ಜೈಪುರ:ಇಸ್ಲಾಂ ಧರ್ಮದ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ ಮತ್ತು ಇದು ಅತ್ಯಂತ ತಪ್ಪಾಗಿ ಅರ್ಥೈಸಲ್ಪಟ್ಟ ಧರ್ಮವಾಗಿದೆ. ನಿಜವಾಗಿಯೂ ಇಸ್ಲಾಂನಲ್ಲಿ ಇರುವುದೇ ಬೇರೆ, ಈಗ ಆಗುತ್ತಿರುವುದೇ ಬೇರೆ ಎನ್ನುವ ಹಿಂದೂ ಯುವಕ ಶುಭಮ್ ಯಾದವ್ ಇಸ್ಲಾಮಿಕ್ ಅಧ್ಯಯನವನ್ನು ತಮ್ಮ ಜೀವನದ ಗುರಿಯಾಗಿಸಿಕೊಂಡಿದ್ದಾರೆ.
ಇಸ್ಲಾಮಿಕ್ ಅಧ್ಯಯನದಲ್ಲಿ ಕೇಂದ್ರ ವಿಶ್ವವಿದ್ಯಾಲಯದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ, ದೇಶದ ಮೊದಲ ಮುಸ್ಲಿಮೇತರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ರಾಜಸ್ಥಾನದ ಜೈಪುರದ ಅಳ್ವಾರ್​ ವಾಸಿಯಾಗಿರುವ 21 ವರ್ಷದ ಶುಭಮ್ ದೆಹಲಿ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ಪದವೀಧರರು. ಇವರಿಗೆ ಮೊದಲಿನಿಂದಲೂ ಇಸ್ಲಾಂ ಧರ್ಮವನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಹಂಬಲ. ಇದೇ ಕಾರಣಕ್ಕಾಗಿ ಇವರು ಇಸ್ಲಾಮಿಕ್​ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ:ಲವ್​ ಜಿಹಾದಿಗಳಿಗೆ ನಡುಕ- ಈ ರಾಜ್ಯದಲ್ಲಿ ಬರಲಿದೆ ಕಠಿಣ ಕಾನೂನುಇಸ್ಲಾಂ ಧರ್ಮದ ಬಗ್ಗೆ ಅನೇಕ ಮಂದಿ ಬೇರೆ ಬೇರೆ ರೀತಿಯ ಮಾಹಿತಿ ನೀಡುತ್ತಿದ್ದಾರೆ. ಆದರೆ ಈ ಧರ್ಮದಲ್ಲಿ ಇರುವ ಮೂಲದ ಕುರಿತು ಅನೇಕ ವಿಶ್ವ ನಾಯಕರು ಮಾತನಾಡುವುದನ್ನು ಕೇಳಿದ್ದೆ. ಆದ್ದರಿಂದ ಅದರ ಬಗ್ಗೆ ಆಸಕ್ತಿ ಮೂಡಿತು. ಇದೇ ಕಾರಣಕ್ಕೆ ಇದೇ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ತೆಗೆದುಕೊಳ್ಳುವ ಯೋಚನೆ ಮಾಡಿದೆ. ಈ ಮೂಲಕ ನಾನು ಸಮುದಾಯಗಳ ನಡುವಿನ ಸೇತುವೆಯಾಗಿ ಕಾರ್ಯ ರೂಪಿಸಲು ಚಿಂತಿಸಿದ್ದೇನೆ ಎನ್ನುತ್ತಾರೆ ಶುಭಮ್​.
ಶುಭಮ್ ಅವರ ತಂದೆ ಉದ್ಯಮಿ ಮತ್ತು ತಾಯಿ ಗೃಹಿಣಿ. ತಮ್ಮ ತಂದೆಯವರ ಸಹಕಾರದಿಂದ ಇಸ್ಲಾಮಿಕ್​ ಅಧ್ಯಯನ ತೆಗೆದುಕೊಂಡಿರುವುದಾಗಿ ಹೇಳುತ್ತಾರೆ. ಆದರೆ ಈಗಿರುವ ಒಂದೇ ಒಂದು ದೊಡ್ಡ ಚಿಂತೆ ಎಂದರೆ ಕಾಶ್ಮೀರದ ಕಾಲೇಜುಗಳು ಮಾತ್ರ ಇಸ್ಲಾಮಿಕ್ ಅಧ್ಯಯನದಲ್ಲಿ ಕೋರ್ಸ್ ನೀಡುತ್ತಿವೆ. ಆದ್ದರಿಂದ ಶುಭಮ್​ ಅಲ್ಲಿಯೇ ಹೋಗಿ ಕಲಿಯಬೇಕಿದೆ.
“ದೇಶದ 14 ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ, ಕಾಶ್ಮೀರದ ಕಾಲೇಜುಗಳು ಮಾತ್ರ ಇಸ್ಲಾಮಿಕ್ ಅಧ್ಯಯನದಲ್ಲಿ ಕೋರ್ಸ್ ನೀಡುತ್ತಿವೆ.ಆದ್ದರಿಂದ, ನಾನು ಎರಡು ವರ್ಷಗಳ ಕಾಲ ಅಲ್ಲಿ ಇರಬೇಕಿದೆ. ಈ ಮೊದಲು ನಾನು ಕಾಶ್ಮೀರಕ್ಕೆ ಹೋಗಿದ್ದೇನೆ ಮತ್ತು ಅಲ್ಲಿನ ಜನರು ಸ್ನೇಹಪರರಾಗಿದ್ದಾರೆ. ಸಮುದಾಯದ ಬಗ್ಗೆ ನಾವು ಯಾವುದೇ ತಪ್ಪು ಕಲ್ಪನೆಯನ್ನು ಮಾಡಬೇಕು ಎಂದು ನಾನು ಭಾವಿಸುವುದಿಲ್ಲ ಎಂದು ಹೇಳುತ್ತಿದ್ದಾರೆ ಶುಭಮ್​.
ದಿನಕ್ಕೊಂದು ಮೊಟ್ಟೆ- ಶುರುವಾಗುವುದು ಶುಗರ್​: ಅಧ್ಯಯನದಲ್ಲಿ ಆತಂಕದ ವಿಷಯ ಬಹಿರಂಗ!

ಗಲಭೆ ಆರೋಪಿ ಸಂಪತ್​ರಾಜ್​ ಬಗ್ಗೆ ಡಿಕೆಶಿಗೆ ಮೊದಲೇ ಗೊತ್ತಿತ್ತಾ? ಏನು ಹೇಳಿದ್ದಾರೆ ಕೇಳಿ…

ಅಪಘಾತದಲ್ಲಿ ಮಗ ಸತ್ತಿದ್ದಾನೆ ಎಂದು ಪಾಲಕರಿಗೆ ಗೊತ್ತಾದದ್ದು 27 ವರ್ಷಗಳ ಬಳಿಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − six =
Remember me
