ನವದೆಹಲಿ:ಕ್ರೀಡಾಪಟುಗಳ ಗೆದ್ದಾಗ ಅವರಿಗೆ ಎಲ್ಲೆಡೆಯಿಂದಲೂ ಶ್ಲಾಘನೆಗಳ ಹೊಗಳಿಕೆಯ ಮಹಾಪೂರವೇ ಹರಿದುಬರುತ್ತದೆ. ಗಣ್ಯಾತಿಗಣ್ಯರು ಅವರಿಗೆ ವಿಷ್​ ಮಾಡುತ್ತಾರೆ. ಆದರೆ ಪಂದ್ಯದಲ್ಲಿ ಗೆಲ್ಲಲು ಹಗಲಿರುಳು ಶ್ರಮಿಸಿದರೂ ಗೆಲ್ಲಲು ಸಾಧ್ಯವಾಗದ ಕ್ರೀಡಾಪಟುಗಳನ್ನು ಕೇಳುವವರು, ಅವರ ನೋವಿಗೆ ಸ್ಪಂದಿಸುವವರು ತೀರಾ ಕಮ್ಮಿ ಎಂದೇ ಹೇಳಬೇಕು.
ಆದರೆ ಇದಕ್ಕೆ ವಿರುದ್ಧವಾಗಿ ಇದೀಗ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಟೋಕಿಯೊ ಒಲಿಂಪಿಕ್ಸ್​ ಹಾಕಿ ಪಂದ್ಯದಲ್ಲಿ ಸೋತ ವನಿತೆಯರಿಗೆ ಸಾಂತ್ವನ ಮಾಡಿ, ನೀವು ನಮ್ಮ ಭಾರತದ ಹೆಮ್ಮೆ ಎಂದು ಹುರಿದುಂಬಿಸಿದ್ದಾರೆ. ರಾಣಿ ರಾಂಪಾಲ್ ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡವು ಕೊನೆ ಕ್ಷಣದಲ್ಲಿ ಕಂಚಿನ ಪದಕ ಗೆಲ್ಲದೇ ಪರಾಭವಗೊಂಡಿತು. ಗ್ರೇಟ್‌ ಬ್ರಿಟನ್ ಎದುರಿನ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡವು 4-3 ಗೋಲುಗಳ ಅಂತರದ ಸೋಲು ಅನುಭವಿಸಿತ್ತು.
ಪರಾಭವಗೊಂಡ ಹಿನ್ನೆಲೆಯಲ್ಲಿ ವನಿತೆಯರು ಕಣ್ಣೀರು ಸುರಿಸಿದ್ದಾರೆ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಸಾಂತ್ವನ ಮಾಡಿದ್ದಾರೆ. ನಿಮ್ಮ ಸಾಧನೆಯ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ ಎಂದು ಹುರಿದುಂಬಿಸಿದ್ದಾರೆ. ಅಮೋಘ ಪ್ರದರ್ಶನ ತೋರುವ ಮೂಲಕ ಹಾಕಿ ಗತವೈಭವ ಮರುಕಳಿಸುವಂತೆ ಮಾಡಿದ್ದೀರ. ನೀವು ಕಣ್ಣೀರು ಹಾಕಬೇಡಿ. ನಿಮ್ಮ ಸಾಧನೆಯ ಬಗ್ಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ ಎಂದಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ: ಕೃಪೆ ಎಬಿಪಿ ನ್ಯೂಸ್​

ಶಾಲೆ, ಪಿಯು ಆರಂಭಕ್ಕೆ ಸಿಕ್ತು ಗ್ರೀನ್​ ಸಿಗ್ನಲ್​- ನೈಟ್​ ಕರ್ಫ್ಯೂ ಸಮಯದಲ್ಲೂ ವ್ಯತ್ಯಾಸ: ಇಲ್ಲಿದೆ ಡಿಟೇಲ್ಸ್​

ಪತ್ನಿ 15 ವರ್ಷದವಳಾಗಿದ್ದು ಲೈಂಗಿಕ ಕ್ರಿಯೆ ನಡೆಸಿದರೆ ಅದು ರೇಪ್​ ಅಲ್ಲ ಎಂದ ಹೈಕೋರ್ಟ್​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 + fifteen =
Remember me
