ಲಖನೌ:ಇತ್ತೀಚೆಗಷ್ಟೇ ಟಿ20 ಟೂರ್ನಿಯಲ್ಲಿ ಭಾರತದ ವಿರುದ್ಧದ ಪಾಕಿಸ್ತಾನ ಜಯ ಸಾಧಿಸಿದಾಗ ಪಾಕಿಸ್ತಾನದಲ್ಲಿ ಸಂಭ್ರಮ ಮನೆಮಾಡಿದ್ದಲ್ಲದೇ ಭಾರತದಲ್ಲಿನ ಕೆಲವು ಪಾಕ್‌ ಪ್ರೇಮಿಗಳೂ ಸಂಭ್ರಮ ಆಚರಿಸಿದ್ದರು. ಕೆಲವರು ಜಾಲತಾಣದಲ್ಲಿಯೂ ಪಾಕ್‌ ಪರವಾಗಿ ಶೇರ್‌ ಮಾಡಿಕೊಂಡಿದ್ದರು.ಅಂಥದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ಕೂಡ ನಡೆದಿದ್ದು, ಅದೀಗ ತಡವಾಗಿ ಬೆಳಕಿಗೆ ಬಂದಿದೆ. ಪತ್ನಿಯ ವಿರುದ್ಧ ಪತಿಯೇ ದೂರು ದಾಖಲು ಮಾಡಿದ್ದು, ಪಂದ್ಯದಲ್ಲಿ ಗೆಲುವು ಸಾಧಿಸಿದ ಪಾಕಿಸ್ತಾನ ಪರವಾಗಿ ಸಂಭ್ರಮಾಚರಣೆ ಮಾಡಿರುವ ಪತ್ನಿ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದಿದ್ದಾನೆ!ರಾಂಪುರದ ಅಜಿಮ್‌ ನಗರದಲ್ಲಿರುವ ಇಶಾನ್‌ ಮಿಯಾ ಈಗ ದೂರು ದಾಖಲು ಮಾಡಿದ್ದಾರೆ. ನನ್ನ ಹೆಂಡತಿ ಆಕೆಯ ಸಂಬಂಧಿಗಳು ಪಟಾಕಿ ಸಿಡಿಸಿದ್ದಾರೆ. ಮಾತ್ರವಲ್ಲದೇ ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್‌ಗಳನ್ನು ಹಾಕಿಕೊಂಡು ಸಂಭ್ರಮಿಸಿದ್ದಾರೆ. ಭಾರತೀಯನಾಗಿರುವ ನನಗೆ ಇದನ್ನು ಸಹಿಸಲು ಆಗುತ್ತಿಲ್ಲ ಎಂದು ಎಲ್ಲರ ವಿರುದ್ಧ ದೂರು ದಾಖಲು ಮಾಡಿದ್ದಾನೆ.ವ್ಯಕ್ತಿ ದೂರು ಆಧರಿಸಿದ ಗಂಜ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಪಿ ಅಂಕಿತ್‌ ಮಿತ್ತಲ್‌ ತಿಳಿಸಿದ್ದಾರೆ. ಅಂದಹಾಗೆ, ಪತಿ ಇಷ್ಟೊಂದು ಕಠೋರ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಕಾರಣವಿದೆ. ಈ ದಂಪತಿ ಈಗ ಒಟ್ಟಿಗೇ ಇಲ್ಲ. ಮದುವೆಯಾದ ಸ್ವಲ್ಪ ದಿನಗಳಲ್ಲೇ ಬೇರೆಯಾಗಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಜಿಮ್‌ನಿಂದ ನೇರ ಆಸ್ಪತ್ರೆಗೆ ದಾಖಲಾದ ನಟ ಜ್ಯೂ.ಎನ್‌ಟಿಆರ್‌- ಕೈಬೆರಳಿನ ಮೂಳೆ ಮುರಿದು ಶಸ್ತ್ರಚಿಕಿತ್ಸೆ
‘ನಾನು ಜಯಲಲಿತಾರ ಮಗಳು… ಮೈಸೂರಿನವಳು… ಸಾಕ್ಷಿ ಸಮೇತ ಸಾಬೀತು ಪಡಿಸುವೆ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 5 =
Remember me
