ಪಟ್ನಾ:ಪತಿಯೇ ತನ್ನ ಪತ್ನಿಯ ಪ್ರಿಯಕರನ ಹುಡುಕಾಟ ನಡೆಸಿ ಮದುವೆಗೆ ಮುಂದಾದ ಒಂದು ಚಿತ್ರಕಥೆ ಆಧಾರಿತ ಸಿನಿಮಾ ಬಾಲಿವುಡ್‌ನ ಪ್ರಖ್ಯಾತ ಹಮ್‌ ದಿಲ್‌ ದೇ ಚುಕೆ ಸನಮ್‌… ಆದರೆ ಇದೇ ರೀತಿಯ ಘಟನೆಯೊಂದು ಬಿಹಾರದಲ್ಲಿ ನಡೆದಿದೆ.ಛಪ್ರಾ ಎಂಬ ಗ್ರಾಮದಲ್ಲಿನ ಪತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜತೆಗೆ ಮದುವೆ ಮಾಡಿಸಿರುವ ಘಟನೆ ಇದಾಗಿದೆ. ಈ ಮದುವೆ ಮುಗಿದ ಮೇಲೆ ಮರಳುತ್ತಿದ್ದ ಜೋಡಿಯ ಚಿತ್ರವನ್ನು ಅಲ್ಲಿಯೇ ಇದ್ದವರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಭಾರಿ ವೈರಲ್‌ ಆಗಿದೆ.ನಿಕ್ಕಿ ಎಂಬಾಕೆಯ ಮದುವೆಯಾಗಿ ಒಂದು ಹೆಣ್ಣು ಮಗು ಕೂಡ ಇದೆ. ಆದರೆ ಈಕೆ ತನ್ನ ಮಾಜಿ ಪ್ರಿಯಕರನ ಒಡನಾಟ ಬಿಟ್ಟಿರಲಿಲ್ಲ. ಇದು ಪತಿಗೆ ತಿಳಿದು ಆತನೇ ಮುಂದೆ ನಿಂತು ಇಬ್ಬರ ಮದುವೆ ಮಾಡಿಸಿದ್ದಾರೆ.ನಮಗೆ ಮಗುವಿದ್ದು, ಆ ಮಗುವನ್ನು ನಾನು ನೋಡಿಕೊಳ್ಳುತ್ತೇನೆ. ಸದ್ಯ ಪತ್ನಿ ಚೆನ್ನಾಗಿದ್ದರೆ ಸಾಕು ಎಂದು ಪತಿ ಹೇಳಿದ್ದಾನೆ. ಆದರೆ ನಿಕ್ಕಿ ಮಾತ್ರ ಸ್ವಲ್ಪ ವಿಭಿನ್ನ ಹೇಳಿಕೆ ನೀಡಿದ್ದಾಳೆ. ಮದುವೆಯ ನಂತರ ಗಂಡ ನನಗೆ ಹಿಂಸೆ ನೀಡುತ್ತಿದ್ದ. ಆ ಹಿಂಸೆ ತಾಳದೇ ನಾನು ಪ್ರಿಯಕರನ ಬಳಿ ಬಂದಿದ್ದೆ. ಯಾವುದೇ ಕಾರಣಕ್ಕೂ ವಾಪಸ್‌ ಹಳೆಯ ಗಂಡನ ಮನೆಗೆ ಹೋಗುವುದಿಲ್ಲ ಎಂದಿದ್ದಾರೆ. ಆದರೆ ಈ ನಡುವೆಯೇ ಮಗುವಿನ ಬಗ್ಗೆ ಚಕಾರ ಎತ್ತದ ಆಕೆ, ಮಗುವನ್ನು ಪತಿಯ ಜತೆಯೇ ಕಳಿಸಿಕೊಟ್ಟಿದ್ದಾಳೆ.
ಈ ಸೇತುವೆ ಸದ್ಯ ಮದುವೆಗಳ ಹಾಟ್‌ಸ್ಪಾಟ್‌- ದಿನವೂ ನಡೀತಿದೆ ವಿವಾಹ: ಇದಕ್ಕಿದೆ ಕುತೂಹಲದ ಕಾರಣ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 18 =
Remember me
