ಚೆನ್ನೈ:ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ಮೃತಪಟ್ಟು ಐದೂವರೆ ವರ್ಷಗಳು ಗತಿಸಿವೆ. ಅವರ ಸಾವಿರಾರು ಕೋಟಿ ರೂಪಾಯಿ ಆಸ್ತಿಗಳ ವಿಲೇವಾರಿಗೆ ಸಂಬಂಧಿಸಿದಂತೆ ಇನ್ನೂ ಚರ್ಚೆಗಳು ನಡೆಯುತ್ತಿರುವಾಗಲೇ ಮತ್ತೋರ್ವ ವ್ಯಕ್ತಿ ತಾವು ಅವರ ಸಹೋದರ ಎಂದು ಹೇಳಿಕೊಂಡು ಮದ್ರಾಸ್ ಹೈಕೋರ್ಟ್‌ ಮೊರೆ ಹೋಗಿದ್ದಾರೆ.
ಈ ಮೊದಲು ಜೆ. ದೀಪಕ್ ಮತ್ತು ಜೆ. ದೀಪಾ ಎನ್ನುವವರು ತಾವು ಜಯಲಲಿತಾ ಅವರ ವಾರಸುದಾರರು ಎಂದು ಹೇಳಿಕೊಂಡು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದಾದ ಬಳಿಕ ಕರ್ನಾಟಕದ ಅಮೃತಾ ಅವರು ನಟ ಶೋಬನ್‌ಬಾಬು ಮತ್ತು ಜಯಲಲಿತಾ ಅವರ ಪುತ್ರಿ ಎಂದು ಹೇಳಿಕೊಂಡು ಮೊಕದ್ದಮೆ ಹೂಡಿದ್ದರು. ಆದರೆ ಜೆ. ದೀಪಕ್ ಮತ್ತು ಜೆ. ದೀಪಾ ಅವರು ವಾರಸುದಾರರು ಎಂದು ಕೋರ್ಟ್​ ಹೇಳಿತ್ತು. ಅಮೃತಾ ಅವರ ಅರ್ಜಿಯನ್ನು ವಜಾ ಮಾಡಲಾಗಿತ್ತು.
ಇದೀಗ ಮೈಸೂರಿನ ವ್ಯಾಸಪುರಂನ ವಾಸುದೇವನ್ ಎನ್ನುವ 83 ವರ್ಷದ ವ್ಯಕ್ತಿಯೊಬ್ಬರು ತಾವು ಜಯಲಲಿತಾ ಅವರ ಸಹೋದರ ಎಂದು ಹೇಳಿಕೊಂಡು ಅರ್ಜಿ ಸಲ್ಲಿಸಿದ್ದಾರೆ. ಜಯಲಲಿತಾ ಅವರ ತಂದೆ ಆರ್. ಜಯರಾಮ್ ನನ್ನ ತಂದೆ. ಜಯರಾಮ್ ಅವರ ಮೊದಲ ಪತ್ನಿ ಜೆ. ಜಯಮ್ಮ ಅವರಿಗೆ ನಾನು ಒಬ್ಬನೇ ಮಗ ಮತ್ತು ನಾನು ಅವರ ಏಕೈಕ ವಾರಸುದಾರ ಎಂದು ಅವರು ಹೇಳಿದ್ದಾರೆ.
ವಾಸುದೇವನ್​ ಹೇಳಿದ್ದೇನು?
ನನ್ನ ತಾಯಿ ಜಯಮ್ಮ ಅವರನ್ನು ಜಯರಾವ್​ ಅವರು ಮೊದಲೇ ಮದುವೆಯಾಗಿದ್ದರು. ನಂತರ ಅವರ ಪತ್ನಿಯಾಗಿ ಬಂದದ್ದು ವೇದವಲ್ಲಿ ಅಲಿಯಾಸ್ ವೇದಮ್ಮ. ಈ ಎರಡನೆಯ ಪತ್ನಿಗೆ ಹುಟ್ಟಿದ್ದು, ಜಯಕುಮಾರ್ ಮತ್ತು ಜಯಲಲಿತಾ. ಆದ್ದರಿಂದ ಜಯಲಲಿತಾ ಮತ್ತು ಜಯಕುಮಾರ್ ನನ್ನ ಸಹೋದರ ಮತ್ತು ಸಹೋದರಿಯರು ಎಂದು ವಾಸುದೇವನ್​ ಹೇಳಿದ್ದಾರೆ.
1950ರಲ್ಲಿ ನನ್ನ ತಾಯಿ ಜಯಮ್ಮ ಮೈಸೂರು ನ್ಯಾಯಾಲಯದಲ್ಲಿ ಜೀವನಾಂಶಕ್ಕಾಗಿ ಮೊಕದ್ದಮೆ ಹೂಡಿದಾಗ ಆ ಪ್ರಕರಣದಲ್ಲಿ ನನ್ನ ತಂದೆಯ ಎರಡನೇ ಪತ್ನಿ ವೇದವಲ್ಲಿ, ಮಕ್ಕಳಾದ ಜಯಕುಮಾರ್ ಮತ್ತು ಜಯಲಲಿತಾ ಅವರನ್ನು ಪ್ರತಿವಾದಿಗಳಾಗಿ ಸೇರಿಸಲಾಗಿತ್ತು. ಇದೇ ನಾನು ಅವರ ಸಹೋದರ ಎನ್ನುವುದಕ್ಕೆ ಸಾಕ್ಷಿ. ಈ ಪ್ರಕರಣ ಇತ್ಯರ್ಥದಲ್ಲಿ ಅಂತ್ಯಗೊಂಡಿತು. ಜಯಕುಮಾರ್ ಅವರು ಜಯಲಲಿತಾ ಅವರಿಗಿಂತ ಮುಂಚೆಯೇ ನಿಧನರಾದರು. ಹಾಗಾಗಿ ಇಂದು ನಾನು ಸಹೋದರನಾಗಿ ಜಯಲಲಿತಾ ಅವರ ನೇರ ಉತ್ತರಾಧಿಕಾರಿ. ಹಾಗಾಗಿ ಜಯಲಲಿತಾ ಅವರ ಆಸ್ತಿಯಲ್ಲಿ ಶೇ 50ರಷ್ಟು ನನಗೆ ನೀಡಬೇಕು ಎಂದಿರುವ ವಾಸುದೇವನ್​, ಈ ಕುರಿತು ಆದೇಶ ಹೊರಡಿಸುವಂತೆ ಕೋರ್ಟ್​ ಅನ್ನು ಕೋರಿದ್ದಾರೆ.
ಕಳ್ಳನೆಂದು ಭಾವಿಸಿ ಹೊಡೆದೇ ಬಿಟ್ಟ ಸೆಕ್ಯುರಿಟಿ! ಕರ್ತವ್ಯ ಪ್ರಜ್ಞೆ ಮೆರೆಯಲು ಹೋಗಿ ಬ್ಯಾಂಕ್​ ಉದ್ಯೋಗಿ ಮರ್ಡರ್​

ಆಫೀಸ್​ ಮೀಟಿಂಗ್ ಎಂದು ಲವರ್ ಜತೆ ಮಾಲ್ಡೀವ್ಸ್​ಗೆ: ಪತ್ನಿಯಿಂದ ತಪ್ಪಿಸಿಕೊಳ್ಳಲು ಹೋಗಿ ಜೈಲಲ್ಲಿ ಇಂಜಿನಿಯರ್​!

ಅಭಿಮಾನಿಗಳು ತಂದಿಟ್ಟ ಸಂಕಷ್ಟ: ಹುಟ್ಟುಹಬ್ಬದಂದೇ ಜೈಲುಪಾಲಾದ ಖ್ಯಾತ ಯೂಟ್ಯೂಬರ್​!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:thirteen − 1 =
Remember me
