ಚಂಡಿಗಢ:ಮದುವೆ ಮಾಡಲು ಹೆಣ್ಣುಮಕ್ಕಳಿಗೆ 18 ವರ್ಷ ವಯಸ್ಸಾಗಬೇಕು ಎನ್ನುವುದು ಹಿಂದೂ ಕಾನೂನು. 18 ವರ್ಷ ವಯಸ್ಸಾದ ಹಿಂದೂ ಹೆಣ್ಣುಮಕ್ಕಳು ತಮ್ಮ ಮದುವೆಗೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ಕಾನೂನು ನೀಡಿದೆ. ಆದರೆ ಮುಸ್ಲಿಂ ಕಾನೂನಿನ ಅನ್ವಯ ಹೆಣ್ಣುಮಕ್ಕಳು ಪ್ರೌಢಾವಸ್ಥೆ ತಲುಪಿದರೆ ಸಾಕು, ಅವರು ಯಾರನ್ನು ಬೇಕಾದರೂ ಮದುವೆಯಾಗಬಹುದು.
ಈ ಬಗ್ಗೆಯೇ ತೀರ್ಪೊಂದರಲ್ಲಿ ಉಲ್ಲೇಖಿಸಿರುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, 18 ವರ್ಷಕ್ಕಿಂತ ಕಡಿಮೆ ವಯಸ್ಸಿದ್ದರೂ ಪ್ರೌಢವಸ್ಥೆ ತಲುಪಿದ ಮುಸ್ಲಿಂ ಹೆಣ್ಣು ಮಕ್ಕಳು ತಮ್ಮ ಇಚ್ಛೆಯಂತೆ ಯಾರನ್ನ ಬೇಕಾದರೂ ಮದುವೆಯಾಗಲು ಸ್ವತಂತ್ರರು ಎಂದು ಹೇಳಿದೆ.ಮುಸ್ಲಿಂ ವೈಯಕ್ತಿಕ ಕಾನೂನು 195ನೇ ಕಲಮಿನ ಅಡಿ ಇರುವ ಅಂಶಗಳ ಆಧಾರದ ಮೇಲೆ ಕೋರ್ಟ್​ ಈ ತೀರ್ಪು ನೀಡಿದ್ದು, ಹೆಣ್ಣುಮಗಳೊಬ್ಬಳ ತಂದೆ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.
17 ವರ್ಷದ ಮುಸ್ಲಿಂ ಬಾಲಕಿಯ ತಂದೆ ಕೋರ್ಟ್​ ಮೊರೆ ಹೋಗಿದ್ದರು. 36 ವರ್ಷದ ತಮ್ಮದೇ ಧರ್ಮದ ವ್ಯಕ್ತಿಯನ್ನು ಮಗಳು ನಿಖಾ ಮಾಡಿಕೊಂಡಿದ್ದಾಳೆ. ಆದರೆ ಆಕೆಗಿನ್ನೂ 18 ತುಂಬಿಲ್ಲದ ಕಾರಣ, ಈ ಮದುವೆಗೆ ಮಾನ್ಯತೆ ಇಲ್ಲ ಎಂದು ಆದೇಶಿಸಬೇಕು. ಮಗಳನ್ನು ಮೋಸದಿಂದ ಮದುವೆ ಮಾಡಿಕೊಳ್ಳಲಾಗಿದೆ ಎಂದು ತಂದೆ ಹೇಳಿದ್ದರು.
ಆದರೆ ಅವರ ಮಗಳು ತಾನು ಸ್ವ ಇಚ್ಛೆಯಿಂದ ನಿಖಾ ಮಾಡಿಕೊಂಡಿರುವುದಾಗಿ ಹೇಳಿದಳು. ಆಕೆ ಪ್ರೌಢಾವಸ್ಥೆಗೆ ಬಂದಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಅಲ್ಕಾ ಸರಿನ್ ಅವರು ಮುಸ್ಲಿಂ ವೈಯಕ್ತಿಕ ಕಾನೂನು ಪ್ರಕಾರ ಅವಳ ಮದುವೆಗೆ ಮಾನ್ಯತೆ ಇದೆ. ಹೆಣ್ಣುಮಕ್ಕಳು ಪ್ರೌಢಾವಸ್ಥೆಗೆ ಬಂದು, ಮಾನಸಿಕವಾಗಿ ಸರಿಯಾಗಿದ್ದರೆ ಆಕೆ ಯಾರನ್ನೂ ಬೇಕಾದರೂ ಮದುವೆಯಾಗಬಹುದು ಎಂದಿದ್ದಾರೆ.
ಮುದ್ದು ಕಂದನ ಜೀವ ಉಳಿಸಲು ₹6 ಕೋಟಿ ಜಿಎಸ್​ಟಿ ಮನ್ನಾ ಮಾಡಿದ ಪ್ರಧಾನಿ ಮೋದಿ

ಕಾರಿನ ಹ್ಯಾಂಡ್​ಬ್ರೇಕ್​ ಹಾಕದೇ ಮೂತ್ರವಿಸರ್ಜನೆಗೆ ಹೋದ ಚಾಲಕ- ನಾಲ್ವರ ದುರ್ಮರಣ

ಅಮ್ಮನ ಆಸ್ತಿ ತೆಗೆದುಕೊಂಡು ಬಾ ಎಂದು ಅಕ್ಕನಿಗೆ ಗಂಡ ಪೀಡಿಸುತ್ತಿದ್ದಾನೆ- ಅವಳಿಗೂ ಪಾಲು ಇದೆಯಾ?

ಸಿಎಎ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ: ಸಾಮಾಜಿಕ ಕಾರ್ಯಕರ್ತನಿಗೆ ಜಾಮೀನು ನೀಡದ ಸುಪ್ರೀಂಕೋರ್ಟ್​

ಜೀವನ ಫಿಲ್ಮ್​ ಇದ್ದಂಗೆ- ಕೆಲವು ವೇಳೆ ಸೂಪರ್​ಹಿಟ್​ ಆಗುತ್ತೆ, ಕೆಲವು ಸಲ ಫ್ಲಾಪ್​ ಆಗತ್ತೆ: ಗಳಗಳನೆ ಅತ್ತ ರಾಗಿಣಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
