ಕರಾಚಿ:ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡುವ ಕೃತ್ಯ ಮತ್ತೆ ಮುಂದುವರೆದಿದೆ. ಕರಾಚಿಯ ರಾಂಚೋರ್ ಲೈನ್ ಪ್ರದೇಶದಲ್ಲಿರುವ ಹಿಂದೂ ದೇಗುಲವೊಂದನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ. ಇಲ್ಲಿರುವ ಗರ್ಭಗುಡಿಯಲ್ಲಿದ್ದ ಜೋಗ್​ ಮಾಯಾ(ದೇವಿ) ಮೂರ್ತಿಯನ್ನು ಸುತ್ತಿಗೆಯಿಂದ ಕುಟ್ಟಿ ಒಡೆದು ಹಾಕಲಾಗಿದೆ.
ಈ ಕುರಿತು ಖುದ್ದು ಪಾಕಿಸ್ತಾನದ ಉರ್ದು ಚಾನಲ್ ವರದಿ ಮಾಡಿದೆ. ಈ ಸುದ್ದಿ ಹರಡುತ್ತಲೇ ಧ್ವಂಸ ಮಾಡಿದ ವ್ಯಕ್ತಿಗಳನ್ನು ಖುದ್ದು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈತನ ವಿರುದ್ಧ ಧರ್ಮ ನಿಂದನೆ ಕೇಸ್‌ಗಳು ದಾಖಲಾಗಿವೆ.
ಅಕ್ಟೋಬರ್​ನಲ್ಲಿ ಸಿಂಧ್​ ಪ್ರಾಂತ್ಯದಲ್ಲಿರುವ ಹನುಮಾನ್​ ದೇವಿ ಮಠ ಮಂದಿರವನ್ನು ದುಷ್ಕರ್ಮಿಗಳು ಅಪವಿತ್ರಗೊಳಿಸಿದ್ದರು. ಮಂದಿರದ ಬೀಗ ಮುರಿದು ನಗದು, ಆಭರಣಗಳನ್ನು ಕಳವು ಮಾಡಿದ್ದರು. ದೇವಿಯ ಕುತ್ತಿಗೆಯಲ್ಲಿದ್ದ ಬೆಳ್ಳಿ ನೆಕ್ಲೆಸ್​​ನ್ನು ಕೂಡ ಕಳವು ಮಾಡಿದ್ದರು. ಕಾಣಿಕೆ ಡಬ್ಬವನ್ನು ಹೊತ್ತೊಯ್ದಿದ್ದರು. ಆಗಸ್ಟ್​ನಲ್ಲಿ ರಹೀಮ್​ ಖಾನ್ ಯಾರ್​ ಖಾನ್​ ಜಿಲ್ಲೆಯಲ್ಲಿರುವ, ಭೋಂಗ್​ ನಗರದಲ್ಲಿದ್ದ ಈ ಸಿದ್ಧಿವಿನಾಯಕ ದೇವಸ್ಥಾನವನ್ನು ಧ್ವಂಸಗೊಳಿಸಲಾಗಿತ್ತು. ವಿಗ್ರಹವನ್ನು ಗರ್ಭಗುಡಿಯಿಂದ ತೆಗೆದು, ಅದನ್ನು ಬೆಂಕಿಯಿಂದ ಸುಟ್ಟಿದ್ದರು.
ಈ ಘಟನೆಯನ್ನು ಬಿಜೆಪಿ ನಾಯಕ ಮಂಜಿಂದರ್ ಸಿಂಗ್​ ಸಿರ್ಸಾ ತೀವ್ರವಾಗಿ ಖಂಡಿಸಿದ್ದಾರೆ. ಇದು ಅಲ್ಲಿನ ಸರ್ಕಾರ ಬೆಂಬಲಿತ ಕೃತ್ಯವಾಗಿದೆ. ಧ್ವಂಸಗೊಳಿಸಿರುವ ದೇವಸ್ಥಾನವಿದ್ದ ಜಾಗ ಪೂಜಾ ಸ್ಥಳವಾಗಲು ಯೋಗ್ಯವಾದುದ್ದಲ್ಲ ಎಂದು ಅದನ್ನು ನಾಶ ಮಾಡಿದವರು ಸಮರ್ಥನೆ ಬೇರೆ ಮಾಡಿಕೊಳ್ಳುತ್ತಿದ್ದಾರೆ. ಇದು ಅಲ್ಪಸಂಖ್ಯಾತರ ವಿರುದ್ಧ ಪಾಕಿಸ್ತಾನ ಸರ್ಕಾರ ಬೆಂಬಲಿತ ಭಯೋತ್ಪಾದನೆ ಎಂದು ಅವರು ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋಗಳು ಇಲ್ಲಿವೆ ನೋಡಿ:
Minorities in Pakistan are distressed with such continued attack on their faith while the Pak Govt chooses to stay mute over such harassment
I urge@DrSJaishankarJi to raise this issue at global level to support the freedom of religion of Hindus/Sikhs across the border@ANIhttps://t.co/fZztRvEGEDpic.twitter.com/LU7lAPZPRz
— Manjinder Singh Sirsa (@mssirsa)December 21, 2021

Another Hindu temple desecrated in Ranchore line, Karachi Pakistan
Attackers justified vandalism saying “ये इबादत के लायक नहीं है”“Temple is unworthy of being aplace of worship”
This is state backed terror against minorities of Pakistan@ANI@republic@ZeeNews@thetribunechdpic.twitter.com/GWxOVE96Hy
— Manjinder Singh Sirsa (@mssirsa)December 21, 2021

ವಿಧಿಯಾಟ ಬಲ್ಲವರಾರು? ಅಪಘಾತವಾದದ್ದು ಎರಡು ಲಾರಿಗಳ ಮಧ್ಯೆ- ಮೃತಪಟ್ಟಿದ್ದು ಆಟೋದಲ್ಲಿದ್ದ ದಂಪತಿ, ಮಗು!

ವೈದ್ಯರಿಗೇಕೆ ಸುಮ್ಮನೆ ದುಡ್ಡುಕೊಡೋದೆಂದು ಯೂಟ್ಯೂಬ್‌ ನೋಡಿ ಡೆಲಿವರಿ ಮಾಡಿಸಿದ ಪತಿ! ಮುಂದಾದದ್ದು ಘೋರ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
