ಮುಂಬೈ:2016ರ ನವೆಂಬರ್​ 8ರಂದು ನೋಟು ಅಮಾನ್ಯೀಕರಣಗೊಂಡು ಐದೂವರೆ ವರ್ಷಗಳಾಗಿವೆ. ಅಕ್ರಮವಾಗಿ ಹಣ ಕೂಡಿಟ್ಟ ಎಷ್ಟೋ ಕಾಳಸಂತೆಕೋರರಿಗೆ ಇದು ಶಾಕ್​ ಆಗಿ ಪರಿಣಮಿಸಿ, ನೋಟುಗಳನ್ನು ಸುಟ್ಟದ್ದೂ ಆಗಿದೆ. ಇನ್ನು ಕೆಲವರು ಕೆಲ ಕಾರಣಗಳಿಂದ ನೋಟನ್ನು ಬದಲಾಯಿಸಿಕೊಳ್ಳಲು ಪರದಾಡಿದ್ದೂ ಇದೆ.
ಇದೀಗ ಕುತೂಹಲದ ಬೆಳವಣಿಗೆಯೊಂದರಲ್ಲಿ ಮುಂಬೈ ನಿವಾಸಿಯೊಬ್ಬರಿಗೆ ಸೇರಿದ 1.6 ಲಕ್ಷ ರೂ. ಮೌಲ್ಯದ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಳ್ಳಲು ಮುಂಬೈ ಹೈಕೋರ್ಟ್​ ಅನುಮತಿ ನೀಡಿದೆ. ಈ ಮೌಲ್ಯದ ನೋಟುಗಳನ್ನು ಬದಲಾಯಿಸಿಕೊಡುವಂತೆ ಭಾರತೀಯ ರಿಸರ್ವ್ ಬ್ಯಾಂಕಿಗೆ ಬಾಂಬೆ ಹೈಕೋರ್ಟ್ ನಿರ್ದೇಶಿಸಿದೆ.
ಅಷ್ಟಕ್ಕೂ ಆಗಿದ್ದೇನು?
ಮುಂಬೈನ ಡೊಂಬಿವಲ್ ನಿವಾಸಿ ಕಿಶೋರ್ ಸೊಹೋನಿ ಅವರು ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 2016ರ ಮಾರ್ಚ್​ನಲ್ಲಿ ದೂರು ದಾಖಲಿಸಿದ್ದರು. ಆ ಸಂದರ್ಭದಲ್ಲಿ ಕೋರ್ಟ್​ ಈ ಪ್ರಕರಣದ ಆರೋಪಿಗೆ ಪೊಲೀಸ್ ಠಾಣೆಯಲ್ಲಿ 1.6 ಲಕ್ಷ ರೂ. ಠೇವಣಿಯಿಡುವಂತೆ ಆದೇಶಿಸಿತ್ತು.
ಆದೇಶ ಪ್ರಕಟವಾದ ಬಳಿಕ ಈ ಠೇವಣಿ ಇಟ್ಟ ಹಣವನ್ನು ದೂರುದಾರರಾಗಿರುವ ಕಿಶೋರ್ ಸೊಹೋನಿ ಅವರಿಗೆ ನೀಡುವಂತೆ ಕೋರ್ಟ್​ ಹೇಳಿತ್ತು. ಇದರ ಆದೇಶ ಹೊರಬಂದದ್ದು 2017ರ ಮಾರ್ಚ್ 20ರಂದು. ಅಂದರೆ ಅದಾಗಲೇ ನೋಟು ಅಮಾನ್ಯಗೊಂಡು ನಾಲ್ಕು ತಿಂಗಳಾಗಿತ್ತು. ಆದರೆ ಸೊಹೋನಿ ಅವರು ಆ ಹಣವನ್ನು ಪಡೆದುಕೊಂಡಿರಲಿಲ್ಲ. ನಂತರ ಲಾಕ್​ಡೌನ್​ ಕಾರಣದಿಂದ ಪೊಲೀಸ್​ ಠಾಣೆಗೆ ಹೋಗಲು ಆಗಿರಲಿಲ್ಲ.
2020ರ ಅಕ್ಟೋಬರ್ ತಿಂಗಳಿನಲ್ಲಿ ಪೊಲೀಸ್ ಠಾಣೆಗೆ ತೆರಳಿ ಹಣ ಹಿಂತಿರುಗಿಸುವಂತೆ ಹೇಳಿದ್ದಾಗ ಅವರು ಬ್ಯಾನ್ ಆಗಿರೋ 1,000ರೂ. ನೋಟುಗಳನ್ನು ನೀಡಿದ್ದರು. ಅದನ್ನು ಪ್ರಶ್ನಿಸಿ ಕಿಶೋರ್ ಸೊಹೋನಿ ಕೋರ್ಟ್​ ಮೆಟ್ಟಿಲೇರಿದ್ದರು.
ನೋಟ್​ ಬ್ಯಾನ್​ ಆಗುವ ಸಮಯದಲ್ಲಿ ವಿಧಿಸಲಾಗಿದ್ದ ಕೆಲವೊಂದು ಷರತ್ತು, ಸಡಿಲಿಕೆ ಕುರಿತಂತೆ ಆರ್​ಬಿಐ ಪರ ವಕೀಲರು, 2017ರ ಮೇ 12ರ ಅಧಿಸೂಚನೆಯನ್ನು ಉಲ್ಲೇಖಿಸಿದರು. ‘ಒಂದು ವೇಳೆ ನಿರ್ದಿಷ್ಟ ಬ್ಯಾಂಕಿನಿಂದ ಮುಟ್ಟುಗೋಲು ಹಾಕಿಕೊಂಡ ನೋಟುಗಳನ್ನು ನ್ಯಾಯಾಲಯ ಹಿಂತಿರುಗಿಸಿದರೆ, ಆಗ ಆ ವ್ಯಕ್ತಿ ಹಣವನ್ನು ನ್ಯಾಯಾಲಯದ ಆದೇಶದ ಅನುಸಾರ ಠೇವಣಿ ಅಥವಾ ವಿನಿಮಯ ಮಾಡಲು ಆರ್ಹನಾಗಿದ್ದಾನೆ’ ಎಂದರು. ಎಲ್ಲಾ ದಾಖಲಾತಿ, ನಿಯಮಗಳನ್ನು ಪರಿಶೀಲನೆ ಮಾಡಿದ ಕೋರ್ಟ್​, ‘ಭಾರತ ಸಂವಿಧಾನದ ಪರಿಚ್ಛೇದ 226ರ ಅಡಿಯಲ್ಲಿನ ವಿಶೇಷ ಅಧಿಕಾರ ಬಳಸಿ ಆರ್ ಬಿಐಗೆ ಈ ನಿರ್ದೇಶನ ನೀಡಿದೆ. ‘ಅರ್ಜಿದಾರರಿಗೆ ಸೇರಿದ ಅಮಾನ್ಯೀಕರಣಗೊಂಡ ನೋಟುಗಳನ್ನು ಪ್ರಸ್ತುತ ಮಾನ್ಯತೆ ಹೊಂದಿರೋ ನೋಟುಗಳೊಂದಿಗೆ ಬದಲಾಯಿಸಿ ನೀಡಬೇಕು. ಹಾಗೆಯೇ ಸೀರಿಯಲ್ ಸಂಖ್ಯೆಗಳ ನಮೂದು ಸೇರಿದಂತೆ ಅರ್ಜಿದಾರರ ಇತರ ಮನವಿಗಳನ್ನು ಪರಿಗಣಿಸಬೇಕು’ ಎಂದು ಕೋರ್ಟ್​ ಹೇಳಿದೆ.
ಆಂಧ್ರದಲ್ಲಿ ಕ್ಷಾಮ ಬಂದಾಗ ಹುಟ್ಟಿಕೊಂಡದ್ದು ಮುಂಬೈನ ಕಾಮಾಟಿಪುರ! 200 ವರ್ಷಗಳ ಇತಿಹಾಸ ಇದಕ್ಕಿದೆ…

ಎಂಬಿಬಿಎಸ್‌ ಕಲಿಯಲು ಯೂಕ್ರೇನ್‌, ರಷ್ಯಕ್ಕೆ ಹೋಗುವುದೇಕೆ? ಭಾರತದಲ್ಲಿ ಇಲ್ಲದ್ದು ಅಂಥದ್ದೇನಿದೆ ಅಲ್ಲಿ ಗೊತ್ತಾ?

ಮತ್ತೆ ನಿಜವಾಯ್ತಾ ಕೋಡಿಮಠ ಶ್ರೀಗಳ ಭವಿಷ್ಯ? ಅವರು ಹೇಳಿದ ದೇಶವೇ ಯೂಕ್ರೇನಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 + 9 =
Remember me
