ಕಾನ್ಪುರ:ಇಲ್ಲೊಂದು ಅತ್ಯಂತ ವಿಚಿತ್ರ ಘಟನೆ ನಡೆದಿದೆ. ವ್ಯಕ್ತಿಯೊಬ್ಬನ ಅಂತ್ಯಸಂಸ್ಕಾರ ಮಾಡಿದ ಮಾರನೆಯ ರಾತ್ರಿ ಆತ ಪ್ರತ್ಯಕ್ಷನಾಗಿ ನಾನೇ ನಿನ್ನ ಗಂಡ ಎಂದು ಹೆಂಡತಿಗೆ ಹೇಳಿ, ಎಲ್ಲರಲ್ಲಿಯೂ ದಿಗಿಲು ಮೂಡಿಸಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ.
ಚಾಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿರುವ ಅಹ್ಮದ್ ಹಸನ್ ಎಂಬುವವರ ಕುಟುಂಬದಲ್ಲಾಗಿರುವ ಘಟನೆಯಿದು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ, ಅಹ್ಮದ್‌ ಮನೆಬಿಟ್ಟು ಹೋಗಿದ್ದರು. ಪತ್ನಿ ನಗ್ಮಾರ ಜತೆಗೆ ಚಕಮಕಿಯಾದ ಕಾರಣ, ಸಿಟ್ಟಿನಿಂದ ಮನೆಬಿಟ್ಟು ಹೋಗಿದ್ದರು.
ತಮ್ಮ ಪತಿ ಕಾಣೆಯಾಗಿರುವುದಾಗಿ ನಗ್ಮಾ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು. ಆಹ್ಮದ್‌ ಆಗಸ್ಟ್‌ 2ರಂದು ಮನೆ ಬಿಟ್ಟು ಹೋಗಿದ್ದು ಎರಡು ದಿನಗಳಾದರೂ ಮರಳಿ ಬರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖ ಮಾಡಿ ಅವರ ಫೋಟೋ ಕೂಡ ಠಾಣೆಗೆ ನೀಡಿದ್ದರು.
ಅದೇ ಸಮಯದಲ್ಲಿ ಅಲ್ಲೊಂದು ಅನಾಥ ಶವ ಪೊಲೀಸರಿಗೆ ಸಿಕ್ಕಿತ್ತು. ಆ ಫೋಟೋದಲ್ಲಿ ಇರುವ ವ್ಯಕ್ತಿಗೂ, ಆ ಮೃತಪಟ್ಟವನಿಗೂ ಸಾಮ್ಯತೆ ಇದ್ದ ಹಿನ್ನೆಲೆಯಲ್ಲಿ ಅದನ್ನು ಗುರುತಿಸುವಂತೆ ಪೊಲೀಸರು ಪತ್ನಿ ಹಾಗೂ ಕುಟುಂಬಸ್ಥರಿಗೆ ಕರೆದಿದ್ದರು.
ಪತ್ನ ನಗ್ಮಾ ಸೇರಿದಂತೆ ಅಹ್ಮದ್‌ನ ಸಹೋದರರು ಆ ಶವವನ್ನು ಗುರುತಿಸಿ ಇದು ಅಹ್ಮದ್‌ ಶವವೇ ಎಂದು ಖಾತ್ರಿ ಪಡೆಸಿದರು. ಇದಾದ ಮೇಲೆ ಶವವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು. ಅವರ ಸಂಪ್ರದಾಯದಂತೆ ಕುಟುಂಬಸ್ಥರು ಶವವನ್ನು ದಫನ್‌ ಮಾಡಿಬಂದರು. ಪತಿಯನ್ನು ಕಳೆದುಕೊಂಡ ದುಃಖದಲ್ಲಿ ಪತ್ನಿ ಇದ್ದರೆ, ಮನೆಯ ಮಗನನ್ನು ಕಳೆದುಕೊಂಡ ದುಃಖದಲ್ಲಿ ಕುಟುಂಬಸ್ಥರು ಇದ್ದರು.
ಆದರೆ ಮಾರನೆಯ ರಾತ್ರಿ ಇದ್ದಕ್ಕಿದ್ದಂತೆಯೇ ಅಹ್ಮದ್‌ ಮನೆಗೆ ಬಂದರು. ಪತ್ನಿ ಗಾಬರಿಯಿಂದ ಚೀರಿಕೊಂಡರು. ಕುಟುಂಬಸ್ಥರಿಗೂ ಅರೆಕ್ಷಣ ಏನೂ ತೋಚಲಿಲ್ಲ. ಮನೆಗೆ ಬರುವ ದಾರಿಯಲ್ಲಿಯೇ ಅಹ್ಮದ್‌ಗೆ ಇದೇ ರೀತಿ ಗ್ರಾಮಸ್ಥರಿಗೆ ವಿಚಿತ್ರ ಅನುಭವವಾಗಿತ್ತು. ನಂತರ ಅವರು ನಡೆದ ವಿಷಯಗಳನ್ನು ಕೇಳಿ ತಿಳಿದುಕೊಂಡಿದ್ದರು.
ಇದನ್ನೂ ಓದಿ:ಪ್ರೇಮಕ್ಕೆ ಧರ್ಮದ ಅಡ್ಡಿ: ಬಾವಿಯೊಳಗೆ ಜಿಗಿದು ಪ್ರಾಣಬಿಟ್ಟ ಬಾಲಕಿ-ಯುವಕ!
ಗಾಬರಿಯಾಗಿದ್ದ ಪತ್ನಿ ಹಾಗೂ ಕುಟುಂಬಸ್ಥರನ್ನು ಅವರೇ ಸಮಾಧಾನಪಡಿಸಿ. ನಾನೇ ನಿನ್ನ ಗಂಡ. ನೀವು ದಫನ್‌ ಮಾಡಿದ ಶವ ಬೇರೆ ಯಾರದ್ದೋ ಎಂದು ಹೇಳಿದರು. ಅಂದು ಸಿಟ್ಟಿನಿಂದ ಮನೆ ಬಿಟ್ಟು ಹೋಗಿದ್ದು, ಎರಡು ದಿನ ಅಲ್ಲಿ ಇಲ್ಲಿ ಕೆಲಸ ಮಾಡಿ ಹೇಗೋ ಹೊಟ್ಟೆ ತುಂಬಿಸಿಕೊಂಡ ಬಗ್ಗೆ ಅಹ್ಮದ್‌ ಹೇಳಿದಾಗ ಮನೆಯವರಿಗೆ ನಗ್ಮಾರಿಗೆ ಇವರೇ ತಮ್ಮ ಪತಿ ಎಂದು ನಂಬಿಕೆ ಬಂತು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪತ್ನಿ ತಮಗೂ ಶವ ನೋಡಿದಾಗ ಇದು ಗಂಡನದ್ದು ಅಲ್ಲ ಎನ್ನಿಸಿತ್ತು. ಆದರೆ ಅವರ ಸಹೋದರರು ಹೌದು ಎಂದುದಕ್ಕೆ ನಾನು ಒಪ್ಪಿದೆ ಎಂದಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ಸುಖಾಂತ್ಯವಾಯಿತು.
ಆದರೆ ದಫನ್‌ ಆದ ವ್ಯಕ್ತಿ ಯಾರು ಎಂದು ಈಗ ಪೊಲೀಸರು ತಲೆತಲೆ ಚಚ್ಚಿಕೊಳ್ಳುವಂತಾಗಿದೆ! “ಸಮಾಧಿ ಮಾಡಿದ ವ್ಯಕ್ತಿಯನ್ನು ಗುರುತಿಸಲು ನಾವು ಈಗ ವಿವಿಧ ಸ್ಥಳಗಳಲ್ಲಿ ಪೋಸ್ಟರ್‌ಗಳನ್ನು ಹಾಕುತ್ತಿದ್ದೇವೆ ಎಂದಿದ್ದಾರೆ.
ಈರುಳ್ಳಿಯಿಂದ ಹರಡುತ್ತಿದೆ ಸೋಂಕು- 500ಕ್ಕೂ ಅಧಿಕ ಮಂದಿಯಲ್ಲಿ ಪತ್ತೆ: ಏನಿದು ವೈರಸ್‌?

ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸುಶಾಂತ್‌ ಸಿಂಗ್‌ ಕುರಿತು ಬರೆದಿದ್ದ ನಟ ಸಮೀರ್‌!

ಪತ್ನಿಗೆ ಅಡುಗೆ ಮಾಡಲು ಬರಲ್ಲ ಅಂತ ಆತ್ಮಹತ್ಯೆ ಮಾಡಿಕೊಂಡ ಬಳ್ಳಾರಿ ನವವಿವಾಹಿತ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:six + 3 =
Remember me
