ಬೆಂಗಳೂರು:ವಿವಾಹವಾದ ದಿನದಿಂದಲೂ ಗಂಡ ಹತ್ತಿರ ಬಾರದೇ ನೊಂದಿದ್ದ ಮಹಿಳೆಯರೊಬ್ಬರಿಗೆ ತಮ್ಮ ಗಂಡನ ರಸಹ್ಯ ತಿಳಿದದ್ದು ಮದುವೆಯಾಗಿ ಮೂರು ವರ್ಷದ ಬಳಿಕ!
ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಯುವತಿಯ ವಿವಾಹವು 2018ರಲ್ಲಿ ನಡೆದಿದೆ. ಆದರೆ ಒಂದಿಲ್ಲೊಂದು ಕಾರಣ ನೀಡಿ ಪತಿ ಅವರ ಹತ್ತಿರ ಬರುತ್ತಿರಲಿಲ್ಲ. 28 ವರ್ಷದ ಮಹಿಳೆ ಗಂಡ ತೋರುತ್ತಿದ್ದ ಈ ನಿರಾಸಕ್ತಿಯಿಂದ ಬೇಸರಗೊಂಡಿದ್ದರು.
ಇದಕ್ಕೆ ಕಾರಣ ಕೇಳಿದರೆ ಗಂಡ ಏನೇನೋ ನೆಪ ಹೇಳುತ್ತಿದ್ದ. ಆದರೆ ಇದೀಗ ಗಂಡನ ಈ ರಹಸ್ಯ ಮೊಬೈಲ್​ ಫೋನ್​ನಿಂದ ತಿಳಿದುಬಂದಿದೆ. ಅದೇನೆಂದರೆ ಪತಿ ಇಲ್ಲದ ಸಮಯದಲ್ಲಿ ಆತನ ಮೊಬೈಲ್​ ನೋಡಿದಾಗ ಮಹಿಳೆಗೆ ಅದರಲ್ಲಿ ಎರಡು ಗೇ ಡೇಟಿಂಗ್​ ಆ್ಯಪ್​ಗಳು ಕಂಡುಬಂದಿವೆ. ಅಂದರೆ ಸಲಿಂಗಕಾಮಿ ಡೇಟಿಂಗ್​ ಆ್ಯಪ್​ ಇವು.
ಅಂದರೆ ತನ್ನ ಗಂಡ ಸಲಿಂಗಿಕಾಮಿಯಾಗಿರುವ ಹಿನ್ನೆಲೆಯಲ್ಲಿ ತನ್ನ ಬಗ್ಗೆ ಆತನಿಗೆ ಆಸಕ್ತಿ ಇಲ್ಲ ಎನ್ನುವುದು ಈಕೆಗೆ ತಿಳಿದಿದ್ದು, ಗಂಡ ಮೋಸ ಮಾಡಿರುವ ಕಾರಣ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವರದಕ್ಷಿಣೆ ಪಡೆದುಕೊಂಡು ಮದುವೆಯಾಗಿದ್ದರೂ, ತಾನು ಸಲಿಂಗಿಕಾಮಿ ಎಂದು ತಿಳಿದಿದ್ದರೂ ಮೋಸ ಮಾಡಿರುವುದಾಗಿ ಅರ್ಜಿಯಲ್ಲಿ ಅವರು ಹೇಳಿದ್ದಾರೆ. ಜತೆಗೆ ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ತನ್ನ ಫೋನ್​ನಲ್ಲಿ ಈ ಡೇಟಿಂಗ್​ ಆ್ಯಪ್​ಗಳು ಇರುವುದು ನಿಜವಾದರೂ ತಾನುಇದುವರೆಗೆ ಯಾವ ಸಲಿಂಗಿಯ ಜತೆಯೂ ಡೇಟ್​ ಮಾಡಿಲ್ಲ ಎಂದು ಪತಿ ಹೇಳಿಕೆ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಣವಿಲ್ಲದಿದ್ದರೆ ಚಿಂತೆ ಬೇಡ, ಕಾನೂನು ಸೇವೆಯ ಸಹಾಯ ಪಡೆಯಿರಿ…

ಅಕ್ಕ ಬೆಳಗಿನ ಯೋಗದ ಪೋಸ್‌, ಭಾವ ರಾತ್ರಿಯ… ಜಾಲತಾಣದಲ್ಲಿ ಶಮಿತಾ ಶೆಟ್ಟಿ ಟ್ರೋಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 2 =
Remember me
