ಜಬಲ್​ಪುರ (ಮಧ್ಯಪ್ರದೇಶ):ಈಗಿನ ಕಾಲದಲ್ಲಿ ಗಂಡ-ಹೆಂಡತಿ ಇಬ್ಬರ ದುಡಿಮೆಯೂ ಅನಿವಾರ್ಯವಾಗಿದೆ. ಕೆಲವೊಮ್ಮೆ ಅನಿವಾರ್ಯ ಅಲ್ಲದಿದ್ದರೂ ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೋ ಅಥವಾ ಸ್ವಂತ ದುಡಿಮೆ ಇರಬೇಕು ಎನ್ನುವ ಕಾರಣದಿಂದಲೋ ಮಹಿಳೆಯರೂ ನೌಕರಿಗೆ ಹೋಗುವುದು ಮಾಮೂಲು. ಇಂಥ ಸಂದರ್ಭಗಳಲ್ಲಿ ತಮ್ಮ ಪುಟ್ಟ ಮಕ್ಕಳನ್ನು ನೋಡಿಕೊಳ್ಳಲು ಆಯಾಗಳನ್ನು ನೇಮಿಸಿಕೊಳ್ಳುತ್ತಾರೆ. ಆದರೆ ಇಂಥ ಪಾಲಕರು ಭಯ ಬೀಳುವಂಥ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಎರಡು ವರ್ಷದ ಕಂದಮ್ಮನ ಮೇಲೆ ಆಯಾ ಒಬ್ಬಳು ಅಮಾನುಷವಾಗಿ ನಡೆದುಕೊಳ್ಳುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ. ಮಗುವನ್ನು ಮನಬಂದಂತೆ ಥಳಿಸುತ್ತಿರುವುದು ಇದರಿಂದ ತಿಳಿದು ಬಂದಿದೆ.
ಮುಖೇಶ್ ವಿಶ್ವಕರ್ಮ ದಂಪತಿಯ ಮಗು ರಜನಿ ಚೌಧರಿ ಎಂಬ ಆಯಾಳಿಂದ ದೌರ್ಜನ್ಯಕ್ಕೆ ಒಳಗಾಗಿರುವ ಆಘಾತಕಾರಿ ಘಟನೆ ಇದು. ಮುಖೇಶ್​ ಅವರು ವಿದ್ಯುತ್ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಅವರ ಪತ್ನಿಯೂ ಉದ್ಯೋಗಸ್ಥೆ. ಈ ದಂಪತಿ ಎರಡು ತಿಂಗಳ ಹಿಂದೆ ರಜನಿ ಚೌಧರಿ ಎಂಬ ಆಯಾಳನ್ನು ಮಗು ನೋಡಿಕೊಳ್ಳಲು ನೇಮಿಸಿಕೊಂಡಿದ್ದರು.
ಮಗು ದಿನದಿಂದ ದಿನಕ್ಕೆ ಅನಾರೋಗ್ಯಪೀಡಿತವಾಗುವುದನ್ನು ಕಂಡ ದಂಪತಿಗೆ ಅನುಮಾನ ಬಂದು ಸಿಸಿಟಿವಿ ಪರಿಶೀಲಿಸಿದಾಗ ಹೌಹಾರಿ ಹೋಗಿದ್ದಾರೆ. ಮಗುವನ್ನು ಆಯಾ ಥಳಿಸುವುದು, ಕೂದಲು ಹಿಡಿದು ಎಳೆದಾಡಿದ್ದು, ಬಾತ್ ರೂಂನಲ್ಲಿ ಬೀಗ ಹಾಕಿ ಕೂಡಿ ಹಾಕಿರುವುದು, ಬೆನ್ನು ಮತ್ತು ಹೊಟ್ಟೆಗೆ ಬಲವಾಗಿ ಗುದ್ದುವುದು, ಹಾಸಿಗೆಯ ಮೇಲೆ ಕುಳಿತ ಅಮಾಯಕ ಮಗುವಿನ ಕತ್ತು ಹಿಸುಕುವುದು ಎಲ್ಲವೂ ಸಿಸಿಟಿವಿಯಲ್ಲಿ ದಾಖಲಾಗಿದೆ.
ಇದನ್ನು ಕಂಡು ಬೆಚ್ಚಿಬಿದ್ದಿರುವ ಪಾಲಕರು ಮಗುವನ್ನು ಆಸ್ಪತ್ರೆಗೆ ತೋರಿಸಿದಾಗ ಮಗುವಿನ ಕರುಳಿನಲ್ಲಿ ಸೋಂಕು ತಗುಲಿರುವುದು ಕಂಡಿದೆ. ಇದನ್ನು ನೋಡಿದ ಬಳಿಕ ಕೆಲಸದಿಂದ ತೆಗೆದುಹಾಕಲು ಪಾಲಕರು ಹೊರಟಿದ್ದಾರೆ. ಆದರೆ ಎಸ್‌ಟಿ/ಎಸ್‌ಸಿ ದೌರ್ಜನ್ಯ ಕಾಯ್ದೆಯಡಿ ಇಡೀ ಕುಟುಂಬವನ್ನು ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ದಂಪತಿ ದೂರಿದ್ದಾಳೆ.
ಆದರೂ ಜಗ್ಗದ ದಂಪತಿ, ಪೊಲೀಸರಿಗೆ ದೂರು ನೀಡಿ ಸಿಸಿಟಿವಿ ತೋರಿಸಿದ್ದಾರೆ.ರಜನಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ ಪೊಲೀಸರು. ಓಡಿ ಹೋಗಲು ಯತ್ನಿಸಿದಾಕೆಯನ್ನು ಹಿಡಿದು ಬಂಧಿಸಿದ್ದಾರೆ.
ಗ್ಯಾಂಗ್​ರೇಪ್​ ಆರೋಪಿಗಳಿಗೆ ಫೈವ್​ಸ್ಟಾರ್​ ಬಿರಿಯಾನಿ? ಕಾಂಡೋಮ್​ ಬಳಸಿದ್ದವರಿಗೆ ವಿಐಪಿ ಟ್ರೀಟ್​ಮೆಂಟ್​!

‘ತಂಗೀ… ಗಂಡನ ಜತೆ ಮನೆಗೆ ಊಟಕ್ಕೆ ಬಾ’ ಎಂದು ನವವಿವಾಹಿತರನ್ನು ಕರೆದು ಇಬ್ಬರ ಕೊಲೆ ಮಾಡಿದ ಅಣ್ಣ!

ಇಂಜಿನಿಯರ್​ನ ಹಣದ ದಾಹಕ್ಕೆ ಅಮ್ಮ-ಮಗು ಬಲಿ! ಕಂದನಿಗೆ ನೇಣುಬಿಗಿದು ಆತ್ಮಹತ್ಯೆಗೆ ಶರಣು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − six =
Remember me
