ಅಲಹಾಬಾದ್:ಹೆಣ್ಣುಮಕ್ಕಳು ಮದುವೆಗೆ ನಿಗದಿ ಮಾಡಿರುವ ಪ್ರಾಪ್ತ ವಯಸ್ಕರಾಗಿರದೇ ಅಪ್ರಾಪ್ತರಾಗಿರುವ ವೇಳೆಯೇ ಮದುವೆಯಾಗಿದ್ದರೆ ಆ ಮದುವೆಗೆ ಕಾನೂನಿನ ಅಡಿ ಮಾನ್ಯತೆ ಇಲ್ಲ. ಒಂದು ವೇಳೆ ಅಪ್ರಾಪ್ತ ಹೆಣ್ಣುಮಕ್ಕಳು ಸ್ವ ಇಚ್ಛೆಯಿಂದ ಮದುವೆಯಾಗಿದ್ದರು ಕೂಡ ಗಂಡನೊಂದಿಗೆ ಇರಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಯಾವುದೇ ಕಾರಣಕ್ಕೂ ಅಪ್ರಾಪ್ತರ ಮದುವೆಗೆ ಕಾನೂನು ಸಮ್ಮತಿ ನೀಡದ ಕಾರಣ, ಬಾಲಕಿ ತನ್ನ ಗಂಡನ ಜತೆ ಬಾಳಲು ಅವಕಾಶವಿಲ್ಲ. ಒಮ್ಮೆ ಆಕೆ ಪ್ರಾಪ್ತ ವಯಸ್ಕಳಾದರೆ, ಆಗ ಅವಳು ಗಂಡನ ಜತೆ ಬಾಳಬೇಕೋ ಅಥವಾ ಬಿಡಬೇಕೋ ಎನ್ನುವುದನ್ನು ನಿರ್ಧರಿಸಬಹುದು. ಈ ನಿರ್ಧಾರವನ್ನು ತೆಗೆದುಕೊಳ್ಳಲು ಆಕೆ ಸ್ವತಂತ್ರಳಾಗಿದ್ದಾಳೆ. ಒಂದು ವೇಳೆ ಆಕೆ ಒಪ್ಪಿದರೆ ಮಾತ್ರ ಗಂಡನ ಜತೆ ಬಾಳಬಹುದು ಎಂದು ನ್ಯಾಯಮೂರ್ತಿ ಜೆ.ಜೆ. ಮುನೀರ್ ನೇತೃತ್ವದ ಪೀಠ ಹೇಳಿದೆ.
ಹಾಪುರದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್​ ಈ ತೀರ್ಪು ನೀಡಿದೆ. ಬಾಲಕಿಯ ತಂದೆ ಕೋರ್ಟ್​ ಮೊರೆ ಹೋಗಿದ್ದರು. ಪಿಂಟೋ ಎಂಬಾತ ತನ್ನ ಅಪ್ರಾಪ್ತ ಮಗಳಿಗೆ ಆಮಿಷ ಒಡ್ಡಿ ಮದುವೆಯಾಗಿದ್ದಾನೆ ಎನ್ನುವುದು ಅವರ ದೂರಾಗಿತ್ತು. ಆದರೆ ಹಾಪುರದ ಕೋರ್ಟ್​ ಬಾಲಕಿ ಮದುವೆಯಾಗಿರುವ ಕಾರಣ, ಗಂಡನ ಜತೆ ಬಾಳಬಹುದು ಎಂದಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್​ ಮೊರೆ ಹೋಗಿದ್ದರು.
ಬಾಲಕಿಗೆ 16 ವರ್ಷ ಆಗಿರುವ ಕಾರಣ, ಆಕೆಯಿನ್ನೂ ಕಾನೂನಿನ ಅಡಿ ಅಪ್ರಾಪ್ತಳಾಗಿದ್ದು, ಗಂಡನ ಜತೆ ಬಾಳುವಂತೆ ಇಲ್ಲ. ಈ ಮದುವೆ ಕಾನೂನಿನ ದೃಷ್ಟಿಯಲ್ಲಿ ಅನೂರ್ಜಿತವಾಗಿದೆ. ಆಕೆಗೆ 18 ವರ್ಷ ತುಂಬಿದ ಮೇಲೆ ಬೇಕಿದ್ದರೆ ಗಂಡನ ಜತೆ ಬಾಳುವ ತೀರ್ಮಾನ ತೆಗೆದುಕೊಳ್ಳಬಹುದು ಎಂದ ಕೋರ್ಟ್​, ಕೆಳಹಂತದ ಕೋರ್ಟ್​ ನೀಡಿದ್ದ ಆದೇಶವನ್ನು ವಜಾ ಮಾಡಿದೆ. ಬಾಲಕಿ ಮೇಜರ್​ ಆಗುವವರೆಗೆ ಮನೆಯಲ್ಲಿಯೇ ಇರಿಸಿಕೊಂಡು ಜಾಗೃತೆ ಮಾಡುವಂತೆ ಕೋರ್ಟ್​ ಹೇಳಿದೆ.
ಇಲ್ಲೊಬ್ಬ ಆಂಟಿಗೆ ಬಾಯ್​ಫ್ರೆಂಡ್​ ಕಾಟ ಕೊಡ್ತಿದ್ದಾನಂತೆ; ಅವ್ರು ನನ್ನನ್ನು ಹೆಗೇಗೋ ಪೀಡಿಸ್ತಿದ್ದಾರೆ- ಏನು ಮಾಡಲಿ?

ಒಂದೇ ಗಂಟೆಯಲ್ಲಿ ₹365 ಕೋಟಿ ದುಡಿಯುವ ಆಸೆಯೆ? ಹಾಗಿದ್ದರೆ ಇಲ್ಲಿದೆ ನಿಮಗೊಂದು ಚಾಲೆಂಜ್​!

ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ‘ಯದುವೀರ್​ ಒಡೆಯರ್’​ ಟ್ವೀಟ್​- ಆದರೆ ಅಸಲಿಯತ್ತೇ ಬೇರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
