ಲಖನೌ:ಗಂಡ ಹೆಂಡತಿ ಜಗಳ ವಿಕೋಪಕ್ಕೆ ಹೋದ ಸಮಯದಲ್ಲಿ ಕೊಲೆಯಾಗುವ ಘಟನೆಗಳು ಸಾಕಷ್ಟು ನಡೆಯುತ್ತಲೇ ಇವೆ. ಆದರೆ ಇಲ್ಲೊಬ್ಬ ಪತಿರಾಯ ಮೊಬೈಲ್​ ಟವರ್​ ಏರಿ ಕುಳಿತಿದ್ದ!
ಉತ್ತರಪ್ರದೇಶದಲ್ಲಿ ಮೊರ್ದಾಬಾದ್​ನಲ್ಲಿ ಈ ಘಟನೆ ನಡೆದಿದೆ. ತೇಜ್ಪಾಲ್ ಸಿಂಗ್ ಎಂಬಾತ ಈ ರೀತಿ ಮಾಡಿದ್ದಾನೆ.
ತನ್ನ ವಿರುದ್ಧ ಪತ್ನಿ ಪೊಲೀಸ್ ಠಾಣೆಯಲ್ಲಿ ಸುಳ್ಳು ಕೇಸ್ ದಾಖಲಿಸಿದ್ದಾಳೆ. ಪೊಲೀಸರು ಕೂಡ ನನ್ನ ಮಾತನ್ನು ಕೇಳುತ್ತಿಲ್ಲ. ನಾನು ನಿರಪರಾಧಿ, ನನ್ನ ತಪ್ಪು ಇಲ್ಲ ಎಂದರೂ ಪೊಲೀಸರು ನನ್ನ ಮಾತನ್ನು ಕೇಳಲು ರೆಡಿ ಇಲ್ಲ. ಆದ್ದರಿಂದ ಈ ರೀತಿ ಮಾಡಿದ್ದೇನೆ ಎಂದು ಸಿಂಗ್ ಹೇಳಿದ್ದಾನೆ.
ಸಿಂಗ್ ಟವರ್ ಏರುತ್ತಿದ್ದಂತೆಯೇ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ಸ್ಥಳೀಯ ನಿವಾಸಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಕೆಳಗಿಳಿಯುವಂತೆ ಪರಿಪರಿಯಾಗಿ ಬೇಡಿಕೊಂಡರು. ಮೊದಲು ಜಪ್ಪಯ್ಯ ಎಂದರೂ ಕೆಳಕ್ಕಿಳಿಯಲು ಆತ ಒಪ್ಪಲಿಲ್ಲ. ಕೊನೆಗೆ ಆತನ ಮನವೊಲಿಸಿ ಕೆಳಗಿಳಿಸುವಲ್ಲಿ ಎಲ್ಲರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ಉಗುಳಬೇಡ ಎಂದದ್ದೇ ತಪ್ಪಾಯ್ತು… ಮನೆಯಲ್ಲಿದ್ದ ಪಾರಿವಾಳಗಳನ್ನೆಲ್ಲಾ ಕೊಂದುಹಾಕಿದ ಯುವಕ!
ತೇಜ್ಪಾಲ್ ಹಾಗೂ ಆತನ ಪತ್ನಿ ಇಬ್ಬರಿಗೂ ಇದು ಎರಡನೆಯ ಮದುವೆ. ಮದುವೆಯ ಬಳಿಕ ದಂಪತಿ ಕೆಲವೊಂದು ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಜಗಳ ಮಾಡುತ್ತಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆ ನನ್ನ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದಾಳೆ. ಪೊಲೀಸರು ಕೂಡ ನನ್ನ ಮಾತುಗಳನ್ನು ಕೇಳಲು ತಯಾರಿಲ್ಲ. ನಮ್ಮಿಬ್ಬರ ಸಂಬಂಧ ಮುಂದುವರೆಯಲು ನನಗೆ ಇಷ್ಟವಿಲ್ಲ. ಈ ಸಂಬಂಧವನ್ನು ಮುರಿಯುಲು ಇಚ್ಛಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಹೇಳಿದರು.
ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ನಾಳೆ ಐತಿಹಾಸಿಕ ತೀರ್ಪು- ಎಲ್ಲೆಡೆ ಕಟ್ಟೆಚ್ಚರ

20 ರೂಪಾಯಿಗಾಗಿ ನಡೆದೇ ಹೋಯಿತೊಂದು ಮರ್ಡರ್!: 13 ವರ್ಷದ ಮಗ ಕಂಗಾಲು

ಕಾಲಿನಿಂದ ಒದ್ದ, ಹೊಟ್ಟೆಗೆ, ಮುಖಕ್ಕೆ ಗುದ್ದಿದ- ಕ್ಯಾಮೆರಾಮನ್​ನಿಂದ ಪತ್ರಕರ್ತನ ಮೇಲೆ ಹಲ್ಲೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 14 =
Remember me
