ಪ್ರತಾಪಗಢ (ಉತ್ತರ ಪ್ರದೇಶ):ಕುಡಿದ ಅಮಲಿನಲ್ಲಿ ವ್ಯಕ್ತಿಗಳಿಗೆ ತಮ್ಮ ಮೈಮೇಲೆ ಪರಿವೇ ಇರದ ಹಿನ್ನೆಲೆಯಲ್ಲಿ ಅವರು ಅಸಾಧ್ಯ ಎನಿಸುವುದನ್ನೂ ಆ ವೇಳೆ ಮಾಡಬಲ್ಲರು. ಎಲ್ಲವೂ ಸರಿಯಾಗಿದ್ದಾಗ, ಮನಸ್ಸು ಸಮಸ್ಥಿತಿಯಲ್ಲಿ ಇದ್ದಾಗ ಸಾಧ್ಯವೇ ಇಲ್ಲ ಎಂದುಕೊಂಡಿದ್ದನ್ನು ಗುಂಡು ಒಳಗೆ ಹೋದಾಗ ಮಾಡಿಸುತ್ತದೆ.
ಅಂಥದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ನಿನ್ನೆ ಹೋಳಿ ಹಬ್ಬದ ಪ್ರಯುಕ್ತ ಎಲ್ಲರೂ ರಂಗಿನಾಟದಲ್ಲಿ ಮುಳುಗಿದ್ದರೆ, ಉತ್ತರ ಪ್ರದೇಶದ ಪ್ರತಾಪಗಢದ ವ್ಯಕ್ತಿಯೊಬ್ಬ ಫುಲ್​ ಟೈಟ್​ ಆಗಿ ಸಾಮಾನ್ಯ ಜನರಿಂದ ಅಸಾಧ್ಯ ಎನಿಸಿರುವ ವಾಟರ್​ಟ್ಯಾಂಕ್​ ಏರಿದ್ದಾನೆ.
ನಡೆಯಲು ಕೂಡ ಸಾಧ್ಯವಾಗದಿದ್ದ ಈ ವ್ಯಕ್ತಿ ಕುಡಿದ ಮತ್ತಿನಲ್ಲಿ 50 ಅಡಿ ಎತ್ತರದ ವಾಟರ್ ಟ್ಯಾಂಕ್ ಏರಿದ್ದೂ ಅಲ್ಲದೇ ಅಲ್ಲಿ ಮೊಬೈಲ್​ ಫೋನಿನಲ್ಲಿ ಹಾಡನ್ನು ಹಾಕಿಕೊಂಡು ಡಾನ್ಸ್​ ಮಾಡಿದ್ದಾನೆ. ಸ್ವಲ್ಪ ಎಡವಟ್ಟಾಗಿದ್ದರೂ ಸೀದಾ ಆತ ಕೆಳಕ್ಕೆ ಬೀಳುತ್ತಿದ್ದ. ಆದರೆ ಕುಡಿದಾಗ ಆತನಿಗೆ ಅರಿವು ಇದ್ದರೆ ತಾನೆ?
ಆದರೆ ಈತನ ನೃತ್ಯ ನೋಡಿದವರು ಮಾತ್ರ ಸಿಕ್ಕಾಪಟ್ಟೆ ಭಯ ಬಿದ್ದಿದ್ದಾರೆ. ಕೆಳಕ್ಕೆ ಇಳಿಯುವಂತೆ ಹೇಳಿದರೂ ಆತ ಜನರನ್ನು ನೋಡಿ ಮತ್ತಷ್ಟು ಉತ್ತೇಜನಗೊಂಡು ಡಾನ್ಸ್​ ಮುಂದುವರೆಸಿದ್ದಾನೆ. ನಂತರ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಂತರ ಪೊಲೀಸರು ಕೂಡಲೇ ಸ್ಥಳಕ್ಕೆ ತಲುಪಿ ಈತನನ್ನು ಕೆಳಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತ ಮಾಡಿರುವ ಸಾಹಸದ ವಿಡಿಯೋ ವೈರಲ್​ ಆಗಿದೆ.
9ನೇ ತರಗತಿವರೆಗೆ ಶಾಲೆ ನಡೆಯಲ್ಲ- ಸಚಿವ ಸುರೇಶ್​ಕುಮಾರ್​ ನೀಡಿರುವ ವಿವರ ಇಲ್ಲಿದೆ ನೋಡಿ…

VIDEO: ಕ್ಷೇತ್ರದ ಹೆಸರು ಬದಲಿಸಬೇಡಿ ಎನ್ನುತ್ತಲೇ ಸಭೆಯಲ್ಲಿಯೇ ಪ್ರಾಣ ಬಿಟ್ಟ ಪಂಚಾಯಿತಿ ಮುಖಂಡ

ಸಿಡಿ ಪ್ರಕರಣ: ಪ್ರಕರಣ ಮುಕ್ತಾಯವಾದ ಮೇಲೆ ಬಂಧನದ ಪ್ರಶ್ನೆ ಮಾಡ್ರಪ್ಪ ಎಂದ ಪೊಲೀಸ್​ ಮಹಾನಿರ್ದೇಶಕ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten + 5 =
Remember me
