ಪಟ್ನಾ:ಮಹಾಭಾರತದಲ್ಲಿ ಪಾಂಡವರು ಕೌರವರೆದುರು ಜೂಜಿನಲ್ಲಿ ಎಲ್ಲವನ್ನೂ ಸೋತು ಕೊನೆಗೆ ತಮ್ಮ ಪತ್ನಿ ದ್ರೌಪದಿಯನ್ನೇ ಪಣಕ್ಕಿಟ್ಟಿರುವ ಘಟನೆ ಎಲ್ಲರಿಗೂ ಗೊತ್ತಿದ್ದದ್ದೇ. ಆದರೆ ದ್ರೌಪದಿಯನ್ನು ಕೃಷ್ಣ ಬಂದು ಅಲ್ಲಿ ಕಾಪಾಡಿದ. ಆದರೆ ಜೂಜಿನಲ್ಲಿ ಪತ್ನಿಯನ್ನು ಪಣಕ್ಕಿಟ್ಟು ಸೋತ ರಾಕ್ಷಸ ಪತಿಯ ಘಟನೆ ಮಾತ್ರ ಘನಘೋರ.
ಇಂಥದ್ದೊಂದು ಭಯಾನಕ ಘಟನೆ ನಡೆದಿರುವುದು ಬಿಹಾರದ ಭಾಗಲ್ಪುರದ ಹಸಂಗಂಜ್ ಎಂಬ ಗ್ರಾಮದಲ್ಲಿ. ಈ ಜೂಜುಕೋರ ಪತಿ ಮಹಾಶಯ ಸ್ನೇಹಿತರ ಜತೆ ಜೂಜಿಗೆ ಇಳಿದಿದ್ದಾನೆ. ಜೂಜಿನಲ್ಲಿ ಸೋತರೆ ತನ್ನ ಪತ್ನಿಯನ್ನು ಅವರಿಗೆ ನೀಡುವುದಾಗಿ ಹೇಳಿದ್ದಾನೆ.
ಜೂಜಾಟದ ಬಳಿಕ ಈತ ಸೋತಿದ್ದಾನೆ. ಸ್ನೇಹಿತರಿಗೆ ನೀಡಿರುವ ವಾಗ್ದಾನದಂತೆ ಹೆಂಡತಿಯನ್ನು ಅವರ ಬಳಿ ಕಳುಹಿಸಿದ್ದಾನೆ. ಆದರೆ ಭಯಭೀತಳಾದ ಹೆಂಡತಿ ಸ್ನೇಹಿತರ ಜತೆ ಹೋಗಲು ನಿರಾಕರಿಸಿದ್ದಾಳೆ. ಆದರೆ ಸ್ನೇಹಿತರು ಆಕೆಯನ್ನು ಬಿಡಲಿಲ್ಲ. ಬಲವಂತದಿಂದ ಎಳೆದೊಯ್ಯಲು ಪ್ರಯತ್ನಿಸಿದ್ದಾರೆ. ಅದಕ್ಕೆ ಗಂಡ ಕೂಡ ಸಾಥ್​ ನೀಡಿದ್ದಾನೆ.
ಮಹಿಳೆ ಹೇಗೋ ಎಲ್ಲರಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾಳೆ. ಆದರೆ ಈ ರಾಕ್ಷಸ ರೂಪದ ಗಂಡನಿಗೆ ಪತ್ನಿಯ ಮೇಲೆ ಸಿಟ್ಟು ಬಂದಿದೆ. ಏನು ಮಾಡಿದರೂ ಆಕೆ ಅವರ ಜತೆ ಹೋಗಲು ಒಪ್ಪದಿದ್ದ ಕಾರಣ, ಆಕೆಯ ಗುಪ್ತಾಂಗಕ್ಕೆ ಆ್ಯಸಿಡ್​ ಹಾಕಿದ್ದಾನೆ! ನೋವಿನಿಂದ ಚೀರಿಕೊಂಡರೂ ಬಿಡದ ಈ ಪತಿ ಆಕೆಯನ್ನು ಕೋಣೆಯಲ್ಲಿ ಕೂಡಿ ಹಾಕಿದ್ದಾನೆ.
ಈ ಘಟನೆ ನಡೆದಿರುವುದು ಕಳೆದ ತಿಂಗಳು. ಆದರೆ ಘಟನೆ ಬೆಳಕಿಗೆ ಬಂದದ್ದು ಈಗ. ಅದ್ಹೇಗೆ ಎಂದರೆ, ಮಹಿಳೆ ಹೇಗೇಗೋ ಮಾಡಿ ತಪ್ಪಿಸಿಕೊಂಡು ಮನೆಯಿಂದ ಓಡಿ ಬಂದಿದ್ದಾಳೆ. ಆಗಲೇ ಎಲ್ಲರಿಗೂ ವಿಷಯ ತಿಳಿದಿದೆ. ತಮ್ಮ ಮದುವೆಯಾಗಿ 10 ವರ್ಷಗಳಾಗಿದ್ದು ತನಗೆ ಮಕ್ಕಳಾಗಲಿಲ್ಲ ಎಂದು ಗಂಡ ಪದೇ ಪದೇ ಹಿಂಸಿಸುತ್ತಿದ್ದ. ಈಗ ಜೂಜಿನಲ್ಲಿ ಸೋತು ಈ ರೀತಿ ಮಾಡಿರುವ ವಿಷಯವನ್ನು ಆಕೆ ಬಾಯಿ ಬಿಟ್ಟಿದ್ದಾಳೆ!
ಸದ್ಯ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ವಿಚಿತ್ರ ಎಂದರೆ ಆಕೆಯ ಪಾಲಕರು ಇದುವರೆಗೆ ಪೊಲೀಸರಲ್ಲಿ ದೂರು ದಾಖಲು ಮಾಡಲಿಲ್ಲ! ಮಹಿಳೆ ಮಾತ್ರ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.
ಮನೆಯ ಆಳವಾದ ಹೊಂಡದಲ್ಲಿ ಕಾಲು ಜಾರಿ ಬಿದ್ದಾಕೆ ಪತ್ತೆಯಾಗಿದ್ದು ಪಕ್ಕದ್ಮನೆ ಬಾವಿಯಲ್ಲಿ!

ವೀರ್ಯ ಕೌಂಟ್​ ಕಡಿಮೆ ಇದ್ದು ಮಕ್ಕಳಾಗದಿದ್ದರೆ ದಿಢೀರ್​ ನಿರ್ಧಾರಕ್ಕೆ ಬರಬೇಡಿ…

ಪುರುಷತ್ವ ಹೆಚ್ಚಿಸಲು ಆಯುರ್ವೇದ ಪರಿಹಾರವೇನು? ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 2 =
Remember me
