ಚೆನ್ನೈ:ಹೆರಿಗೆ ಮಾಡಿಸಲು ವೈದ್ಯರಿಗೇಕೆ ಸಾವಿರಾರು ರೂಪಾಯಿ ದುಡ್ಡು ಕೊಡಬೇಕು ಎಂದುಕೊಂಡ ಮಹಾಶಯನೊಬ್ಬ ತನ್ನ ಪತ್ನಿಗೆ ಯೂಟ್ಯೂಬ್‌ ನೋಡಿಕೊಂಡು ಡೆಲಿವರಿ ಮಾಡಲು ಹೋಗಿ ಅನಾಹುತ ಮಾಡಿಕೊಂಡಿರುವ ಘಟನೆ ನಡೆದಿದೆ.
ಚೆನ್ನೈನ ಲೋಕನಾಥನ್‌ ಎಂಬಾಂತ ಇಂಥದ್ದೊಂದು ಕೃತ್ಯ ಎಸಗಿದ್ದಾನೆ. ಈತನ ಈ ಕೃತ್ಯಕ್ಕೆ ಶಿಶು ಹುಟ್ಟುತ್ತಲೇ ಮೃತಪಟ್ಟರೆ, ಪತ್ನಿ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾಳೆ. ಇಂಥ ಕೃತ್ಯ ಎಸಗಿದ್ದಕ್ಕೆ ಲೋಕನಾಥನ್‌ ಜೈಲು ಪಾಲಾಗಿದ್ದಾನೆ!
2020ರಲ್ಲಿ ಲೋಕನಾಥನ್ ಮತ್ತು ಗೋಮತಿ ವಿವಾಹವಾಗಿದ್ದು, ಗೋಮತಿ ಗರ್ಭವತಿಯಾಗಿದ್ದರು. ವೈದ್ಯರು ಆಕೆಗೆ ಇದೇ 13 ಡೇಟ್‌ ನೀಡಿದ್ದರು. ಆದರೆ ಅಂದು ಹೆರಿಗೆ ನೋವು ಕಾಣಿಸಿಕೊಂಡಿರಲಿಲ್ಲ. ಆದರೆ 18ರಂದು ಹೆರಿಗೆ ನೋವು ಕಾಣಿಸಿಕೊಂಡಿದೆ. ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗೋಮತಿ ಆಸ್ಪತ್ರೆಗೆ ಸೇರಿರುವಂತೆ ಕೇಳಿದ್ದಾರೆ.
ಆದರೆ ವೈದ್ಯರಿಗೆ ಸುಖಾಸುಮ್ಮನೆ ಸಹಸ್ರಾರು ರೂಪಾಯಿ ಖರ್ಚು ಮಾಡುವುದು ಏಕೆ ಎಂದುಕೊಂಡ ಲೋಕನಾಥನ್‌, ಯೂಟ್ಯೂಬ್‌ ನೋಡಿಕೊಂಡು ತಾನೇ ಹೆರಿಗೆಗೆ ಮುಂದಾಗಿದ್ದಾನೆ. ಲೋಕನಾಥನ್ ಸಹೋದರಿ ಗೀತಾ ಕೂಡ ನೆರವಾಗಿದ್ದಾಳೆ! ಈ ಸಂದರ್ಭದಲ್ಲಿ ಗೋಮತಿಯವರಿಗೆ ತೀವ್ರವಾದ ರಕ್ತಸ್ರಾವವಾಗಿದೆ.
ಮಗುವನ್ನು ಹೊರಗೆ ತೆಗೆಯುವಷ್ಟರಲ್ಲಿ ಗೋಮತಿಯವರಿಗೆ ಸಹಿಸಲಾರದ ನೋವಾಗಿದೆ. ಮಗುವನ್ನು ವೈಜ್ಞಾನಿಕವಾಗಿ ತೆಗೆಯದ ಕಾರಣ, ಅದು ಹುಟ್ಟುತ್ತಲೇ ಮೃತಪಟ್ಟರೆ, ಗೋಮತಿಯವರಿಗೆ ರಕ್ತಸ್ರಾವ ನಿಲ್ಲಲೇ ಇಲ್ಲ. ಆಗ ಎಚ್ಚೆತ್ತುಕೊಂಡ ಈ ಪತಿಮಹಾಶಯ ಆಕೆಯನ್ನು ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾನೆ. ಆದರೆ ಅದಾಗಲೇ ಪರಿಸ್ಥಿತಿ ವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ ವೆಲ್ಲೂರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳಲಾಗಿದೆ.
ಈ ಆಸ್ಪತ್ರೆಯ ಯ ವ್ರ ನಿಗಾ ಘಟಕದಲ್ಲಿ ಸಾವು ಬದುಕಿನ ನಡುವೆ ಗೋಮತಿ ಒದ್ದಾಡುತ್ತಿದ್ದಾರೆ. ಇಂಥ ಕೃತ್ಯ ಎಸಗಿದ್ದಕ್ಕೆ ಲೋಕನಾಥನ್ ವಿರುದ್ಧ ಕೇಸು ದಾಖಲಿಸಿರುವ ಪೊಲೀಸರು ಆತನ್ನು ಬಂಧಿಸಿದ್ದಾರೆ.ಇದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪಿಎಂಕೆ ನಾಯಕ ಡಾ ಅನ್ಬುಮಣಿ ರಾಮದಾಸ್ ಟ್ವೀಟ್‌ ಮಾಡಿದ್ದು, ಹೆರಿಗೆ ಮಾಡಿಸುವುದು ಯೂಟ್ಯೂಬ್‌ ನೋಡಿ ಮ್ಯಾಗಿ ಮಾಡಿದಂತೆ ಅಲ್ಲ. ಒಂದು ಸಣ್ಣ ತಪ್ಪು ಕೂಡಾ ತಾಯಿ ಮತ್ತು ಮಗುವಿನ ಜೀವಕ್ಕೇ ಕುತ್ತು ಆಗಬಹುದು ಎಂದು ತಿಳಿದಿದ್ದರೂ ಇಂಥದ್ದೊಂದು ಕೃತ್ಯಕ್ಕೆ ಗಂಡ ಕೈಹಾಕಿರುವುದು ಮಹಾದುರಂತ ಎಂದಿದ್ದಾರೆ.
ಬುದ್ಧಿ ಚುರುಕಾಗುತ್ತೆ ಎಂದು ವೃದ್ಧನ ಕೊಲೆ ಮಾಡಿ ಮೆದುಳು, ಅಂಗಾಂಗ ತಿಂದ ಭೂಪ- ಮನೆ ಜಾಲಾಡಿ ಬೆಚ್ಚಿಬಿದ್ದ ಪೊಲೀಸರು!

ಶಾಲೆಯಲ್ಲಿ ಹುಟ್ಟುಹಬ್ಬ ಆಚರಿಸಿದ್ದೇ ತಪ್ಪಾಗೋಯ್ತು: ಅಪ್ಪ-ಮಗನನ್ನು ಆತ್ಮಹತ್ಯೆಗೆ ತಳ್ಳಿದ ಬರ್ತ್‌ಡೇ ಸಂಭ್ರಮ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
