ನವದೆಹಲಿ:ತಮಗಿಂತ ದೊಡ್ಡವರೇ ಆಗಿರಲಿ, ಚಿಕ್ಕವರೇ ಆಗಿರಲಿ ಕೆಲವೆಡೆ ಮಹಿಳೆಯರನ್ನು ‘ಆಂಟಿ’ ಎಂದು ಕರೆಯುವುದು ಸಾಮಾನ್ಯವಾಗಿದೆ. ಇದೊಂದು ರೀತಿಯಲ್ಲಿ ತಾವು ಮಹಿಳೆಯರಿಗೆ ಕೊಡುವ ಗೌರವ ಎಂದು ಅನೇಕ ಮಂದಿ ತಿಳಿದುಕೊಂಡಿದ್ದಾರೆ. ಆದರೆ ಇದು ಹಲವು ಮಹಿಳೆಯರಿಗೆ ಕಿರಿಕಿರಿ ಉಂಟು ಮಾಡುವುದಂತೂ ನಿಜ. ತಮಗಿಂತ ಹೆಚ್ಚಿಗೆ ವಯಸ್ಸಾದವರು ತಮ್ಮನ್ನು ‘ಆಂಟಿ’ ಎಂದು ಕರೆದರೆ ವಿಪರೀತ ಕೋಪ ಬರುವುದು ಸಹಜವಾದರೆ, ಇನ್ನು ಕೆಲವರಿಗೆ ತಮಗಿಂತ ತೀರಾ ಚಿಕ್ಕ ವಯಸ್ಸಿನವರು ಆಂಟಿ ಎಂದು ಕರೆದರೂ ಒಂದು ರೀತಿಯಲ್ಲಿ ಮೈಯೆಲ್ಲಾ ಉರಿಯುತ್ತದೆ.
ಇದು ಸಾಮಾನ್ಯ ಮಹಿಳೆಯರ ಮಾತಾದರೆ ಇನ್ನು ನಟಿಯರ ವಿಷಯ ಹೇಗಿರಬೇಡ? ಸಾಮಾನ್ಯವಾಗಿ ಚಿತ್ರನಟಿಯರು ತಮ್ಮ ವಯಸ್ಸನ್ನು ಮರೆಮಾಚುವುದು ಇದೆ. ಅದರಲ್ಲಿಯೂ ವಯಸ್ಸಾಗುತ್ತಾ ಬಂದಂತೆ ಅವರ ಬೇಡಿಕೆ ಕಡಿಮೆಯಾಗುವ ಕಾರಣ ಸದಾ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ತೋರುತ್ತಲೇ ಇರುತ್ತಾರೆ. ವಯಸ್ಸು 40-50 ದಾಟಿದರೂ ತಾವು 20ರ ತರುಣಿ ಎನ್ನುವ ಕಲ್ಪನೆಯಲ್ಲಿಯೇ ಇರುತ್ತಾರೆ. ಇದೇ ‘ಆಂಟಿ’ ವಿವಾದ ಹಿಂದಿಯ ಬಿಗ್‌ಬಾಸ್‌ನಲ್ಲಿ ಭಾರಿ ಕೋಲಾಹಲವನ್ನೇ ಸೃಷ್ಟಿಸಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿಯೂ ಭಾರಿ ಸುದ್ದಿ ಮಾಡುತ್ತಿದೆ.
ಆಗಿದ್ದೇನೆಂದರೆ, ಹಿಂದಿ ಬಿಗ್​ ಬಾಸ್​ ಸೀಜನ್‌ 15 ನಡೆಯುತ್ತಿದೆ. ಇದಾಗಲೇ ಈ ಸರಣಿ ಫಿನಾಲೆ ಹಂತಕ್ಕೆ ಬಂದು ತಲುಪಿದ್ದು, ಕೊನೆಯದಾಗಿ ಐದು ಮಂದಿ ಉಳಿದುಕೊಂಡಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಅವರ ಸಹೋದರಿಯಾಗಿರುವ ನಟಿ ಶಮಿತಾ ಶೆಟ್ಟಿ ಹಾಗೂ ನಟಿಯೇ ಆಗಿರುವ ತೇಜಸ್ವಿ ಪ್ರಕಾಶ್‌ ಕೂಡ ಫಿನಾಲೆಯಲ್ಲಿ ಇದ್ದಾರೆ. ಈಗ ಈ ನಟಿಯರಿಬ್ಬರ ನಡುವೆ ಭಾರಿ ಗಲಾಟೆ ನಡೆದಿದೆ. ಅದಕ್ಕೆ ಕಾರಣ, ತೇಜಸ್ವಿ ಅವರು ಶಮಿತಾ ಅವರನ್ನು ‘ಆಂಟಿ’ ಎಂದು ಕರೆದಿರುವುದು.
ಶಮಿತಾ ಅವರಿಗೆ 42 ವರ್ಷ ವಯಸ್ಸಾಗಿದ್ದು, ತೇಜಸ್ವಿಗೆ 28 ವರ್ಷ ವಯಸ್ಸು. ಆದ್ದರಿಂದ ಸಹಜವಾಗಿ ತೇಜಸ್ವಿ ಶಮಿತಾರನ್ನು ಆಂಟಿ ಎಂದಿದ್ದು, ಇದು ಶಮಿತಾ ಅವರನ್ನು ಕೆರಳಿಸಿದೆ. ಇವರಿಬ್ಬರ ನಡುವೆ ಬಿಗ್‌ಬಾಸ್‌ ಮನೆಯೊಳಗೆ ಸಾಕಷ್ಟು ಬಾರಿ ಇದೇ ವಿಷಯವಾಗಿ ಜಗಳವೂ ಆಗಿದೆ.
ಇದು ಬಿಗ್‌ಬಾಸ್‌ ಮನೆಯಿಂದ ಸಾಮಾಜಿಕ ಜಾಲತಾಣದಲ್ಲಿಯೂ ಸುದ್ದಿ ಮಾಡುತ್ತಿದೆ. ಶಮಿತಾ ಅವರು ತೇಜಸ್ವಿಗಿಂತ ಸುಮಾರು 15 ವರ್ಷ ದೊಡ್ಡವರಾಗಿರುವ ಕಾರಣ, ಆಂಟಿ ಅಂದಿದ್ದರಲ್ಲಿ ತಪ್ಪೇನಿಲ್ಲ ಎಂದು ಒಂದಿಷ್ಟು ಮಂದಿ ಹೇಳಿದರೆ, ಶಮಿತಾ ಅಭಿಮಾನಿಗಳು ಮಾತ್ರ ಇದನ್ನು ಸುತರಾಂ ಒಪ್ಪುತ್ತಿಲ್ಲ. ಇದು ಶಮಿತಾ ಅವರ ವಯಸ್ಸಿಗೆ ಅವಮಾನ ಮಾಡಿದಂತೆ ಆಗಿದೆ ಎಂದು ಅವರು ಹೇಳಿದ್ದಾರೆ. ನಟಿ ಬಿಪಾಶಾ ಬಸು ಕೂಡ ತೇಜಸ್ವಿ ಪ್ರಕಾಶ್‌ ವಿರುದ್ಧ ಮಾತನಾಡಿದ್ದಾರೆ!
ಆಂಟಿ ಅಂತ ಕರೆಯೋದು ಯಾವಾಗಿನಿಂದ ಒಂದು ಕೆಟ್ಟ ಪದ ಆಯ್ತು? 45 ವರ್ಷ ವಯಸ್ಸಾದವರನ್ನು ಆಂಟಿ ಎನ್ನದೇ ಯುವತಿ ಎನ್ನಲು ಆಗುತ್ತದೆಯೇ ಎಂದು ಅನೇಕ ಮಂದಿ ಗರಂ ಕೂಡ ಆಗಿದ್ದಾರೆ. ಒಂದು ವೇಳೆ ಆಂಟಿ ಎಂಬ ಪದವನ್ನು ತಪ್ಪಾಗಿ ಅರ್ಥೈಸಿದರೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಅಗೌರವ ತೋರಿಸಿದಂತೆ ಆಗುತ್ತದೆ’ ಎಂದು ಕೆಲವರು ಹೇಳಿದ್ದಾರೆ. ಒಟ್ಟಿನಲ್ಲಿ ‘ಆಂಟಿ’ ಪದ ಜಾಲತಾಣದಲ್ಲಿ ಹಾಟ್‌ ವಿಷಯವಾಗಿದೆ.
ಪುರುಷನ ಮಾತಿಗೆ ಮರುಳಾಗಿ ಆತ ಗಂಡನಾಗುತ್ತಾನೆಂದು ನಂಬಿ ದೇಹ ಒಪ್ಪಿಸೋ ನಿಮ್ಮಂಥವ್ರಿಗೆ ಏನ್‌ ಹೇಳೋದಮ್ಮಾ?

ಇಬ್ಬರು ಯುವತಿಯರ ಜತೆ ಕುಡಿದು ಮತ್ತೇರಿಸಿಕೊಂಡು ಕಿರಿಕ್‌! ನಟ ರಕ್ಷಿತ್‌ ಸೇರಿದಂತೆ ಏಳು ಮಂದಿ ವಿರುದ್ಧ ಎಫ್‌ಐಆರ್‌

ಉ.ಪ್ರದೇಶದ ಸಿಎಂ ಖುರ್ಚಿ ಯಾರಿಗೆ? 2024ರ ಚುನಾವಣೆ ಭವಿಷ್ಯವೇನು? ಖ್ಯಾತ ಜ್ಯೋತಿರ್ವಿಜ್ಞಾನಿ ಅಮ್ಮಣ್ಣಾಯ ಹೇಳಿದ್ದು ಹೀಗೆ…

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eight − 2 =
Remember me
