ಲುಂಗೇಲಿ (ಮಿಜೋರಾಂ):ಜಗಳ ಮಾಡಿ ಪ್ರತ್ಯೇಕವಾಗಿದ್ದ ಹೆಂಡತಿಯನ್ನು ಕರೆದು ಭಯಾನಕ ರೀತಿಯಲ್ಲಿ ಆಕೆಯನ್ನು ಕೊಲೆ ಮಾಡಿ ತಾನೂ ಸತ್ತಿರುವ ಘಟನೆ ಮಿಜೋರಾಂನ ಲಿಂಗೇಲಿಯಲ್ಲಿ ನಡೆದಿದೆ.
ರೊಹಮಿಗ್ಲಿಯಾನ ಎಂಬಾತ ಇಂಥ ಕೃತ್ಯ ಎಸಗಿದ್ದಾನೆ. ಈತನ ಪತ್ನಿ ಜಗಳವಾಡಿಕೊಂಡು ಪ್ರತ್ಯೇಕವಾಗಿ ಮಗಳ ಜತೆ ವಾಸವಾಗಿದ್ದಳು. ತರಕಾರಿ ಮಾರಿ ಜೀವನ ಸಾಗಿಸುತ್ತಿದ್ದಳು. ಆಕೆಯನ್ನು ಕೊಲ್ಲಲು ಭಯಾನಕ ‌ಪ್ಲ್ಯಾನ್‌ ಹಾಕಿದ ಪತಿ ತನ್ನ ಬಟ್ಟೆಯೊಳಗೆ ಜಿಲೆಟಿನ್ ಬಾಂಬ್ ಇಟ್ಟುಕೊಂಡು ಅವಳು ಇರುವಲ್ಲಿ ಹೋಗಿದ್ದಾನೆ.
ಆಕೆಯ ಜೊತೆಯಲ್ಲಿದ್ದ ಮಗಳನ್ನು ದೂರ ಕಳಿಸಿದ್ದ. ತರಕಾರಿ ಮಾರುತ್ತಾ ಗಾಡಿಯ ಬಳಿ ಕುಳಿತಿದ್ದ ಹೆಂಡತಿಯ ಪಕ್ಕದಲ್ಲೇ ಕುಳಿತ ಆಕೆಯ ಗಂಡ ತನಗಾಗಿ ಒಂದು ಸಿಗರೇಟ್ ತಂದುಕೊಡುವಂತೆ ಕೇಳಿದ್ದ. ಆಕೆ ಸಿಗರೇಟ್ ತಂದು ಕೊಟ್ಟಾಗ ಅದನ್ನು ಬಾಯಿಗಿಟ್ಟುಕೊಂಡ ಆತ ಎದ್ದು ನಿಂತವನೇ ತಲೆ ಸುತ್ತುಬಂದಂತೆ ನಟಿಸಿದ್ದಾನೆ. ಆಗ ಪತ್ನಿ ಬಳಿಗೆ ಹೋದಾಗ ಆಕೆಯನ್ನು ಜೋರಾಗಿ ತಬ್ಬಿಕೊಂಡಿದ್ದಾನೆ. ಕೂಡಲೇ ಬಾಂಬ್ ಸ್ಫೋಟವಾಗಿ ಅವರಿಬ್ಬರ ದೇಹ ಛಿದ್ರವಾಗಿದೆ.
ಈ ಘಟನೆ ಬಳಿಕ ಅವರ ಮಗಳು ನಾಪತ್ತೆಯಾಗಿದ್ದಾಳೆ. ಪ್ರತ್ಯಕ್ಷದರ್ಶಿಗಳು ಈ ಬಗ್ಗೆ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಈತ ಹೀಗೆಕೆ ಮಾಡಿದ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಮನಸ್ಸಿನ ನೆಮ್ಮದಿಗಾಗಿ ಮಾಟದ ಮೊರೆ ಹೋಗಿ 4.41 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಮಹಿಳೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + three =
Remember me
