ಕಲಾಬ್ರೀಯಾ (ಇಟಲಿ):ಈ ಶೀರ್ಷಿಕೆ ನೋಡಿ ಎಲ್ಲೋ ತಪ್ಪಾಗಿದೆ ಎಂದುಕೊಂಡ್ರಾ? ಎಲ್ಲೂ ತಪ್ಪಾಗಿಲ್ಲ. 87 ಲಕ್ಷವೂ ಅಲ್ಲ, 87 ಸಾವಿರವೂ ಅಲ್ಲ… ನಿಜವಾಗಿಯೂ ಈ ಗ್ರಾಮದಲ್ಲಿ ಕೇವಲ 87 ರೂಪಾಯಿಗೆ ಮನೆ ಸಿಗುತ್ತೆ!
ಆದರೆ ಇಂಥದ್ದೊಂದು ಗ್ರಾಮದಲ್ಲಿ ಮನೆ ಖರೀದಿಗೆ ಹೋಗಬೇಕಿರುವುದು ಇಟಲಿಗೆ. ಇಟಲಿಯ ಕಲಬ್ರಿಯಾ ಪ್ರಾಂತ್ಯದ ಪುಟ್ಟ ಗ್ರಾಮ ವೆಸಾಜ್ಜಾ ಎಂಬಲ್ಲಿ ಮನೆಗಳು ಮಾರಾಟಕ್ಕಿದ್ದು, 1 ಯೂರೋ ಅಂದರೆ ಸರಿಸುಮಾರು 87 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಈ ಗ್ರಾಮ ಸಲೇಮಿ ಸಿಸಿಲಿ ದ್ವೀಪದ ಸಮೀಪವಿದೆ.
ಕರೊನಾ ವೈರಸ್​ ಹಾಟ್​ಸ್ಪಾಟ್​ಗಳಲ್ಲಿ ಇಟಲಿ ಕೂಡ ಒಂದು. ಅದರಲ್ಲಿಯೂ ಆರಂಭಿಕ ದಿನಗಳಲ್ಲಿ ಇಟಲಿ ಅಕ್ಷರಶಃ ಈ ವೈರಸ್​ನಿಂದಾಗಿ ನಲುಗಿ ಹೋಗಿತ್ತು. ಇಲ್ಲಿಯ ಪ್ರತಿಯೊಂದು ಗ್ರಾಮಕ್ಕೂ ವೈರಸ್​ ಹರಡಿತ್ತು. ಆದರೆ ವೆಸಾಜ್ಜಾದಲ್ಲಿ ಮಾತ್ರ ಯಾವುದೇ ವೈರಸ್​ ಪತ್ತೆಯಾಗದ್ದೇ ಇರುವುದು ಇದರ ಹೆಗ್ಗಳಿಕೆ. ಗ್ರಾಮಸ್ಥರು ಕರೊನಾ ನಿಯಮಗಳನ್ನು ಪಾಲಿಸುವುದರ ಜತೆಗೆ, ಹೊರ ಜಗತ್ತಿನ ಸಂಪರ್ಕವನ್ನೇ ಈ ವೇಳೆ ಕಡಿದುಕೊಂಡಿರುವ ಕಾರಣ, ಸದ್ಯ ಗ್ರಾಮವೀಗ ಕೋವಿಡ್​ಮುಕ್ತವಾಗಿದೆ.
ಇದನ್ನೂ ಓದಿ:ಮನೆಗೆಲಸದವರು ಬೇಕಾಗಿದ್ದಾರೆ… ಸಂಬಳ ₹18.5 ಲಕ್ಷ, ಊಟ, ವಸತಿ ಫ್ರೀ…
ಲಾಕ್​ಡೌನ್​ ಹಿನ್ನೆಲೆಯಲ್ಲಿ ಅನೇಕ ಮಂದಿ ಕೆಲಸ ಕಳೆದುಕೊಂಡಿರುವ ಕಾರಣ, ಮನೆ ಬಾಡಿಗೆ ಕೊಡುವುದೂ ಕಷ್ಟವಾಗಿದೆ. ಅಂಥವರಿಗಾಗಿ ‘ಆಪರೇಷನ್ ಬ್ಯೂಟಿ’ ಎಂಬ ಹೆಸರಿನಲ್ಲಿ ಈ ಗ್ರಾಮದಲ್ಲಿ ಮನೆಗಳನ್ನು ನೀಡಲು ನಿರ್ಧರಿಸಲಾಗಿದೆಯಂತೆ.
ಸಲೇಮಿ ಸಿಸಿಲಿ ದ್ವೀಪ ಐತಿಹಾಸಿಕ ಸ್ಥಳದ ಜತೆಗೆ ದ್ರಾಕ್ಷಿ ಹಾಗೂ ಆಲಿವ್​ ತೋಟಗಳಿಂದ ಆವೃತವಾಗಿದೆ. ಇಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆಯಿಂದ ಜೀವನ ನಿರ್ವಹಣೆ ಮಾಡಲಾಗದೇ, ಇತ್ತ ಆಸ್ತಿ ಮಾರಾಟ ಮಾಡಲೂ ಆಗದೇ ಜನತೆ ಕಷ್ಟದಲ್ಲಿದ್ದಾರೆ. ಆದ್ದರಿಂದ ಇಲ್ಲಿ ಮನೆಗಳನ್ನು ಕೊಂಡುಕೊಳ್ಳುವವರಿಗೆ ಬರ ಬಿದ್ದಿತ್ತು. ಆದರೆ ಇದೀಗ ಕರೊನಾವೈರಸ್​ ಹಾಗೂ ಲಾಕ್​ಡೌನ್​ ಹಿನ್ನೆಲೆಯಲ್ಲಿ ಕಡಿಮೆ ಬೆಲೆಯ ಮನೆಯ ಆಸೆಗೆ ಜನರು ಬರುತ್ತಿರುವುದಾಗಿ ವರದಿಯಾಗಿದೆ.
ಕಾಲೇಜು ಎದುರೇ ಯುವತಿ ಶೂಟೌಟ್​: ಮತಾಂತರಕ್ಕೆ ಒಪ್ಪದ್ದಕ್ಕೆ ನಡೆದ ಕೊಲೆ?

ಅಯ್ಯೋ… ವಿಡಿಯೋದಲ್ಲಿ ಇರುವುದು ನಾನಲ್ಲ: ಕೊಡಗು ಜಿಲ್ಲಾಧಿಕಾರಿ ಅನೀಸ್​

ಷರ್ಟ್​ ಬಿಚ್ಚಿ ವಿಚಾರಣೆಗೆ ಬಂದ ಸುಪ್ರೀಂಕೋರ್ಟ್​ ವಕೀಲ- ನ್ಯಾಯಮೂರ್ತಿ ಆಕ್ರೋಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 + seven =
Remember me
