ನವದೆಹಲಿ:ಶಾಲಾ ಮತ್ತು ಕಾಲೇಜುಗಳಲ್ಲಿ ಹಿಜಾಬ್​ ಧರಿಸುವುದನ್ನು ನಿಷೇಧಿಸಿದ್ದ ಕರ್ನಾಟಕ ಸರ್ಕಾರದ ಆದೇಶ ಎತ್ತಿ ಹಿಡಿದ ರಾಜ್ಯ ಹೈಕೋರ್ಟ್​ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಸಲಾಗಿರುವ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಇಂದು ನಡೆಸಿತು. ಅರ್ಜಿಯ ವಿಚಾರಣೆಯನ್ನು ಇದೇ 7ಕ್ಕೆ ಮುಂದೂಡಲಾಗಿದೆ.
ಆದರೆ ಇಂದು ಕೆಲ ಗಂಟೆ ಹಿಜಾಬ್​ಗೆ ಸಂಬಂಧಿಸಿದಂತೆ ಬಿಸಿಬಿಸಿ ವಾತಾವರಣ ನಿರ್ಮಾಣವಾಗಿತ್ತು. ಈ ಮೇಲ್ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್​, ನ್ಯಾಯಮೂರ್ತಿಗಳಾದ ಹೇಮಂತ್​ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ನ್ಯಾಯಪೀಠ ನಡೆಸುತ್ತಿದೆ. ಹಿಜಾಬ್​ಗೆ ಸಂಬಂಧಿಸಿದಂತೆ ವಕೀಲರು ಮತ್ತು ನ್ಯಾಯಮೂರ್ತಿಗಳ ನಡುವೆ ಕೆಲ ಕಾಲ ಭಾರಿ ಚರ್ಚೆಯೂ ನಡೆಯಿತು.
ಕಳೆದ ವಿಚಾರಣೆ ವೇಳೆ ಸುಪ್ರೀಂಕೋರ್ಟ್​ ಕರ್ನಾಟಕ ಸರ್ಕಾರಕ್ಕೆ ನೋಟಿಸ್​ ನೀಡಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಪರ ವಕೀಲರು ಕೋರ್ಟ್​ನಲ್ಲಿ ಹಾಜರು ಇದ್ದು, ಇಂದು ವಾದ ಮಂಡಿಸಿದರು.
ಮೊದಲಿಗೆ ಹಿಜಾಬ್​ ಪರ ಹಿರಿಯ ವಕೀಲ ಸಂಜಯ್​ ಹೆಗಡೆ ವಾದ ಮಂಡಿಸುತ್ತಾ, ‘ಹಿಜಾಬ್​ ಬ್ಯಾನ್​ ಮಾಡಿರುವುದು ಸರಿಯಲ್ಲ, ಓರ್ವ ಮಹಿಳೆ ಸಭ್ಯವಾಗಿ ಹೇಗೆ ಇರಬೇಕು ಎನ್ನುವುದನ್ನು ನೀವು ಆಕೆಗೆ ವಿವರಿಸುವ ಅನಿವಾರ್ಯತೆ ಇದೆಯಾ? ಆಕೆ ಹೇಗೆ ಬೇಕಾದರೂ ಇರಬಹುದಲ್ಲವೆ’ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಗುಪ್ತಾ ಅವರು, ‘ಹಿಜಾಬ್​ ಧರಿಸುವುದು ಧಾರ್ಮಿಕ ಆಚರಣೆ ಆಗಿರಬಹುದು. ಆದರೆ ಸಮವಸ್ತ್ರ ಕಡ್ಡಾಯ ಮಾಡಿರುವ ಸರ್ಕಾರಿ ಶಾಲೆಗಳಲ್ಲಿ ಧಾರ್ಮಿಕ ಉಡುಗೆ ಧರಿಸುವುದು ಎಷ್ಟು ಸರಿ ಎನ್ನುವುದು ಇಲ್ಲಿರುವ ಪ್ರಶ್ನೆ, ಅದಕ್ಕೆ ಸಂಬಂಧಿಸಿದಂತೆ ವಾದ ಮಂಡಿಸಿ’ ಎಂದರು.
ಕರ್ನಾಟಕ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್​ ಕೆ.ಎಂ.ನಟರಾಜ್​ ಅವರು, ‘ನಮ್ಮ ರಾಜ್ಯ ಸರ್ಕಾರದ ಉದ್ದೇಶ ಶಾಲೆಗಳಲ್ಲಿ ಶಿಸ್ತು ಮೂಡಿಸುವುದು ಅಷ್ಟೇ. ಆದರೆ ಒಂದು ವರ್ಗ ಅದನ್ನು ಮಾಡಲು ಬಯಸುತ್ತಿಲ್ಲ’ ಎಂದರು. ಅದಕ್ಕೆ ನ್ಯಾಯಮೂರ್ತಿಗಳು, ‘ ಹಿಜಾಬ್​ ಧರಿಸಿದರೆ ಶಿಸ್ತು ಹೇಗೆ ಉಲ್ಲಂಘನೆ ಆಗುತ್ತದೆಯೆ’ ಎಂದು ಪ್ರಶ್ನಿಸಿದರು. ಅದಕ್ಕೆ ನಟರಾಜ್​ ಅವರು, ‘ಶಾಲೆಗಳಿಗೆ ಸಮವಸ್ತ್ರ ಸಂಹಿತೆ ಇದೆ. ಅದನ್ನು ಯಾರೂ ಉಲ್ಲಂಘನೆ ಮಾಡಬಾರದು’ ಎಂದರು.
‘ ಧಾರ್ಮಿಕ ಅಲ್ಪಸಂಖ್ಯಾತ ಧಾರ್ಮಿಕ ಸಂಸ್ಥೆಗಳಲ್ಲಿ ಹಿಜಾಬ್​ಗೆ ಅವಕಾಶ ಕಲ್ಪಿಸಲಾಗಿದೆಯೆ’ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಅದಕ್ಕೆ ಅಡ್ವೊಕೇಟ್​ ಜನರಲ್​ ಅವರು, ‘ಹೌದು, ಹಿಜಾಬ್​ ಧರಿಸುವ ಅಥವಾ ಬಿಡುವ ವಿವೇಚನೆಯನ್ನು ಆಯಾ ಧಾರ್ಮಿಕ ಸಂಸ್ಥೆಗಳಿಗೆ ಬಿಟ್ಟುಕೊಟ್ಟಿದ್ದೇವೆ. ಈ ಬಗ್ಗೆ ಯಾವುದೇ ಕಡ್ಡಾಯವಿಲ್ಲ’ ಎಂದರು.
ಹಿಜಾಬ್​ ಪರ ವಾದ ಮಂಡಿಸಿದ ಇನ್ನೋರ್ವ ಹಿರಿಯ ವಕೀಲ ರಾಜೀವ್​ ಧವೆ ಅವರು, ‘ಹಿಜಾಬ್​ ಧರಿಸುವ ಮಹಿಳೆಯರ ದೊಡ್ಡ ವರ್ಗವೇ ಇದೆ. ಪರಿಸ್ಥಿತಿ ಹೀಗಿರುವಾಗ ತುಂಡು ಬಟ್ಟೆಗಾಗಿ (ಸ್ಕಾರ್ಫ್​) ಇಷ್ಟು ಮಹಿಳೆಯರು ಸರ್ಕಾರದ ಡ್ರೆಸ್​ಕೋಡ್​ಗೆ ತಲೆಬಾಗಬೇಕೆ’ ಎಂದು ಪ್ರಶ್ನಿಸಿದರು.
ಅದಕ್ಕೆ ನ್ಯಾಯಮೂರ್ತಿ ಗುಪ್ತಾ ಅವರು, ‘ಇದು ತುಂಡು ಬಟ್ಟೆಯ ಪ್ರಶ್ನೆಯಲ್ಲ, ಬದಲಿಗೆ ಸರ್ಕಾರದ ಡ್ರೆಸ್​ಕೋಡ್​ ಪಾಲನೆ ಮಾಡುವುದು ಮುಖ್ಯ. ಸರ್ಕಾರಿ ಶಾಲೆಗಳಲ್ಲಿ ಡ್ರೆಸ್​ಕೋಡ್​ ಹೇಗೆ ಇರುತ್ತದೆಯೋ ಹಾಗೆಯೇ ಪಾಲನೆ ಮಾಡಬೇಕು’ ಎಂದರು. ಅದಕ್ಕೆ ಮಧ್ಯೆ ಪ್ರವೇಶಿಸಿದ ವಕೀಲರು, ‘ಹಾಗಿದ್ದರೆ ಕೋರ್ಟ್​ಗಳಲ್ಲಿ ಕೂಡ ನ್ಯಾಯಮೂರ್ತಿಗಳೇ ತಿಕಲ ಇಡುತ್ತಾರೆ, ಪಗಡಿ ಹಾಕುತ್ತಾರಲ್ಲ, ಇದು ಸರಿಯಲ್ಲ ಅಲ್ಲವೆ’ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಗುಪ್ತಾ ಅವರು, ‘ಧಾರ್ಮಿಕ ಉಡುಗೆಗೆ ನೀವು ಪಗಡಿಯನ್ನು ಹೋಲಿಸುವಿರಾ? ಹಿಜಾಬ್​ಗೂ ಪಗಡಿಗೂ ಹೋಲಿಕೆ ಮಾಡುತ್ತಿರುವಿರಾ ಎಂದು ಅಚ್ಚರಿಯಿಂದ ಪ್ರಶ್ನಿಸಿದರು. ಪಗಡಿಯನ್ನು ಧಾರ್ಮಿಕತೆಗೆ ಹೋಲಿಸಬೇಡಿ. ನನ್ನ ಅಜ್ಜ ವಕೀಲಿ ವೃತ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ಪಗಡಿ ಧರಿಸುತ್ತಿದ್ದರು, ಅದು ಧಾರ್ಮಿಕತೆಯ ಸಂಕೇತವಲ್ಲ’ ಎಂದು ಹೇಳಿದರು. ‘ಈಗ ಕೋರ್ಟ್ ಮುಂದಿರುವ ಪ್ರಶ್ನೆ ಎಂದರೆ​ಜಾತ್ಯತೀತ ದೇಶದಲ್ಲಿ ಧಾರ್ಮಿಕ ವಸ್ತ್ರವನ್ನು ಸರ್ಕಾರಿ  ಶಾಲೆಗಳಲ್ಲಿ ಹಾಕಬಹುದಾ ಬೇಡವೇ ಎಂಬ ಬಗ್ಗೆ, ಆ ಬಗ್ಗೆ ವಾದ ಮಂಡಿಸಿ ಎಂದರು. ವಿಚಾರಣೆಯನ್ನು ಸೆಪ್ಟೆಂಬರ್​ 7ಕ್ಕೆ ಮುಂದೂಡಲಾಯಿತು. (ಏಜೆನ್ಸೀಸ್​)
ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಕಾರು ಅಪಘಾತವಾಗಿದ್ದು ಹೇಗೆ? ತನಿಖೆಯಿಂದ ಸತ್ಯ ಬಯಲು…
VIDEO: ಸಾರಾಯಿ ಅಂಗಡಿ ಮುಚ್ಚದಿದ್ರೆ ಸಾಯ್ತೇನೆಂದ ಕುಡುಕ: ಕಂಠಪೂರ್ತಿ ಎಣ್ಣೆ ಹಾಕ್ಕೊಂಡೇ ಡಿಮಾಂಡ್​!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 5 =
Remember me
