ ತೊಡೆಗಳ ಸಂಧಿಯಲ್ಲಿ ತಾಗಿಸಿ ಉಜ್ಜುವ ಮೂಲಕ ನಡೆಸುವ ಲೈಂಗಿಕ ಕ್ರಿಯೆಯೂ ಅತ್ಯಾಚಾರವೇ ಆಗಿರುತ್ತದೆ ಎಂದು ತಿಳಿಸಿದೆ.
ಅತ್ಯಾಚಾರ ಎಸಗಲಿಲ್ಲ, ಬದಲಿಗೆ ಬದಲಾಗಿ ಎರಡೂ ಕಾಲುಗಳನ್ನು ಒಟ್ಟಾಗಿಸಿ, ತೊಡೆಗಳ ಸಂಧಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ದೆ ಎಂದಿರುವ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಕೋರ್ಟ್​, ಇದು ಕೂಡ ಅತ್ಯಾಚಾರವೇ ಎಂದು ಹೇಳಿದೆ.
ಅಪ್ರಾಪ್ತೆ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಆರೋಪವನ್ನು ಕೇರಳದ ಯುವಕನೊಬ್ಬ ಎದುರಿಸುತ್ತಿದ್ದ. ಆತನಿಗೆ ಸೆಷನ್ಸ್ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದನ್ನು ಆತ ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದ. ತಾನು ಆಕೆಗೆ ಅತ್ಯಾಚಾರ ಎಸಗಲಿಲ್ಲ ಎಂದು ಹೇಳಿದ್ದ ಆತ ಪ್ರತಿಬಾರಿಯೂ ಖಾಸಗಿ ಅಂಗವನ್ನು ತೊಡೆಗಳ ನಡುವೆ ಉಜ್ಜಿದ್ದೆ ಅಷ್ಟೆ. ಇದು ಅತ್ಯಾಚಾರ ಆಗುವುದಿಲ್ಲ ಎಂದು ವಾದಿಸಿದ್ದ.
ಆದರೆ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಇರುವ ವ್ಯಾಖ್ಯಾನವನ್ನು ತಿಳಿಸಿರುವ ನ್ಯಾಯಮೂರ್ತಿ ಕೆ.ವಿನೋದ್​ ಚಂದ್ರನ್​ ಅವರ ನೇತೃತ್ವದ ಪೀಠ ಇದು ಕೂಡ ಅತ್ಯಾಚಾರವೇ ಎಂದು ಹೇಳಿ ಶಿಕ್ಷೆಯನ್ನು ಕಾಯಂಗೊಳಿಸಿದೆ.ಆದರೆ ಸಂತ್ರಸ್ತೆಯ ವಯಸ್ಸನ್ನು ಸರಿಯಾಗಿ ಉಲ್ಲೇಖಿಸಲು ಪ್ರಾಸಿಕ್ಯೂಷನ್​ ವಿಫಲವಾಗಿರುವ ಕಾರಣ, ಆಕೆ ಪ್ರಾಪ್ತಳೇ ಅಥವಾ ಅಪ್ರಾಪ್ತಳೇ ಎಂದು ತಿಳಿಯದ ಹಿನ್ನೆಲೆಯಲ್ಲಿ ಪೋಕ್ಸೊ ಕಾಯ್ದೆ ಅಡಿಯ ಶಿಕ್ಷೆಯಿಂದ ಯುವಕನನ್ನು ಬಿಡುಗಡೆಗೊಳಿಸಿದರೂ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿದೆ.
ಪತ್ನಿ 15 ವರ್ಷದವಳಾಗಿದ್ದು ಲೈಂಗಿಕ ಕ್ರಿಯೆ ನಡೆಸಿದರೆ ಅದು ರೇಪ್​ ಅಲ್ಲ ಎಂದ ಹೈಕೋರ್ಟ್​

ಶಾಲೆ, ಪಿಯು ಆರಂಭಕ್ಕೆ ಸಿಕ್ತು ಗ್ರೀನ್​ ಸಿಗ್ನಲ್​- ನೈಟ್​ ಕರ್ಫ್ಯೂ ಸಮಯದಲ್ಲೂ ವ್ಯತ್ಯಾಸ: ಇಲ್ಲಿದೆ ಡಿಟೇಲ್ಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 10 =
Remember me
