ಬ್ರಹ್ಮಪುರ (ಬಿಹಾರ):ಸದಾ ದೌರ್ಜನ್ಯ ಎಸಗುವ ಪತಿಯಿಂದ ದೂರವಾಗಿರುವ ಪತ್ನಿಯನ್ನು ಬರಮಾಡಿಕೊಂಡು ಆಕೆಯ ರುಂಡ-ಮುಂಡ ಬೇರೆ ಮಾಡಿರುವ ಭಯಾನಕ ಘಟನೆ ಬಿಹಾರದ ಬುಕ್ಸರ್ ಜಿಲ್ಲೆಯ ಬ್ರಹ್ಮಪುರದಲ್ಲಿ ನಡೆದಿದೆ.ಸಾಲದು ಎಂಬುದಕ್ಕೆ ಪತ್ನಿಯ ರುಂಡವನ್ನು ಹಿಡಿದು ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ ಈ ಮಹಾನುಭಾವ!ಇಂಥದ್ದೊಂದು ಹೀನಾಯ ಕೃತ್ಯ ಎಸಗಿದವರು ಅಲ್ಗು ಯಾದವ್ (48) . ಈತನ ಕರಾಳತೆಗೆ ಬಲಿಯಾದವರು ಆತನ ಪತ್ನಿ ಚಾಂದಿನಿ ದೇವಿ.2013ರಲ್ಲಿ ಇವರ ಮದುವೆಯಾಗಿದ್ದು, ಒಬ್ಬ ಮಗಳಿದ್ದಾಳೆ. ಮೂರು ವರ್ಷಗಳಿಂದ ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಗಂಡನ ವಿರುದ್ಧ ಚಾಂದಿನಿ ಹಾಕಿರುವ ಕೇಸ್‌ನ ಪ್ರಕರಣ ಕೋರ್ಟ್‌ನಲ್ಲಿ ಇನ್ನೂ ಇತ್ಯರ್ಥವಾಗಬೇಕಿದೆ. ಚಾಂದಿನಿಯವರು ಮಾಲ್‌ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.ತನ್ನ ವಿರುದ್ಧ ಹಾಕಿರುವ ಕೇಸ್‌ ಅನ್ನು ವಾಪಸ್‌ ಪಡೆದುಕೊಳ್ಳುವಂತೆ ಪತ್ನಿಯನ್ನು ಈತ ಪದೇ ಪದೇ ಪೀಡಿಸುತ್ತಿದ್ದ. ಮನೆಗೆ ವಾಪಸ್‌ ಬಾ ಚೆನ್ನಾಗಿ ನೋಡಿಕೊಳ್ಳುವೆ ಎಂದಿದ್ದ. ಆದರೆ ಪತಿಯ ಗುಣದ ಬಗ್ಗೆ ಅರಿವಿದ್ದ, ಚಾಂದಿನಿ ಮನೆಗೆ ವಾಪಸಾಗಿರಲಿಲ್ಲ.
ಇದನ್ನೂ ಓದಿ:ಕಾರು ಪಾರ್ಕ್‌ ಮಾಡುವವರೇ ಹುಷಾರ್‌! ಮೂರು ಮಕ್ಕಳು ಉಸಿರುಗಟ್ಟಿ ಸಾವುನಿನ್ನೆ ಪುನಃ ಕರೆ ಮಾಡಿದ್ದ ಅಲ್ಗು, ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುವೆ. ಒಮ್ಮೆ ನನ್ನ ಮಾತು ಕೇಳು ಸಾಕು, ರಸ್ತೆಯ ಸಮೀಪ ನಿಂತುಕೊಂಡಿರು, ನಾನು ನಿನ್ನ ಬಳಿ ಮಾತನಾಡಬೇಕು ಎಂದಿದ್ದ. ಗಂಡನ ಮಾತಿಗೆ ಚಾಂದಿನಿ ಒಪ್ಪಿಕೊಂಡಿದ್ದೇ ಮಹಾ ತಪ್ಪಾಗಿ ಹೋಯಿತು.ಆತ ಹೇಳಿದಂತೆ ರಸ್ತೆಯಲ್ಲಿ ಈಕೆ ನಿಂತುಕೊಂಡಿದ್ದರು. ಹರಿತವಾದ ಚಾಕುವಿನೊಂದಿಗೆ ಆವೇಷಭರಿತನಾಗಿ ಬಂದಿದ್ದ ಅಲ್ಗು, ಪತ್ನಿಯನ್ನು ಹಿಗ್ಗಾಮುಗ್ಗ ಥಳಿಸಿ, ಶಿರಚ್ಛೇದನ ಮಾಡಿದ್ದಾನೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 4 =
Remember me
