ನವದೆಹಲಿ:ಖ್ಯಾತ ಬಾಲಿವುಡ್​ ತಾರೆ ಅಮಿತಾಭ್​ ಬಚ್ಚನ್​ ಅವರು ಇದೀಗ ಮತ್ತೊಮ್ಮೆ ಭಾರಿ ಸುದ್ದಿಯಾಗಿದ್ದಾರೆ. ನಾನು ಪ್ರತಿಜ್ಞೆ ಮಾಡಿರುವ ಅಂಗದಾನಿ ಎಂದು ತಮ್ಮ ಟ್ವಿಟರ್​ ಖಾತೆಯಲ್ಲಿ ಹೇಳಿಕೊಳ್ಳುವ ಮೂಲಕ ಭರಪೂರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನೈಸರ್ಗಿಕ ವಿಪತ್ತು ಅಥವಾ ಯಾವುದೇ ಕಷ್ಟಕರ ಪರಿಸ್ಥಿತಿಯ ಸಂದರ್ಭಗಳಲ್ಲಿ ಮುಂದೆ ಬಂದು ಅನೇಕ ರೀತಿಯ ಸಹಾಯಹಸ್ತ ಚಾಚುತ್ತಿರುವ ಬಿಜ್​-ಬಿ ಇದೀಗ ತಮ್ಮ ಅಂಗವನ್ನು ದಾನ ಮಾಡುವುದಾಗಿ ಘೋಷಣೆ ಮಾಡಿರುವುದು ಲಕ್ಷಾಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ.
ಈಗಾಗಲೇ ತಾವು ಅಂಗದಾನ ಮಾಡಲು ನಿರ್ಧರಿಸಿರುವುದಾಗಿ ಅವರು ಟ್ವಿಟರ್​ ಖಾತೆಯಲ್ಲಿ ಘೋಷಣೆ ಮಾಡಿದ್ದಾರೆ. ಇದಕ್ಕೆ ಲಕ್ಷಾಂತರ ಮಂದಿ ಮೆಚ್ಚುಗೆ ಸೂಸಿ ನಟನಿಗೆ ಅಭಿನಂದನೆ ಹೇಳಿದ್ದಾರೆ.
T 3675 – I am a pledged ORGAN DONOR .. I wear the green ribbon of its sanctity !!🙏pic.twitter.com/EIxUJzkGU6
— Amitabh Bachchan (@SrBachchan)September 29, 2020

ತಮ್ಮ ಫೋಟೋ ಒಂದನ್ನು ಅಪ್​ಲೋಡ್​ ಮಾಡಿರುವ ಅಮಿತಾಭ್​ ಅವರು, ಕೋಟ್​ ಮೆಲೆ ಹಸಿರು ರಿಬ್ಬನ್​ ಧರಿಸಿದ್ದಾರೆ. ನಾನು ಅಂಗಾಂಗ ದಾನ ಮಾಡ್ತಿದ್ದೇನೆ. ಅದರ ಪವಿತ್ರತೆಗಾಗಿ ಈ ರಿಬ್ಬನ್ ಧರಿಸಿದ್ದೇನೆ ಎಂದು ಅದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
I am a pledged ORGAN DONOR .. I wear the green ribbon of its sanctity (ನಾನು ನಾನು ಪ್ರತಿಜ್ಞೆ ಮಾಡಿರುವ ಅಂಗದಾನಿ, ಅದರ ಪವಿತ್ರತೆಯನ್ನು ಸಾರುವ ಸಲುವಾಗಿ ಈ ಹಸಿರು ರಿಬ್ಬನ್​ ಧರಿಸಿದ್ದೇನೆ ಎಂದಿದ್ದಾರೆ.
ಸದ್ಯ ಅಮಿತಾಭ್​ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಈ ಮೂಲಕ ತಮ್ಮ ಅನೇಕ ವಿಷಯಗಳನ್ನು ಅವರು ಹಂಚಿಕೊಳ್ಳುತ್ತಿದ್ದಾರೆ. ಜತೆಗೆ ತಮ್ಮ ತಂದೆಯ ಮಾತುಗಳನ್ನು ಅವರು ಆಗಾಗ್ಗೆ ನೆನಪಿಸಿಕೊಳ್ಳುತ್ತಿದ್ದಾರೆ.
ಅಂಗಾಂಗ ದಾನದ ಕುರಿತು ಇವರು ಮಾಡಿರುವ ಘೋಷಣೆಗೆ ಪ್ರತಿಯಾಗಿ ಹಲವಾರು ಮಂದಿ ಕೂಡ ತಾವೂ ಈ ಹಾದಿಯಲ್ಲಿಯೇ ಸಾಗುವುದಾಗಿ ಹೇಳಿದ್ದಾರೆ. ಮಾತ್ರವಲ್ಲದೇ ಇದಾಗಲೇ ಕೆಲವರು ತಾವು ಅಂಗಾಂಗದಾನದ ಕುರಿತಂತೆ ಪಡೆದಿರುವ ದಾಖಲೆಗಳನ್ನೂ ಹಂಚಿಕೊಂಡಿದ್ದಾರೆ.
ಆಹಾರ ನೀಡಿ ಎಂದರೆ ಬೇರೆಬೇರೆ ಚಟುವಟಿಕೆ: ಸ್ವಿಗ್ಗಿ, ಜೊಮಾಟೊ ವಿರುದ್ಧ ಗೂಗಲ್​ ಗರಂ- ನೋಟಿಸ್​

ದಾಖಲೆ ಬರೆದ ಉತ್ತರ ಪ್ರದೇಶ: ಒಂದು ಕೋಟಿ ಜನರಿಗೆ ಕೋವಿಡ್​ ಪರೀಕ್ಷೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − 1 =
Remember me
