ರಾಯ್ಪುರ್ ​(ಛತ್ತೀಸ್​ಗಢ):ಛತ್ತೀಸಗಢದ ರಾಯ್ಪುರದ ಸ್ಟಾರ್​ ಹೋಟೆಲ್​ ಮೇಲೆ ದಾಳಿ ನಡೆಸಿರುವ ಅಪರಾಧ ನಿಗ್ರಹ ಮತ್ತು ಸೈಬರ್​ ಘಟಕದ ಸಿಬ್ಬಂದಿ ಹೈ ಪ್ರೊಫೈಲ್​ ವೇಶ್ಯಾವಾಟಿಕೆ ನಡೆಸುತ್ತಿರುವುದನ್ನು ಬಯಲಿಗೆ ಎಳೆದಿದ್ದಾರೆ. ಈ ಘಟನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬೆಂಗಳೂರಿನ ಯುವತಿ ಸೇರಿದಂತೆ 11 ಮಂದಿ ಯುವತಿಯರು ಹಾಗೂ ಒಬ್ಬ ಕಿಂಗ್​ಪಿನ್​ನನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಯುವತಿ ಹೊರತುಪಡಿಸಿ ಉಳಿದವರು ನೇಪಾಳ, ಮುಂಬೈ, ದೆಹಲಿ, ಗುಜರಾತ್​ ಮೂಲದವರು ಎಂದು ತಿಳಿದುಬಂದಿದೆ. ಇವರ ಸ್ಮಾರ್ಟ್​ಫೋನ್​ಗಳನ್ನು ತನಿಖೆಗೆ ಒಳಪಡಿಸಿದಾಗ ಪೊಲೀಸರೇ ಶಾಕ್​ ಆಗಿದ್ದಾರೆ. ಇದಕ್ಕೆ ಕಾರಣ, ಬೆಂಗಳೂರಿನ ಯುವತಿ ಸೇರಿದಂತೆ ಬಹುತೇಕ ಯುವತಿಯರ ಫೋನ್​ನಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳ ಹೆಸರು ಸೇವ್​ ಆಗಿದ್ದು, ಅವರಿಗೆ ಈ ಯುವತಿಯರು ಕರೆ ಮಾಡಿರುವುದು ತಿಳಿದುಬಂದಿದೆ. ಆದರೆ ಸದ್ಯ ತನಿಖೆಯ ಹಂತದಲ್ಲಿರುವ ಕಾರಣ, ಯಾರ ಹೆಸರನ್ನೂ ಪೊಲೀಸರು ಬಹಿರಂಗಪಡಿಸಲಿಲ್ಲ.
ಹೋಟೆಲ್​​​ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಪೊಲೀಸ್ ಇಲಾಖೆಗೆ ದೂರು ಬಂದಿತ್ತು. ಅದರ ಅನ್ವಯ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೋಸ್ಕರ ಎಸ್​​​ಎಸ್​ಪಿ ಅಭಿಷೇಕ್​​ ಮಹೇಶ್ವರಿ ಸೂಚನೆ ಮೇರೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಹೋಟೆಲ್​ ಮೇಲೆ ದಾಳಿ ನಡೆಸಿದಾಗ ದಂಧೆ ನಡೆಯುತ್ತಿರುವುದು ಕಂಡು ಬಂದಿದೆ. ಬಂಧಿತ ಯುವತಿಯರ ಚಾಟ್ ಸಂದೇಶ ಹಾಗೂ ಕರೆ ಮಾಡಿದ ದಾಖಲೆಗಳನ್ನು ಸಂಗ್ರಹಿಸಲಾಗಿದ್ದು, ಇವುಗಳಲ್ಲಿ ರಾಜಕಾರಣಿಗಳ ಹೆಸರು ಇರುವುದು ತಿಳಿದುಬಂದಿದೆ ಎಂದಿದ್ದಾರೆ ಪೊಲೀಸರು.
ಈ ದಂಧೆಯಲ್ಲಿ ಭಾಗಿಯಾಗಿರುವ ಯುವತಿಯರು ಅನೇಕ ರಾಜಕೀಯ ನಾಯಕರೊಂದಿಗೆ ಸಂಪರ್ಕ ಹೊಂದಿರುವುದು ಮೊಬೈಲ್​ ಫೋನ್​ನಿಂದ ಪತ್ತೆಯಾಗಿದೆ. ಸದ್ಯ ಯಾರ ಹೆಸರನ್ನೂ ಬಹಿರಂಗಪಡಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.(ಏಜೆನ್ಸೀಸ್​)
ಆಲಮಟ್ಟಿ ಜಲಾಶಯದಲ್ಲಿ ಅವನಲ್ಲ, ಅವಳು… ಬುರ್ಖಾಧಾರಿಯ ಅಸಲಿಯತ್ತೇನು? ಪೊಲೀಸರು ಹೇಳಿದ್ದೇನು?

ಇವಳು ಭಾರತ, ಅವಳು ಪಾಕಿಸ್ತಾನ-ಲವ್​ನಲ್ಲಿ ಬಿದ್ದ ಯುವತಿಯರು! ಭಾರಿ ಸುದ್ದಿಯಲ್ಲಿ ಈ ಸುಂದರಿಯರು

ವಂಚನೆ ಕೇಸ್​ನಲ್ಲಿ ಮಾಜಿ ಶಾಸಕ ಜೈಲಲ್ಲಿ​, ಪತ್ನಿಗೆ ಜಾಮೀನು: ಈಗ ಗ್ಯಾಂಗ್​ರೇಪ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಮಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − four =
Remember me
