ನವದೆಹಲಿ:ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್‌ ಗಲಾಟೆ ರಾಜ್ಯ ದಾಟಿ, ದೇಶವನ್ನೂ ದಾಟಿ ಹೋಗಿದೆ. ಇದೀಗ ಈ ಗಲಾಟೆಯ ನಡುವೆಯೇ ಕೇಳಿಬರುತ್ತಿರುವ ಹೆಸರು ಮಂಡ್ಯದ ಮುಸ್ಕಾನ್​ ಖಾನ್. ಕೇಸರಿ ಶಾಲು ಧರಿಸಿ ಜೈ ಶ್ರೀರಾಮ್​ ಘೋಷಣೆ ಕೂಗಿದವರ ಎದುರು ಅಲ್ಲಾಹು ಅಕ್ಬರ್​ ಎಂದು ಕೂಗಿದ ಈ ವಿದ್ಯಾರ್ಥಿನಿಯ ಧೈರ್ಯಕ್ಕೆ ಇದಾಗಲೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಜಮೀಯತ್ ಉಲಮಾ-ಇ-ಹಿಂದ್ ಎಂಬ ಮುಸ್ಲಿಂ ಸಂಘಟನೆ ಬೀಬಿ ಮುಸ್ಕಾನ್ ಖಾನ್​ಗೆ 5 ಲಕ್ಷ ರೂಪಾಯಿ ನಗದನ್ನು ಇದಾಗಲೇ ಘೋಷಣೆ ಮಾಡಿದೆ. ಇದರ ಜತೆಗೆ ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಳಗಂ(ಟಿಎಂಎಂಕೆ) ಕೂಡ ಪ್ರಶಸ್ತಿ ನೀಡುವುದಾಗಿ ಘೋಷಿಸಿದೆ. ‘ಭಾರತೀಯ ಪ್ರಜೆಯಾಗಿ ತನಗೆ ನೀಡಿದ ಹಕ್ಕನ್ನು ಕಸಿದುಕೊಳ್ಳಲು ಯತ್ನಿಸಿದ ಕೇಸರಿ ದಳದ ಮುಂದೆ ನಿರ್ಭೀತಿಯಿಂದ ನಿಂತು ತನ್ನ ಹಕ್ಕನ್ನು ಪ್ರತಿಪಾದಿಸಿದ ಮುಸ್ಕಾನ್ ಅವರಿಗೆ ಫಾತಿಮಾ ಶೇಖ್ ಪ್ರಶಸ್ತಿಯನ್ನು ನೀಡಲು ಹೆಮ್ಮೆಪಡುತ್ತದೆ’ ಎಂದು ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಳಗಂ ಹೇಳಿದೆ.
ಇವೆಲ್ಲದರ ನಡುವೆ ಆರ್‌ಎಸ್‌ಎಸ್‌ನ ಮುಸ್ಲಿಂ ಘಟಕ, ಮುಸ್ಲಿಂ ರಾಷ್ಟ್ರೀಯ ಮಂಚ್​ ಕೂಡ ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿನಿಗೆ ಬೆಂಬಲ ವ್ಯಕ್ತಪಡಿಸಿದೆ. ಮುಸ್ಕಾನ್ ಖಾನ್​ ನಮ್ಮ ಸಮುದಾಯದ ಮಗಳು, ಸಹೋದರಿ. ಆಕೆಗೆ ಎದುರಾಗಿರುವ ಕಷ್ಟದ ಸಮಯದಲ್ಲಿ ಅವಳ ಪರ ನಾವು ನಿಲ್ಲುತ್ತೇವೆ ಎಂದು ಮುಸ್ಲಿಂ ಘಟಕದ ಅವಧ್ ಪ್ರಾಂತ್ಯದ ಸಂಚಾಲಕ್​ ಅನಿಲ್​ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹಿಜಾಬ್​ ಎಂಬುದು ಭಾರತೀಯ ಸಂಸ್ಕೃತಿಯ ಒಂದು ಭಾಗ. ನಮ್ಮ ಸಮುದಾಯದ ಈ ಮಗಳಿಗೆ ಎದುರಾಗಿರುವ ಕಷ್ಟದ ಸಮಯದಲ್ಲಿ ಅವಳ ಪರ ನಾವು ನಿಲ್ಲುತ್ತೇವೆ. ಮಹಿಳೆಯರಿಗೆ ಗೌರವ ಕೊಡಬೇಕು ಎಂಬುದನ್ನು ಹಿಂದು ಸಂಸ್ಕೃತಿ ಕಲಿಸಿದೆ. ಆದರೆ ಅಂದು ಈ ಹೆಣ್ಣುಮಗಳ ಎದುರು ಆಕ್ರಮಣಕಾರಿಯಾಗಿ ಜೈ ಶ್ರೀರಾಮ್​ ಘೋಷಣೆ ಮಾಡಿ, ಹೆದರಿಸಲು ನೋಡಿದ್ದು ತಪ್ಪು. ಇದನ್ನು ನಾವು ಖಂಡಿಸುತ್ತೇವೆ ಎಂದು ಸಿಂಗ್‌ ಹೇಳಿದ್ದಾರೆ.
ಹಿಜಾಬ್​ ಧರಿಸಲು ಸಂವಿಧಾನದಲ್ಲೇ ಹಕ್ಕು ನೀಡಲಾಗಿದೆ. ಒಂದು ವೇಳೆ ವಿದ್ಯಾರ್ಥಿನಿ ಏನಾದರೂ ಕಾಲೇಜು ಕ್ಯಾಂಪಸ್​​ನಲ್ಲಿ ಅಲ್ಲಿನ ನಿಯಮ ಉಲ್ಲಂಘಿಸಿದ್ದೇ ಹೌದಾದರೆ ಅದಕ್ಕೆ ಏನು ಶಿಕ್ಷೆ ಎನ್ನುವುದನ್ನು ನೀಡುವ ಹಕ್ಕು ಶಿಕ್ಷಣ ಸಂಸ್ಥೆಗೆ ಇದೆಯೇ ವಿನಾ ಈ ರೀತಿ ಬಿಟ್ಟು ಹುಡುಗರು ಕೇಸರಿ ಶಾಲು ಧರಿಸಿ, ಜೈಶ್ರೀರಾಮ್​ ಎಂದು ಕೂಗುತ್ತ ಬಂದಿದ್ದು ಸರಿಯಲ್ಲ ಎಂದಿದ್ದಾರೆ.
ಹಿಜಾಬ್‌ ಧರಿಸಿ ಪೋರ್ನ್‌ ವಿಡಿಯೋ ಶೂಟಿಂಗ್‌: ನೀಲಿಚಿತ್ರ ತಾರೆಗೆ ತಾಲಿಬಾನಿಗಳಿಂದ ಕೊಲೆ ಬೆದರಿಕೆ

VIDEO: ಹಿಜಾಬ್‌ ವಿವಾದ- ಗಲಾಟೆ ಮಾಡ್ಬೇಡಿ ಎಂದು ಶಿಕ್ಷಕಿ ಮನವಿ ಮಾಡಿದ್ರೆ, ಈ ವಿದ್ಯಾರ್ಥಿನಿ ಹೇಳಿದ್ದು…

‘ಮಲಾಲಾಜೀ ನಿಮ್‌ ಮೇಲೆ ದಾಳಿಯಾಗಿದ್ದು ಪಾಕ್‌ನಲ್ಲೇ… ಸಚಿವರೇ ಮೂಗು ತೂರಿಸೋದು ನಿಲ್ಲಿಸಿ… ಪಾಕಿಸ್ತಾನ ನರಕಕ್ಕೆ ಹೋಗಲಿ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
