ಲಖನೌ:ಕರ್ನಾಟಕದಲ್ಲಿ ಶುರುವಾದ ಹಿಜಾಬ್‌ ಗಲಾಟೆ ರಾಜ್ಯ, ದೇಶದ ಗಡಿ ದಾಟಿ ಭಾರಿ ಸುದ್ದಿ ಮಾಡಿದೆ. ಹೈಕೋರ್ಟ್‌ ಆದೇಶವನ್ನೂ ಧಿಕ್ಕರಿಸಿ ಪಾಲಕರು ತಮ್ಮ ಮಕ್ಕಳಿಗೆ ಹಿಜಾಬ್‌ ತೊಟ್ಟು ಶಾಲಾ-ಕಾಲೇಜುಗಳಿಗೆ ಕಳುಹಿಸುತ್ತಿದ್ದರೆ, ಕಾಣದ ಕೈಗಳೂ ಇದರ ಹಿಂದೆ ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪಗಳೂ ಕೇಳಿಬರುತ್ತಿವೆ.
ಈ ಬೆಂಕಿಗೆ ತುಪ್ಪ ಸುರಿದಂತೆ ಇದೀಗ ತಾಜ್‌ಮಹಲ್‌ನಲ್ಲಿ ಹನುಮಾನ್‌ ಚಾಲೀಸಾ ಪಠಣೆ ಶುರು ಮಾಡಲಾಗಿದ್ದು, ಇದು ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ಅಲ್ಲಾಹು ಅಕ್ಬರ್‌ ಎಂದು ಘೋಷಣೆ ಕೂಗುವಾಗ ನಾವು ತಾಜ್‌ಮಹಲ್‌ಗೆ ಬಂದು ಹನುಮಾನ್‌ ಚಾಲೀಸಾ ಏಕೆ ಓದಬಾರದು ಎನ್ನುವ ರೀತಿಯಲ್ಲಿ ಕೆಲ ಯುವಕರು ಕ್ರಮಕ್ಕೆ ಮುಂದಾಗಿದ್ದರು. ಆದರೆ ಅವರನ್ನು ಪೊಲೀಸರು ತಡೆದಿದ್ದಾರೆ.
ತಾಜ್ ಮಹಲ್ ಅನ್ನು ತೇಜೋ ಮಹಲೇ (ಶಿವ ಮಂದಿರ) ಎಂದು ಪರಿಗಣಿಸಿ, ಕೇಸರಿ ಬಟ್ಟೆ ಧರಿಸಿ, ಹನುಮಾನ್ ಚಾಲೀಸಾ ಪಠಣ ಮಾಡಲು ನಾವು ನಿರ್ಧರಿಸಿದ್ದೆವು. ಇದರ ಪಠಣೆ ಮಾಡುತ್ತಿರುವಾಗಲೇ ಪೊಲೀಸರು ನಮ್ಮನ್ನು ತಡೆದಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್‌ನ ಬಜ್ರ್ ವಲಯದ ಉಪಾಧ್ಯಕ್ಷ ಆಶೀಶ್ ಆರ್ಯ ಹೇಳಿದ್ದಾರೆ. ನಾವು ಟಿಕೆಟ್‌ ಪಡೆದೇ ಒಳಗೆ ಹೋಗುವುದಾಗಿ ಹೇಳಿದೆವು. ನಮ್ಮ ಉದ್ದೇಶವಿಷ್ಟೇ ಆಗಿತ್ತು. ಅದೇನೆಂದರೆ ಶಾಲಾ-ಕಾಲೇಜುಗಳಲ್ಲಿ ಡ್ರೆಸ್‌ಕೋಡ್‌ ಇರುವಾಗ ಅದನ್ನು ಅವರು ಪಾಲನೆ ಮಾಡಬೇಕು. ಅವರು ಈ ಪರಿಯಾಗಿ ಗಲಾಟೆ ಶುರು ಮಾಡಿದರೆ, ನಾವೂ ಸುಮ್ಮನೆ ಇರಲು ಆಗುವುದಿಲ್ಲ. ಆದ್ದರಿಂದ ಇಲ್ಲಿ ಹನುಮಾನ್‌ ಚಾಲೀಸಾ ಪಠಿಸಲು ಹೋಗಿದ್ದೆವು ಎಂದು ಸೇವಾ ಭಾರತಿಯ ಭುವನ್‌ ಶರ್ಮಾ ತಿಳಿಸಿದರು.
ಬಲಪಂಥೀಯ ಪ್ರತಿಭಟನಕಾರರು ಹನುಮಾನ್ ಚಾಲೀಸ ಪಠಿಸಲು ತಾಜ್‌ಮಹಲ್‌ಗೆ ಪ್ರವೇಶಿಸಲು ಪ್ರಯತ್ನಿಸಿದ್ದರು. ಅವರನ್ನು ಶಿಲ್ಪಗ್ರಾಮ್ ಪಾರ್ಕಿಂಗ್‌ನಲ್ಲಿ ತಡೆದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
VIDEO: ಶಾಂತಿಯುತವಾಗಿದ್ದ ಬಳ್ಳಾರಿ ಕಾಲೇಜಿನಲ್ಲಿ ಕಿಡಿ ಹೊತ್ತಿಸಿದ ಬುರ್ಕಾಧಾರಿ- ಹಲವೆಡೆ ಟ್ರೆಂಡ್‌ ಆದ ‘ಅಲ್ಲಾಹು ಅಕ್ಬರ್‌’!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + sixteen =
Remember me
