ಹೈದರಾಬಾದ್:ಇಲ್ಲೊಬ್ಬ ಪತಿ ಮಹಾಶಯ ತಾನು ಪತ್ನಿಗೆ ವಿಚ್ಛೇದನ ನೀಡಿ ತನ್ನ ಪ್ರೇಮಿಯ ಜತೆ ಮದುವೆಯಾಗಲು ಇಚ್ಛಿಸಿದ್ದಾನೆ. ಇದಕ್ಕೆ ಪತ್ನಿ ಒಪ್ಪದಿದ್ದಾಗ ಆಕೆಯ ಸ್ಕೂಟಿಗೆ ಟ್ರ್ಯಾಕರ್‌ ಫಿಕ್ಸ್‌ ಮಾಡಿ ಅವಳು ಎಲ್ಲೆಲ್ಲಿ ಹೋಗುತ್ತಿದ್ದಾಳೆಂದು ತಿಳಿಯಲು ಹವಣಿಸಿದ್ದಾನೆ!ಸದ್ಯ ಈ ಕೇಸ್‌ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಪತಿಯ ವಿರುದ್ಧ ಪತ್ನಿ ದೂರು ದಾಖಲು ಮಾಡಿದ್ದಾಳೆ.
ಅಷ್ಟಕ್ಕೂ ಆಗಿರುವುದು ಏನೆಂದರೆ ವಿವೇಕ್ ವೀರೇಂದ್ರ ಸಿಂಗ್ ಎಂಬ 45 ವರ್ಷದ ವಿವಾಹಿತನೊಬ್ಬನಿಗೆ ಒಬ್ಬ ಸ್ನೇಹಿತೆ ಇದ್ದಾಳೆ. 15 ವರ್ಷಗಳ ದಾಂಪತ್ಯದ ಬಳಿಕ ಪತ್ನಿಗೆ ವಿಚ್ಛೇದನ ನೀಡಿ ಆಕೆಯ ಜತೆ ಮದುವೆಯಾಗಲು ಈತ ಇಚ್ಛಿಸಿದ್ದಾನೆ. ಈ ವಿಷಯವನ್ನು ಪತ್ನಿಗೆ ಹೇಳಿ ವಿಚ್ಛೇದನ ನೀಡುವಂತೆ ಕೇಳಿದ್ದಾನೆ.
ಇದಕ್ಕೆ ಪತ್ನಿ ಸುತರಾಂ ಒಪ್ಪಲಿಲ್ಲ. ಯಾವುದೇ ಕಾರಣಕ್ಕೂ ನಾನು ಡಿವೋರ್ಸ್‌ ಕೊಡುವುದಿಲ್ಲ ಎಂದು ಹೇಳಿದ್ದಾಳೆ. ಅದಕ್ಕಾಗಿ ಆತ ವಿಚ್ಛೇದನ ಕೋರಿ ಕೋರ್ಟಿಗೆ ಅರ್ಜಿಯನ್ನು ಹಾಕಿದ್ದನು. ಆದರೆ ಮಡದಿ ತನಗೆ ವಿಚ್ಛೇದನ ನೀಡಲು ಇಷ್ಟವಿಲ್ಲ ಎಂದು ಹೇಳಿದ್ದಳು. ವಿಚ್ಛೇದನಕ್ಕೆ ಏನಾದರೂ ಕಾರಣ ನೀಡಬೇಕಲ್ಲ, ಅದಕ್ಕಾಗಿ ಕಾರಣ ಹುಡುಕಲು ಟ್ರೈ ಮಾಡಿದ್ದಾನೆ.
ಆಗ ಆತನಿಗೆ ತನ್ನ ಪತ್ನಿ ಕೆಲವರನ್ನು ಹಿಂಬಾಲಿಸುತ್ತಾಳೆ ಎಂಬ ಗುಮಾನಿ ಬಂದಿದೆಯಂತೆ. ಅದಕ್ಕಾಗಿ ಹೇಗಾದರೂ ಮಾಡಿ ಸಾಕ್ಷಿ ಕಲೆ ಹಾಕಲು ಆಕೆ ಕಚೇರಿಗೆ ಹೋಗುವ ಸ್ಕೂಟಿಗೆ ಟ್ರ್ಯಾಕರ್ ಅಳವಡಿಸಿ ಆಕೆ ಎಲ್ಲೆಲ್ಲಿ ಹೋಗುತ್ತಿದ್ದಾಳೆ ಎನ್ನುವ ಲೈವ್‌ ಲೊಕೇಷನ್‌ ತಿಳಿಯಲು ಪ್ರಯತ್ನಿಸಿದ್ದಾನೆ.
ಆತನ ಮಾತುಗಳನ್ನು ಕೇಳುತ್ತಿದ್ದ ಈಕೆಗೆ ಸಂದೇಹ ಶುರುವಾಗಿ ಸ್ಕೂಟಿ ಪರಿಶೀಲಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಆದ್ದರಿಂದ ಗಂಡನ ವಿರುದ್ಧ ದೂರು ದಾಖಲು ಮಾಡಿದ್ದಾಳೆ. ಸದ್ಯ ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗಂಡನ ಈ ಸಮಸ್ಯೆಯಿಂದ ನನಗೆ ಜೀವನವೇ ಬೇಜಾರಾಗಿದೆ- ಅವರು ಸ್ಟ್ರಾಂಗ್​ ಆಗುವುದು ಹೇಗೆ?

ಒಂದು ಮಗು ನೀತಿನಿಂದ ಜನಸಂಖ್ಯೆ ಕುಸಿತ- ಚೀನಾ ಕಂಗಾಲು; ಸಂಖ್ಯೆ ಹೆಚ್ಚಿಸಲು ಹೊಸ ಪ್ಲ್ಯಾನ್​!

ಮುಸ್ಲಿಂ ಹೆಣ್ಣುಮಕ್ಕಳಿಗೆ 18 ವರ್ಷ ಆಗದಿದ್ದರೂ ಪ್ರೌಢಾವಸ್ಥೆಗೆ ಬಂದರೆ ಮದುವೆಗೆ ಸ್ವತಂತ್ರರು; ಹೈಕೋರ್ಟ್​

ಮುದ್ದು ಕಂದನ ಜೀವ ಉಳಿಸಲು ₹6 ಕೋಟಿ ಜಿಎಸ್​ಟಿ ಮನ್ನಾ ಮಾಡಿದ ಪ್ರಧಾನಿ ಮೋದಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:9 + eleven =
Remember me
