ಜಗದಲ್‌ಪುರ (ಛತ್ತೀಸ್​ಗಢ):ಬಸ್​ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ರಾಯ್‌ಪುರ ಜಗದಲ್‌ಪುರದ ಹೆದ್ದಾರಿ ಬಳಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 30ರ ಸೇತುವೆ ಬಳಿ ಈ ಘಟನೆ ನಡೆದಿದೆ. ಇಂದು ನಸುಕಿನ ವೇಳೆ ರಾಯ್​ಪುರ ಕಡೆಯಿಂದ ಬರುತ್ತಿದ್ದ ಟಾಟಾ ನೆಕ್ಸಾನ್​ ಕಾರಿಗೆ ಬಸ್​ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಬಸ್​ನ ಚಾಲಕ ಮತ್ತು ಕಂಡಕ್ಟರ್​ ಇಬ್ಬರೂ ಪರಾರಿಯಾಗಿದ್ದಾರೆ.
ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಐವರು ಯುವಕ ಪೈಕಿ ನಾಲ್ವರು ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿರುವ ಓರ್ವನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತದೇಹಗಳನ್ನು ಹೊರತೆಗೆಯಲು ಗ್ಯಾಸ್ ಕಟ್ಟರ್‌ಗಳನ್ನು ಬಳಸಬೇಕಾಗಿ ಬಂತು. ಮೃತಪಟ್ಟ ಯುವಕರು ಜಗದಲ್‌ಪುರದ ವಿವಿಧ ಸ್ಥಳಗಳಿಂದ ಬಂದಿದ್ದರೆ, ಒಬ್ಬ ಯುವಕ ಸುಕ್ಮಾ ಜಿಲ್ಲೆಯವನು ಎಂದು ಹೇಳಲಾಗುತ್ತಿದೆ.(ಏಜೆನ್ಸೀಸ್​)
VIDEO: ಸಿಎಂ ನಿತೀಶ್​ ಕುಮಾರ್​ ಫಾರಿನ್​ ಲೇಡಿ ಇದ್ದಂಗೆ, ಯಾಕೆಂದ್ರೆ…. ಬಿಜೆಪಿ ನಾಯಕನ ಮಾತಿಗೆ ಕಾಂಗ್ರೆಸ್​ ಗರಂ

ಪ್ರಿಯಕರನ ಪ್ರಾಣಕ್ಕೆ ಕುತ್ತು ತಂದ ‘ಕಿಸ್’​: ಮುತ್ತು ಕೊಟ್ಟ ತಕ್ಷಣ ಸತ್ತೇ ಹೋದ! ಪ್ರೇಯಸಿ ಅರೆಸ್ಟ್

ಪಾದಯಾತ್ರೆಗೆ ಹೋಗಿದ್ದ ಕೋಲಾರದ ವ್ಯಕ್ತಿ ನಾಪತ್ತೆ! ಹಣದ ಆಮಿಷ ಒಡ್ಡಿದ್ರು, ಈಗ ಕೇಳೋರೆ ಇಲ್ಲ ಎಂದು ಗೋಳಾಡ್ತಿರೋ ಕುಟುಂಬಸ್ಥರು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four + four =
Remember me
