ಪಟ್ನಾ (ಬಿಹಾರ):ದೇಶಾದ್ಯಂತ ಇಂದು ಹೋಳಿ ಹಬ್ಬ ಆಚರಿಸಲಾಗುತ್ತಿದೆ. ಕೆಲವು ಪ್ರಾಂತ್ಯಗಳಲ್ಲಿ ಈ ಆಟದ ಮಜವೇ ಬೇರೆ. ವಯಸ್ಸಿನ ಹಂಗು ಇಲ್ಲದೇ ಎಲ್ಲಾ ವಯೋಮಾನದವರೂ ಈ ಹಬ್ಬವನ್ನು ಖುಷಿಯಿಂದ ಆಚರಿಸುತ್ತಾರೆ.
ಹೋಳಿ ಎಂದಾಕ್ಷಣ ನೆನಪಾಗುವುದು ಬಣ್ಣ. ಬಣ್ಣದ ಓಕುಳಿ ಎರಚಿ ಸಂಭ್ರಮಿಸುವ ಪರಿಪಾಠ ಹಲವೆಡೆ ಇದೆ. ಆದರೆ ಇಷ್ಟೇ ಅಲ್ಲದೇ ಕೆಲವೆಡೆ ಹೂವುಗಳನ್ನು ಮಣ್ಣನ್ನು ಎರೆಚಿ ಹಬ್ಬ ಆಚರಿಸುವುದು ಇದೆ.
ಆದರೆ ಪಾಟ್ನಾದ ಸಂಪತ್ಚಾಕ್​ನಲ್ಲಿ ಮಾತ್ರ ಅಚ್ಚರಿ ಎನಿಸುವಂತೆ ಹೋಳಿ ಹಬ್ಬ ಆಚರಿಸಲಾಗಿದೆ. ಇಲ್ಲಿಯ ವಾಟರ್ ಪಾರ್ಕ್‌ನಲ್ಲಿ “ಹೋಳಿ ಮಿಲನ್’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರ ವಿಶೇಷತೆ ಎಂದರೆ ಇಲ್ಲಿ ಜನರು ಚಪ್ಪಲಿಗಳನ್ನು ಪರಸ್ಪರ ಎಸೆದುಕೊಂಡು ಹೋಳಿಯನ್ನು ಆಚರಿಸಿದ್ದಾರೆ!
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ವಿಡಿಯೋ ನೋಡಿದರೆ ಅಲ್ಲಿ ಎಲ್ಲರೂ ಚಪ್ಪಲಿ ಎಸೆಯುತ್ತಾ ನಕ್ಕು ನಲಿಯುತ್ತ ಖುಷಿಯಿಂದ ಇರುವಂತೆ ಕಾಣುತ್ತಿದೆ. ಆದರೆ ಅಸಲಿಗೆ ಅಲ್ಲಿ ನಡೆದದ್ದೇ ಬೇರೆ. ಅದೇನೆಂದರೆ ಹೋಳಿ ಹಬ್ಬದ ವೇಳೆ ಎರಡು ಗುಂಪುಗಳ ನಡುವೆ ಜಗಳ ಶುರುವಾಗಿದೆ. ಈ ವೇಳೆ ಒಂದು ಗುಂಪಿನವರು ಇನ್ನೊಂದು ಗುಂಪಿನತ್ತ ಚಪ್ಪಲಿ ಎಸೆದಿದ್ದಾರೆ. ಆಗ ಇನ್ನೊಂದು ಗುಂಪಿನವರೂ ಹಾಗೆಯೇ ಮಾಡಿದ್ದಾರೆ. ಹೀಗೆ ಎರಡೂ ಗುಂಪಿನವರು ಚಪ್ಪಲಿಗಳನ್ನು ಎಸೆದಾಡಿಕೊಂಡಿದ್ದಾರೆ.
ಚಪ್ಪಲಿ ಎಸೆತ ನಿಲ್ಲಿಸುವಂತೆ ಕಾರ್ಯಕ್ರಮದ ಆಯೋಜಕರು ಪದೇ ಪದೇ ಘೋಷಣೆ ಮಾಡಿದರೂ ಪ್ರಯೋಜನವಾಗಿಲ್ಲ. ಆ ನಂತರ ಸಂಘಟಕರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಆದರೆ ಈ ವಿಡಿಯೋ ನೋಡಿದರೆ ಮಾತ್ರ ಅಸಲಿಯತ್ತು ತಿಳಿಯುವುದೇ ಇಲ್ಲ!
ವಿಡಿಯೋ ಇಲ್ಲಿದೆ ನೋಡಿ…
La ‘Chappal’atino!!https://t.co/i8o7oU6sdH
— Chintan 😷 (@ItsChintann)March 17, 2022

ಹುಬ್ಬಳ್ಳಿ ಕಿಮ್ಸ್​ನಿಂದ ಪ್ರೊಫೆಸರ್, ಅಸಿಸ್ಟೆಂಟ್​ ಪ್ರೊಫೆಸರ್​ ಸ್ಟೆನೋಗ್ರಾಫರ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

15 ಸಾವಿರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ: ಈ ಬಾರಿ ಇವೆ ಹಲವು ವಿಶೇಷ- ಇಲ್ಲಿದೆ ಡಿಟೇಲ್ಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 16 =
Remember me
