ಮುಂಬೈ:ಟೆಕ್‌ ದೈತ್ಯ, ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್ ಕಂಪೆನಿಗಳ ಮಾಲಿಕ ಎಲಾನ್‌ ಮಸ್ಕ್‌ ಒಡೆತನದ ಕಂಪೆನಿಯು, ಉಪಗ್ರಹಗಳ ಗುಚ್ಚದ ಮೂಲಕ ಕುಗ್ರಾಮ ಅಥವಾ ಕಾಡಿನಂತಹ ಪ್ರದೇಶದಲ್ಲೂ ಅತಿವೇಗದ ಇಂಟರ್ನೆಟ್‌ ಸೇವೆ ನೀಡುವ ಸ್ಟಾರ್‌ಲಿಂಕ್‌ ಯೋಜನೆ ಆರಂಭಿಸುವುದಾಗಿ ಕಳೆದ ಅಕ್ಟೋಬರ್‌ನಲ್ಲಿ ಘೋಷಿಸಿತ್ತು.
ಲೈಟ್ ಆಧಾರಿತ ಇಂಟರ್ನೆಟ್ ಸಂಪರ್ಕವನ್ನು ಭಾರತದಲ್ಲಿ ನೀಡಲು ಸಿದ್ಧತೆ ನಡೆಸಿತ್ತು. ಆದರೆ ಇದಕ್ಕೆ ಭಾರತ ಸರ್ಕಾರ ಪರವಾನಗಿ ನೀಡಲು ನಿರಾಕರಿಸಿತ್ತು. ಭಾರತ ಸರ್ಕಾರದಿಂದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪ್ರೀ ಬುಕ್ಕಿಂಗ್ ರದ್ದಾಗಿತ್ತು. ಇಂಥದ್ದೊಂದು ಅಮೋಘ ಸೇವೆಗೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದ್ದ ಹಲವು ಭಾರತೀಯರ ಕೆಂಗಣ್ಣಿಗೂ ಗುರಿಯಾಗಿತ್ತು. ಜಾಲತಾಣದಲ್ಲಿ ವಿಧವಿಧ ಕಮೆಂಟ್‌ಗಳ ಸುರಿಮಳೆಯಾಗಿತ್ತು.
ಆದರೆ ಇದೀಗ, ಎಲಾನ್‌ ಮಸ್ಕ್‌ ಅವರ ಯೋಜನೆಗೆ ಸೆಡ್ಡು ಹೊಡೆಯಲು ಸಜ್ಜಾಗಿ ನಿಂತಿದೆ ಭಾರತದ ಜಿಯೋ ನೆಟ್‌ವರ್ಕ್‌. ಇದಾಗಲೇ ಜಿಯೋ ನೆಟ್‌ವರ್ಕ್‌ ಆರಂಭಿಸಿ ಬಿರುಗಾಳಿ ಎಬ್ಬಿಸಿರುವ ರಿಲಯನ್ಸ್ ಜಿಯೋ, ಇದೀಗ ಎಲಾನ್‌ ಮಸ್ಕ್‌ಗೆ ಸೆಡ್ಡು ಹೊಡೆಯಲು ಮುಂದಾಗಿದೆ. ಜಿಯೋ ಸ್ಪೇಸ್ ಟೆಕ್ನಾಲಜಿ ಲಿಮಿಟೆಡ್ ಎಂಬ ಉದ್ಯಮ ಆರಂಭಿಸಿದೆ. ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ತಂತ್ರಜ್ಞಾನದ ಮೂಲಕ ಗ್ರಾಹಕರಿಗೆ 100 ಜಿಬಿಪಿಎಸ್ (ಗಿಗಾ ಬೈಟ್ ಪರ್ ಸೆಕೆಂಡ್) ವೇಗದಲ್ಲಿ ಇಂಟರ್‌ನೆಟ್ ಸೇವೆ ಒದಗಿಸಲಿದೆ.
ರಿಲಯನ್ಸ್ ಜಿಯೋ ಲಕ್ಸೆಂಬರ್ಗ್ ಮೂಲದ ದೂರಸಂಪರ್ಕ ಕಂಪನಿ ಎಸ್‌ಇಎಸ್‌ನೊಂದಿಗೆ ಜಂಟಿಯಾಗಿ ಈ ಯೋಜನೆಯನ್ನು ಆರಂಭಿಸಲಿದೆ. ಜಿಯೋನ ಬ್ರಾಡ್‌ಬ್ಯಾಂಡ್ ಸೇವೆಯು ಎಂಟರ್‌ಪ್ರೈಸಸ್, ಮೊಬೈಲ್ ಬ್ಯಾಕ್‌ಹಾಲ್, ಹಾಗೂ ಚಿಲ್ಲರೆ ಗ್ರಾಹಕರಿಗೆ 100 ಜಿಬಿಪಿಎಸ್ ವರೆಗಿನ ಗರಿಷ್ಠ ವೇಗದಲ್ಲಿ ಇಂಟರ್‌ನೆಟ್ ಒದಗಿಸುವ ಸಾಮರ್ಥ್ಯ ಹೊಂದಿರುವುದಾಗಿ ಜಿಯೊ ನೆಟ್‌ವರ್ಕ್‌ ತಿಳಿಸಿದೆ. ಇದಾಗಲೇ ಕಾರ್ಯಾರಂಭವಾಗಿದ್ದು, ಎಲಾನ್‌ ಮಸ್ಕ್‌ ಸ್ಟಾರ್‌ಲಿಂಕ್‌ಗೆ ಪೈಪೋಟಿ ನೀಡುವಷ್ಟು ವೇಗದಲ್ಲಿ ಹೊಸ ಯೋಜನೆಗೆ ಸಿದ್ಧತೆ ನಡೆಸಿದೆ.
VIDEO: ಅಯೋಧ್ಯೆಯ ರಾಮ ಮಂದಿರ ಹೇಗಿರಲಿದೆ? ಒಳಗೆ ಏನೇನು ಇರಲಿವೆ? ಕಣ್ಮನ ಸೆಳೆಯುವ 3ಡಿ ವಿಡಿಯೋ ಇಲ್ಲಿದೆ ನೋಡಿ…

VIDEO: ‘ಅಲ್ಲಾಹು ಅಕ್ಬರ್‌’: ಘಟನೆ ಪೂರ್ವನಿಯೋಜಿತ ಎಂದ ಪಾಕಿಸ್ತಾನದ ಚಾನೆಲ್‌! ಶಾಕಿಂಗ್‌ ವಿಡಿಯೋ ಇಲ್ಲಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
