ಬೆಂಗಳೂರು:ಸೇನೆಗಳಲ್ಲಿ ಮಹಿಳೆಯರು ಸಾರಥ್ಯ ವಹಿಸುತ್ತಾ ಹಲವಾರು ಸಾಧನೆಗಳನ್ನು ಮಾಡುತ್ತಿರುವುದು ಇತ್ತೀಚಿನ ಬೆಳವಣಿಗೆ. ಕೇವಲ ಪುರುಷರಿಗಷ್ಟೇ ಸಾಧ್ಯ ಎಂದುಕೊಂಡಿದ್ದ ಸೇನೆಯೆಂಬ ಕೋಟೆಯನ್ನು ಭೇದಿಸಿ ಅಲ್ಲಿ ಮಹಿಳೆಯರು ನುಗ್ಗಿ ಸಾಧನೆ ಮಾಡುತ್ತಿದ್ದಾರೆ.
ಅಂಥದ್ದೇ ಒಂದು ಸಾಧನೆಯನ್ನು ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ ನಾಲ್ವರು ಪೈಲಟ್‌ಗಳು. ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯ ಪೈಲಟ್‌ಗಳಾಗಿರುವ ಕ್ಯಾಪ್ಟನ್ ಜೋಯಾ ಅಗರ್‌ವಾಲ್‌, ಕ್ಯಾಪ್ಟನ್ ಪಾಪಗರಿ ತನ್ಮೈ, ಕ್ಯಾಪ್ಟನ್ ಆಕಾಶಾ ಸೋನಾವೇರ್ ಮತ್ತು ಕ್ಯಾಪ್ಟನ್ ಶಿವಾನಿ ಮನ್ಹಾಸ್ ಅವರನ್ನೊಳಗೊಂಡ ತಂಡವು ಹೊಸ ದಾಖಲೆ ನಿರ್ಮಿಸಿದೆ.
ಸ್ಯಾನ್‌ ಫ್ರಾನ್ಸಿಸ್ಕೊ- ಬೆಂಗಳೂರು ನಡುವಣ ವಿಶ್ವದ ಅತೀ ದೀರ್ಘ ವಾಯು ಮಾರ್ಗದ ವಿಮಾನಯಾನವನ್ನು ಸಂಪೂರ್ಣವಾಗಿ ನಿರ್ವಹಿಸುವ ಮೂಲಕ ಹೊಸ ಇತಿಹಾಸ ದಾಖಲಿಸಿದ್ದಾರೆ. ಸ್ಯಾನ್‌ ಫ್ರಾನ್ಸಿಸ್ಕೊ – ಬೆಂಗಳೂರು ನಡುವಿನ ಮಾರ್ಗವು ವಿಶ್ವದ ಅತ್ಯಂತ ದೀರ್ಘ ವಾಯು ಮಾರ್ಗವಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಿಮಾನಗಳು ಭೂಮಿಯ ಮೇಲಿನ ದುರ್ಗಮ ಪ್ರದೇಶ ಎನ್ನುವ ಉತ್ತರ ಧ್ರುವವನ್ನು ದಾಟಿ ಬರುತ್ತವೆ.
#FlyAI: Welcome HomeCapt Zoya Agarwal, Capt Papagiri Thanmei, Capt Akanksha & Capt Shivani after completing a landmark journey with touchdown@BLRAirport.
Kudos for making Air India proud.
We also congratulate passengers of AI176 for being part of this historic moment.pic.twitter.com/UFUjvvG01h
— Air India (@airindiain)January 10, 2021

ಮಹಿಳಾ ಪೈಲಟ್‌ಗಳ ನಿರ್ವಹಣೆಯ ವಿಮಾನವು ಉತ್ತರ ಧ್ರುವದ ಮೇಲೆ ಹಾರಿ, ಅಟ್ಲಾಂಟಿಕ್ ಮಾರ್ಗದ ಮೂಲಕ, 16,000 ಕಿ.ಮೀ ದೂರವನ್ನು ಕ್ರಮಿಸಿ ಬೆಂಗಳೂರಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಶನಿವಾರ ರಾತ್ರಿ 8.30ಕ್ಕೆ (ಸ್ಥಳೀಯ ಸಮಯ) ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೊದಿಂದ ಹೊರಟ ಎಐ 176 ವಿಮಾನ, , ಸೋಮವಾರ (ಸ್ಥಳೀಯ ಸಮಯ) ಮುಂಜಾನೆ 4ಗಂಟೆ ಸುಮಾರಿನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು.
ಈ ಕುರಿತು ತಮ್ಮ ಅನುಭವಗಳನ್ನು ಈ ಪೈಲಟ್‌ಗಳು ಬಿಚ್ಚಿಟ್ಟಿದ್ದು ಹೀಗೆ:ಉತ್ತರ ಧ್ರುವವನ್ನು ಹಾದು ಬಂದು ಹೊಸ ಇತಿಹಾಸ ಸೃಷ್ಟಿ ಮಾಡಿದ್ದೇವೆ. ಈ ಸಾಧನೆಯ ಭಾಗವಾಗಿರುವುದಕ್ಕೆ ನಮಗೆ ತುಂಬಾ ಹೆಮ್ಮೆ ಎನಿಸಿದೆ. ಈ ಮಾರ್ಗವು 10 ಟನ್ ಇಂಧನವನ್ನು ಉಳಿಸಿದೆ ಎಂದು ಕ್ಯಾಪ್ಟನ್ ಜೊಯಾ ಅಗರ್ವಾಲ್ ಹೇಳಿದ್ದರೆ, ಇದೊಂದು ರೋಮಾಂಚನಕಾರಿ ಅನುಭವ ನೀಡಿತು ಎಂದಿದ್ದಾರೆ ಶಿವಾನಿ ಮನ್ಹಾಸ್.
‘ಇದು ಹಿಂದೆಂದೂ ನಡೆಯದೇ ಇದ್ದ ವಿದ್ಯಮಾನ. ಈ ಸಾಹಸ ರೋಮಾಂಚಕಾರಿ ಅನುಭವ ನೀಡಿತು. ಸ್ಯಾನ್‌ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ಬರಲು ಸುಮಾರು 17 ಗಂಟೆಗಳು ಬೇಕಾಯಿತು ಎಂದು ಅವರು ಮಾಹಿತಿ ನೀಡಿದರು.
ಹೆಂಡ್ತಿಯೂ ಬೇಕು, ಚಿಕ್ಕಮ್ಮನೂ ಬೇಕು ಎಂದ ಯುವಕ: ಆಂಟಿಯ ತುಂಟಾಟಕ್ಕೆ ಹೆಣವಾದ!

ಕರೊನಾದ ಅವತಾರಗಳು ಮುಗಿಯುತ್ತಿಲ್ಲ… ಬ್ರಿಟನ್‌ ಆಯ್ತು, ಈಗ ಜಪಾನ್‌ನಲ್ಲಿ ಮತ್ತೊಂದು ‘ವೇಷ’

ಮಕ್ಕಳು ಪಾಲಕರನ್ನು ಕಡೆಗಣಿಸುತ್ತಿದ್ದರೆ, ಅವರಿಗೆ ಆಸ್ತಿ ಕೊಡದೇ ಮಾರಲು ಅವಕಾಶವಿದೆಯಾ?

ಮಕ್ಕಳು ಪಾಲಕರನ್ನು ಕಡೆಗಣಿಸುತ್ತಿದ್ದರೆ, ಅವರಿಗೆ ಆಸ್ತಿ ಕೊಡದೇ ಮಾರಲು ಅವಕಾಶವಿದೆಯಾ?

ಒಂಟಿಯಾಗಿ ಕಾರಿನಲ್ಲಿ ಪ್ರಯಾಣಿಸುವಾಗ ಮಾಸ್ಕ್‌ ಕಡ್ಡಾಯ ಮಾಡಿಲ್ಲ: ಹೈಕೋರ್ಟ್‌ಗೆ ಕೇಂದ್ರದ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
