ಭೋಪಾಲ್:ಕುಡುಕ ಪತಿಯ ದೌರ್ಜನ್ಯದಿಂದ ಬೇಸತ್ತು ಮಕ್ಕಳ ಸಹಿತಿ ಪತ್ನಿ ಮನೆ ಬಿಟ್ಟು ತವರು ಸೇರಿದರೆ ಅಲ್ಲಿಯೂ ಬಿಡದ ಪತಿ ಆಕೆಯ ಮೂಗು ಕಚ್ಚಿ ತುಂಡರಿಸಿರುವ ಭಯಾನಕ ಘಟನೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದಿದೆ.
ರತ್ಲಾಮ್ ಜಿಲ್ಲೆಯ ಅಲೌಟ್ ನಿವಾಸಿಯಾಗಿದ್ದ ಟೀನಾ ಉಜ್ಜೈನಿಯ ದಿನೇಶ್ ಜತೆ ಮದುವೆ ಮಾಡಿಕೊಂಡಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆ ಸಮಯದಲ್ಲಿ ತಾನೂ ಕೂಲಿ ಕೆಲಸ ಮಾಡಿಕೊಂಡಿದ್ದು ಸಂಪಾದನೆ ಮಾಡುತ್ತೇನೆ ಎಂದಿದ್ದ. ಮದುವೆಯಾದ ಮೇಲೆ ತಿಳಿದದ್ದು ಈತ ದೊಡ್ಡ ಕುಡುಕ. ಕೈಯಲ್ಲಿ ಏನೂ ಕೆಲಸವಿಲ್ಲ ಎಂದು. ದಿನವೂ ಕುಡಿದು ಬಂದು ಪತ್ನಿ, ಮಕ್ಕಳ ಮೇಲೆ ಹಲ್ಲೆ ಮಾಡುತ್ತಿದ್ದ.
ಇದರಿಂದ ಬೇಸರಗೊಂಡಿದ್ದ ಟೀನಾ ಮಕ್ಕಳ ಸಹಿತ ತವರಿಗೆ ಹೋಗಿದ್ದರು. ಅಲ್ಲಿ ಪತಿಯ ವಿರುದ್ಧ ವಿಚ್ಛೇದನಕ್ಕೂ ಅರ್ಜಿ ಹಾಗಿದ್ದರು. ಕೇಸ್‌ ವಾಪಸ್‌ ಪಡೆಯುವಂತೆ ದಿನೇಶ್‌ ಅಲ್ಲಿಗೆ ಬಂದು ಕಿರುಕುಳ ನೀಡುತ್ತಿದ್ದ. ಆಕೆ ಒಪ್ಪದ ಕಾರಣ ಇಬ್ಬರು ಹೆಣ್ಣು ಮಕ್ಕಳ ಎದುರೇ ಪತ್ನಿಯ ಮೂಗನ್ನು ಹಲ್ಲಿನಿಂದ ಕಚ್ಚಿ ತುಂಡರಿಸಿದ್ದಾನೆ. ಮಹಿಳೆ ಮತ್ತು ಮಕ್ಕಳ ಕಿರುಚಿದಾಗ ಅಕ್ಕ ಪಕ್ಕದ ಮನೆಯವರು ಓಡಿ ಬಂದು ಟೀನಾರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ನಂತರ ಪೊಲೀಸರಿಗೆ ದೂರು ದಾಖಲಾಗಿದ್ದು, ಪತಿಯನ್ನು ಬಂಧಿಸಲಾಗಿದೆ. ಸದ್ಯ ಟೀನಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ನಟನ ಒಳ ಉಡುಪು ನೋಡಲು ಹೀಗೆಲ್ಲಾ ಮಾಡ್ತಾರಾ ರಶ್ಮಿಕಾ? ಛೇ ಎಂದ ಅಭಿಮಾನಿಗಳು

ಪರಪುರುಷನ ಜತೆ ಇರುವುದನ್ನು ನೋಡಿದ್ದಾಳೆಂದು ಕುದಿಯುವ ಎಣ್ಣೆಯಲ್ಲಿ ಬಾಲಕಿ ಕೈ ಸುಟ್ಟ ಪಾಪಿ ಮಹಿಳೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 10 =
Remember me
