ಮುಂಬೈ:ಪಾನೀಯ, ಆಹಾರ ಪದಾರ್ಥ ಸೇರಿದಂತೆ ಕೆಲವೊಂದು ಪ್ಯಾಕೇಟ್‌ಗಳ ಮೇಲೆ ಇರುವ ಎಂಆರ್‌ಪಿಗಿಂತ ಹೆಚ್ಚು ಹಣವನ್ನು ವಸೂಲಿ ಮಾಡುವುದು ಹಲವು ವ್ಯಾಪಾರಿಗಳಿಗೆ ಮಾಮೂಲಾಗಿಬಿಟ್ಟಿದೆ. ಆದರೆ ಇದೇ ರೀತಿ 10 -10 ರೂಪಾಯಿ ಹೆಚ್ಚಿಗೆ ಹಣವನ್ನು ಗ್ರಾಹಕರಿಂದ ವಸೂಲು ಮಾಡುತ್ತಿದ್ದ ರೆಸ್ಟೋರೆಂಟ್‌ ಒಂದು ಇದೀಗ 2 ಲಕ್ಷ ರೂಪಾಯಿ ದಂಡ ತೆರಬೇಕಾಗಿದೆ!
ಮುಂಬೈನ ರೆಸ್ಟೋರೆಂಟ್‌ ಒಂದಕ್ಕೆ ಗ್ರಾಹಕರ ಕೋರ್ಟ್‌ 2 ಲಕ್ಷ ರೂಪಾಯಿ ದಂಡ ವಿಧಿಸಿ ಬುದ್ಧಿ ಕಲಿಸಿದೆ. ಅಷ್ಟಕ್ಕೂ ಈ ರೆಸ್ಟೋರೆಂಟ್‌ ಮಾಲೀಕ ಐಸ್‌ಕ್ರೀಂನ ಮೂಲ ಬೆಲೆಗಿಂತ 10 ರೂಪಾಯಿ ಹೆಚ್ಚಿಗೆ ಬೆಲೆಯನ್ನು ಪಡೆಯುತ್ತಿದ್ದ. ಶಗುನ್ ವೆಜ್ ರೆಸ್ಟೋರೆಂಟ್ ಮಾಲೀಕನು ಕೂಡಲೇ ದಂಡದ ಹಣವನ್ನು ನೀಡುವಂತೆ ಕೋರ್ಟ್‌ ಆದೇಶಿಸಿದೆ.
ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಮಾಲೀಕ, ಅಂಗಡಿಗೂ, ರೆಸ್ಟೋರೆಂಟ್‌ಗೂ ವ್ಯತ್ಯಾಸವಿದೆ. ಐಸ್‍ಕ್ರೀಮ್ ಸಂಗ್ರಹಿಸಲು ತಗಲುವ ವೆಚ್ಚ, ಗ್ರಾಹಕರಿಗೆ ಪೀಠೋಪಕರಣ, ಐಸ್‍ಕ್ರೀಮ್‌ಗೆ ಕಟ್ಲರಿ ಬಳಕೆ ಇವೆಲ್ಲವುಗಳಿಗೆ ಖರ್ಚಾಗುತ್ತದೆ. ಆದ್ದರಿಂದ ಹೆಚ್ಚುವರಿ ಹಣ ಪಡೆಯಲೇಬೇಕಾಗುತ್ತದೆ ಎಂದಿದ್ದರು.
ಇದನ್ನೂ ಓದಿ:ಚಾಲಕನ ಜತೆ ಆಕಾಶದಲ್ಲಿ ಹಾರಿತು ಕಾರು: ಕೆಲವೇ ವರ್ಷಗಳಲ್ಲಿ ವಿಶ್ವದೆಲ್ಲೆಡೆ ಓಡಾಟ!
ಆದರೆ ಇದನ್ನು ಕೋರ್ಟ್‌ ಒಪ್ಪಲಿಲ್ಲ. ಸುಮಾರು 24 ವರ್ಷಗಳಿಂದ ಇದೇ ರೀತಿ ಗ್ರಾಹಕರ ಮೇಲೆ ಹೆಚ್ಚಿನ ಶುಲ್ಕ ವಿಧಿಸಿದ್ದುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ನ್ಯಾಯಾಧೀಶರು ಇದನ್ನು ಗಂಭೀರವಾಗಿ ಪರಿಗಣಿಸಿದರು. ದೈನಂದಿನ ಗಳಿಕೆಯ ಆಧಾರದಲ್ಲಿ 40 ರಿಂದ 50 ಸಾವಿರ ರೂಪಾಯಿ ಆದಾಯ ಗಳಿಸುವ ಮೂಲಕ ಲಾಭದ ಹಾದಿ ಕಂಡುಕೊಂಡಿದೆ. ಅನ್ಯಾಯದ ವ್ಯಾಪಾರವನ್ನು ನಾವು ಒಪ್ಪುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಭಾಸ್ಕರ್ ಜಾಧವ್ ಅವ್ರ ಕುಟುಂಬಕ್ಕೆ ಆರು ವರ್ಷಗಳ ಹಿಂದೆ ರೆಸ್ಟೋರೆಂಟ್ 165 ರೂಪಾಯಿ ಬೆಲೆಯ ಐಸ್ ಕ್ರೀಮನ್ನು 175 ರೂಪಾಯಿಗೆ ಮಾರಾಟ ಮಾಡಿತ್ತು. ಇದನ್ನು ಪ್ರಶ್ನಿಸಿ ದಕ್ಷಿಣ ಮುಂಬೈ ಜಿಲ್ಲಾ ಗ್ರಾಹಕ ವೇದಿಕೆಗೆ ದೂರು ಸಲ್ಲಿಸಿದ್ದರು.
ಚಾಲಕನ ಜತೆ ಆಕಾಶದಲ್ಲಿ ಹಾರಿತು ಕಾರು: ಕೆಲವೇ ವರ್ಷಗಳಲ್ಲಿ ವಿಶ್ವದೆಲ್ಲೆಡೆ ಓಡಾಟ!

ಬ್ಲ್ಯಾಕ್‌ಲಿಸ್ಟ್‌ ಭೀತಿಯಲ್ಲಿ ಪಾಕ್‌ ಪ್ರಧಾನಿ ಗಡಗಡ: ಮಾಧ್ಯಮದೆದುರು ಗೋಳು ತೋಡಿಕೊಂಡಿದ್ದೇನು?

ಕೆಎಸ್‌ಆರ್‌ಟಿಸಿ ಬಸ್‌ ಆಯ್ತು ಹಲವು ವಿಶೇಷತೆಗಳ ಮಹಿಳಾ ಶೌಚಗೃಹ- ದೇಶದಲ್ಲೇ ಪ್ರಥಮ

ಪದವಿ ಕಾಲೇಜಿಗೆ ಪ್ರವೇಶ ಪಡೆದ ಸನ್ನಿ ಲಿಯೋನ್? ಉಪನ್ಯಾಸಕರು, ವಿದ್ಯಾರ್ಥಿಗಳಲ್ಲಿ ಸಂಚಲನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 13 =
Remember me
