ನವದೆಹಲಿ:ಕಳೆದ ಆಗಸ್ಟ್​ 31ರಂದು ತಮ್ಮ 85ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಮಾಜಿ ರಾಷ್ಟ್ರಪತಿ, ಕಾಂಗ್ರೆಸ್​ನ ಹಿರಿಯ ಮುಖಂಡ ಪ್ರಣಬ್​ ಮುಖರ್ಜಿಯವರ ಬಹು ನಿರೀಕ್ಷಿತ ಪುಸ್ತಕ ಬಿಡುಗಡೆಗೊಂಡಿದೆ.
ದಿ ಪ್ರೆಸಿಡೆನ್ಶಿಯಲ್ ಇಯರ್ಸ್, 2012-2017’ ನಲ್ಲಿ ಪ್ರಣಬ್​ ಅವರು ಅನೇಕ ವಿಷಯಗಳನ್ನು ಪ್ರಸ್ತಾಪಿಸಿದ್ದು, ಅದರಲ್ಲಿ ಕಾಂಗ್ರೆಸ್​ ಪತನದ ಕುರಿತು ತುಂಬಾ ವಿಷಾದದಿಂದ, ನೋವಿನಿಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಂದು ಕಾಲದಲ್ಲಿ ವರ್ಚಸ್ಸಿನ ನಾಯಕತ್ವವನ್ನು ಕಂಡ ಕಾಂಗ್ರೆಸ್​ ಈ ರೀತಿ ಪತನದ ಹಾದಿ ಹಿಡಿದಿರುವುದು ತೀರಾ ದುರದೃಷ್ಟಕರ ಎಂದಿದ್ದಾರೆ. ಹಿಂದಿನ ನಾಯಕತ್ವದ ಕುರಿತು ಪರಿಶೀಲನೆ ಮಾಡಲು ಕಾಂಗ್ರೆಸ್​ ವಿಫಲವಾಗಿದೆ ಎಂದು ಪುಸ್ತಕದಲ್ಲಿ ನೋವಿನಿಂದ ಅವರು ಬರೆದಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಇಂಥ ಹೀನಾಯ ಸೋಲು ಕಾಣುತ್ತದೆ ಎನ್ನುವುದನ್ನು ನನಗೆ ನಂಬುವುದು ಅಸಾಧ್ಯವೇ ಆಗಿತ್ತು. ಫಲಿತಾಂಶದ ದಿನ ಪ್ರತಿ ಅರ್ಧಗಂಟೆಗೆ ಅಪ್​ಡೇಟ್ಸ್​ ತಿಳಿಸುವಂತೆ ನನ್ನ ಸಹಾಯಕರಿಗೆ ಹೇಳಿದ್ದೆ. ಮೊದಲಿನಿಂದಲೂ ನಿರಾಸೆಯ ಕಾರ್ಮೋಡವೇ ಕವಿದಿತ್ತು. ಸಂಜೆಯ ವೇಳೆಗಾದರೂ ಆಶಾಕಿರಣ ಹೊಮ್ಮುತ್ತದೆ ಎಂದುಕೊಂದೆ. ಆದರೆ ಸಂಜೆ ಫಲಿತಾಂಶಗಳನ್ನು ಪ್ರಕಟಿಸಿದಾಗ, ತುಂಬಾ ನಿರಾಸೆಯಾಗಿಹೋಯಿತು. ನನ್ನ ನೆಚ್ಚಿನ ಪಕ್ಷ ಹೀಗೇಕಾಯ್ತು ಎನ್ನಿಸಿತು ಎಂದು ವಿಷಾದಿಸಿದ್ದಾರೆ.
ಈ ಚುನಾವಣೆಯಲ್ಜಲಿ ನಾದೇಶ ಒಂದು ಪಕ್ಷದ ಪರವಾಗಿ ಇದ್ದದ್ದು ಕಂಡು ಮನಸ್ಸು ನಿರಾಳವಾದರೂ, ನನ್ನ ಒಂದು ಕಾಲದ ವರ್ಚಸ್ಸಿನ ಪಕ್ಷ ಈ ರೀತಿ ಅವನತಿಯ ಹಾದಿ ಹಿಡಿದದ್ದು ನೋಡಿ ಮನಸ್ಸು ವಿಲವಿಲ ಎಂದಿತು ಎಂದು ಪುಸ್ತಕದಲ್ಲಿ ಅವರು ಬರೆದಿದ್ದಾರೆ.
‘ಕಾಂಗ್ರೆಸ್ ಕೇವಲ 44 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ನಂಬುವುದು ನನಗೆ ಕಷ್ಟಕರವಾಗಿತ್ತು. ಕಾಂಗ್ರೆಸ್ ಸದಾ ಜನರ ಜೀವನದೊಂದಿಗೆ ಪರಸ್ಪರ ಸಂಬಂಧ ಹೊಂದಿರುವ ರಾಷ್ಟ್ರೀಯ ಸಂಸ್ಥೆಯಾಗಿದೆ. ಆದರೆ ಆ ವರ್ಚಸ್ಸು ಈಗ ಇಲ್ಲವಾಗಿದೆ. ಪಕ್ಷವು ತನ್ನ ವರ್ಚಸ್ವಿ ನಾಯಕತ್ವದ ಅಂತ್ಯ ಕಂಡಿದೆ. ಪಂಡಿತ್ ನೆಹರೂ ಅವರಂತಹ ಮಹಾನ್​ ನಾಯಕರು ಪಾಕಿಸ್ತಾನಕ್ಕಿಂತ ಭಿನ್ನವಾಗಿ ಭಾರತವು ಪ್ರಬಲ ಮತ್ತು ಸ್ಥಿರ ರಾಷ್ಟ್ರವಾಗಿ ಅಭಿವೃದ್ಧಿ ಹೊಂದುವಂತೆ ನೋಡಿಕೊಂಡರು. ಆದರೆ ಅಂಥ ನಾಯಕರು ಮುಂದೆ ಬರಲೇ ಇಲ್ಲ’ ಎಂದು ನೋವು ತೋಡಿಕೊಂಡಿದ್ದಾರೆ ಮಾಜಿ ರಾಷ್ಟ್ರಪತಿ.
ನೆಹರೂ ದೊಡ್ಡ ತಪ್ಪು ಮಾಡಿಬಿಟ್ರು- ಇಲ್ಲದಿದ್ರೆ ಹೀಗಾಗುತ್ತಿರಲಿಲ್ಲ: ಪ್ರಣಬ್​ ಪುಸ್ತಕದಲ್ಲಿ ನೇಪಾಳದ ಉಲ್ಲೇಖ

‘ಮಹಿಳೆಯರ ಸ್ಥಾನ ಎತ್ತರಕ್ಕೆ ಒಯ್ದ ಸೋನಿಯಾ ಗಾಂಧಿ, ಮಾಯಾವತಿಗೆ ಸಿಗಲಿ ಭಾರತ ರತ್ನ’

ಬೇಡ ಎಂದು ಎಸೆದಿದ್ದ ಮೊಬೈಲ್​ ಕವರ್​ಗೆ​ ಸಿಕ್ತು 1.19 ಕೋಟಿ ರೂಪಾಯಿ!

ಬಳಸಿದ ಕಾಂಡೋಮ್​ ಒಳಗೆ ವಿಲವಿಲ ಒದ್ದಾಡಿದ ವಿಷಕಾರಕ ಹಾವು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen + 19 =
Remember me
