ಕಾಶೀಪುರ (ಉತ್ತರಾಖಂಡ): ಹಿಂದೂ ಮತ್ತು ಮುಸ್ಲಿಂ ಸಮುದಾಯದವರ ನಡುವೆ ಸಂಘರ್ಷ ಹೆಚ್ಚುತ್ತಿರುವ ನಡುವೆಯೇ ಕೆಲವೆಡೆ ಭಾವೈಕ್ಯ ಮೆರೆಯುತ್ತಿರುವ ಸುದ್ದಿಗಳೂ ಕೇಳುವುದುಂಟು. ಅಂಥ ಒಂದು ವರದಿ ಉತ್ತರಾಖಂಡ್​ನ ಕಾಶೀಪುರದಲ್ಲಿ ನಡೆದಿದೆ.
ಈದ್ಗಾ ಸಮಿತಿಯ ಪದಾಧಿಕಾರಿಗಳೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿರುವ ಹಿಂದೂ ವ್ಯಕ್ತಿಯೊಬ್ಬರ ಇಚ್ಛೆಯಂತೆ ಅವರ ಮರಣದ ನಂತರ ಪುತ್ರಿಯರು ತಮ್ಮ ಜಮೀನನ್ನು ಈದ್ಗಾಗೆ ದಾನ ಮಾಡಿದ್ದಾರೆ. 20,424 ಚದರ ಅಡಿ ಭೂಮಿಯನ್ನು (ಸರಿ ಸುಮಾರು ಎರಡೂವರೆ ಎಕರೆ) ದಾನ ಮಾಡುವ ಮೂಲಕ ಮೃತ ತಂದೆಯ ಕೊನೆಯ ಆಸೆಯನ್ನು ಈಡೇರಿಸಿದ್ದಾರೆ.
ಲಾಲಾ ಬ್ರಿಜಾನಂದನ್ ಪ್ರಸಾದ್ ರಸ್ತೋಗಿ ಎನ್ನುವವರ ಮಕ್ಕಳನ್ನು ಇಂಥದ್ದೊಂದು ಕಾರ್ಯವನ್ನು ಮಾಡಿದ್ದಾರೆ. ಕಾಶಿಪುರದ ಈದ್ಗಾ ಮೈದಾನದ ಬಳಿ ಇವರ ಕೃಷಿ ಭೂಮಿ ಇದೆ. ಬೃಜಾನಂದನ್ ರಸ್ತೋಗಿ ಅವರು ಈ ಭೂಮಿಯನ್ನು ಈದ್ಗಾಕ್ಕಾಗಿ ನೀಡುವ ಇಂಗಿತ ವ್ಯಕ್ತಪಡಿಸಿದ್ದರು. ಇವರು ಬದುಕಿದ್ದಾಗ ಪ್ರತಿ ವರ್ಷವೂ ಈದ್ಗಾಕ್ಕೆ ದೇಣಿಗೆ ನೀಡುತ್ತಿದ್ದರು. ತಮ್ಮ ಮರಣದ ನಂತರ ಈ ಭೂಮಿಯನ್ನು ನೀಡುವಂತೆ ಹೇಳಿದ್ದರು. ಈ ಜಮೀನು ಅವರ ಪುತ್ರಿಯರಾದ ಸರೋಜ್ ರಸ್ತೋಗಿ ಮತ್ತು ಅನಿತಾ ರಸ್ತೋಗಿ ಅವರ ಹೆಸರಿನಲ್ಲಿ ಇತ್ತು.
ಸರೋಜ್ ಮೀರತ್‌ನಲ್ಲಿ ಮತ್ತು ಅನಿತಾ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಆದರೆ ತಮ್ಮ ತಂದೆಯ ಆಸೆಯಂತೆ ಇವರು ಜಮೀನು ದಾನ ಮಾಡಿದ್ದಾರೆ. ಇವರಿಬ್ಬರ ಕುಟುಂಬ ಕಾಶಿಪುರಕ್ಕೆ ಬಂದು ಗಣ್ಯರ ಸಮ್ಮುಖದಲ್ಲಿ ಜಮೀನನ್ನು ಸಮಿತಿಗೆ ದಾನ ಮಾಡಿದರು. ಸಮಿತಿಯು ಜಮೀನಿನಲ್ಲಿ ಗಡಿ ನಿರ್ಮಾಣ ಕಾರ್ಯವನ್ನೂ ಆರಂಭಿಸಿದೆ.
ನೇಪಾಳದ ಪಾರ್ಟಿಗೆ ರಾಹುಲ್ ಹೋಗಿದ್ಯಾಕೆ? ಯಾರೀ ಸ್ನೇಹಿತೆ? ವೈರಲ್​ ವಿಡಿಯೋದ ಅಸಲಿಯತ್ತೇನು?

ಗೋವಾದಲ್ಲಿ ಯಶ್​: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಾಕಿಂಗ್​ ಸ್ಟಾರ್​? ಜ್ಯೋತಿಷಿ ಭವಿಷ್ಯ ನಿಜವಾಗುತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 2 =
Remember me
