ಇದೀಗ ವೈರಲ್​ವಿಡಿಯೋಗಳ ಸುಗ್ಗಿ. ಹುಟ್ಟಿನಿಂದ ಹಿಡಿದು ಸಾಯುವವರೆಗಿನ ದೃಶ್ಯಗಳೆಲ್ಲವೂ ವಿಡಿಯೋದಲ್ಲಿಯೇ ಸಿಗುವ ಕಾಲ ಇದಾಗಿದೆ. ಅಪಘಾತ ಸಂಭವಿಸಲಿ, ಹಿಂಸಾಚಾರವೇ ಆಗಲಿ ಇಲ್ಲವೇ ಖುಷಿಯ ಕ್ಷಣಗಳೇ ಆಗಲಿ ಸ್ಮಾರ್ಟ್​ಫೋನ್​ ಆನ್​ ಮಾಡಿ ವಿಡಿಯೋ ಮಾಡುವುದು ಎಂದರೆ ಹಲವರಿಗೆ ಎಲ್ಲಿಲ್ಲದ ಖುಷಿ.
ಇಂಥ ಕೆಲವು ವಿಡಿಯೋಗಳು ಭಯಾನಕವಾಗಿದ್ದು, ಕೆಲವು ಎಂಥ ನೋವಿನ ಕ್ಷಣಗಳಲ್ಲಿಯೂ ನಗುವನ್ನು ಉಕ್ಕಿಸುತ್ತವೆ. ಅಂಥ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಶೇರ್​ ಆಗುತ್ತವೆ, ಅಂಥದ್ದೇ ಒಂದು ಹಾಸ್ಯಭರಿತ ವಿಡಿಯೋ ಇದೀಗ ವೈರಲ್​ ಆಗಿದ್ದು, ನಗು ಉಕ್ಕಿಸುವಂತಿದೆ.
ಈ ವಿಡಿಯೋದಲ್ಲಿ ಕೆಲವರು ಕಂಠಪೂರ್ತಿ ಕುಡಿದು ಕೆಲವು ಪುರುಷರು ಹಾಡಿಗೆ ಹೆಜ್ಜೆ ಹಾಕುತ್ತಿದ್ದರೆ, ಇನ್ನು ಕೆಲವರು ಅವರ ಜತೆ ತಾವೂ ಕುಣಿಯುತ್ತಿದ್ದಾರೆ. ಈ ವಿಷಯ ಅಲ್ಲಿರುವ ಒಬ್ಬಾತನ ಪತ್ನಿಗೆ ತಿಳಿಯುತ್ತದೆ. ಸ್ಥಳಕ್ಕೆ ಬಡಿಗೆಯೊಂದಿಗೆ ಬರುತ್ತಾರೆ ಆ ಪತ್ನಿ.
ಪತ್ನಿ ಬರುತ್ತಿರುವುದನ್ನು ದೂರದಿಂದಲೇ ನೋಡಿದ ಪತಿರಾಯ ಅಲ್ಲಿಂದ ಕಾಲುಕೀಳುತ್ತಾನೆ. ಇದು ನಿಜವಾಗಿ ನಡೆದಿರುವ ಘಟನೆಯಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಪತಿರಾಯ ಜಸ್ಟ್​ ಮಿಸ್​, ಇಲ್ಲದಿದ್ದರೆ ಆಗುತ್ತಿತ್ತು ಭಯಾನಕ ಅನಾಹುತ ಎಂಬ ಶೀರ್ಷಿಕೆಯೊಂದಿಗೆ ಇದನ್ನು ಶೇರ್​ ಮಾಡಲಾಗುತ್ತಿದೆ.
ನೀವು ಈ ವಿಡಿಯೋ ಇಲ್ಲಿ ನೋಡಿ ಎನ್​ಜಾಯ್​ ಮಾಡಿ…
ಜಸ್ಟ್​ ಎಸ್ಕೇಪ್​: ಭಯಾನಕ ಘಟನೆಯಿಂದ ಬದುಕುಳಿದ ಪತಿರಾಯ- ಇಲ್ಲದಿದ್ದರೆ ಹರೋಹರ!#vedio#husband#wife#escapepic.twitter.com/s0EYN5AGZr
— Vijayavani (@VVani4U)January 15, 2021

VIDEO: ಯುವಕರೇ ಹುಷಾರ್​! ಈಗಲೇ ಡಾನ್ಸ್​ ಕಲಿತುಬಿಡಿ- ಇಲ್ಲದಿದ್ದರೆ ಕಾದಿದೆ ಅಪಾಯ

ಕರೊನಾ ಲಸಿಕೆ ಚುಚ್ಚಿಕೊಳ್ಳೋ ಬದಲು ಇಲ್ಲಿ ಜನ ತಿಂತಾರಂತೆ! ವಿಡಿಯೋ ನೋಡಿ…

ಎಲ್ಲರೂ ಒಳ್ಳೆಯವರು, ಆದರೆ ನನಗೇ ಸೊಕ್ಕು ಜಾಸ್ತಿ ಅನಿಸತ್ತೆ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:six − 5 =
Remember me
