ನವದೆಹಲಿ:ಭಾನುವಾರ (ಮೇ 1) ಮುಸ್ಲಿಂ ಜನರು ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಲು ನಿರ್ಧರಿಸಿದ್ದರು. ಆದರೆ ಈ ಹಿಂದೆಯೂ ಹಲವಾರು ಸಂದರ್ಭದಲ್ಲಿ ಆಗಿರುವಂತೆ ಚಂದ್ರನ ದರ್ಶನ ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಈದ್-ಉಲ್-ಫಿತರ್ ಅನ್ನು ಮೇ 3 ರಂದು ಆಚರಿಸಲು ನಿರ್ಧರಿಸಲಾಗಿದೆ.
ಕರ್ನಾಟಕ ಸೇರಿದಂತೆ ಉತ್ತರ ಪ್ರದೇಶ, ಬಿಹಾರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಹಿಲಾಲ್ ಸಮಿತಿಗಳು ಈದ್-ಉಲ್-ಫಿತರ್ ಅನ್ನು ಮಂಗಳವಾರ ಆಚರಿಸಲು ನಿರ್ಧರಿಸಿದ್ದು, ಈ ಕುರಿತು ಮಾಹಿತಿ ನೀಡಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿಯೂ ಚಂದ್ರನ ದರ್ಶನವಾಗಿಲ್ಲ ಎಂದು ತಿಳಿದುಬಂದಿದೆ.
ಈದ್ ಅನ್ನು ಇಸ್ಲಾಮಿಕ್ ಕ್ಯಾಲೆಂಡರ್‌ನ ಹತ್ತನೇ ತಿಂಗಳ ಮೊದಲ ದಿನದಂದು ಆಚರಿಸಲಾಗುತ್ತದೆ. ಇದನ್ನು ಶವ್ವಾಲ್ ಎಂದು ಕರೆಯಲಾಗುತ್ತದೆ. ಈ ಹಬ್ಬವನ್ನು ರಂಜಾನ್ ಕೊನೆಯಲ್ಲಿ ತಿಂಗಳ ಉಪವಾಸವನ್ನು ಮುರಿಯುವ ಹಬ್ಬ ಎಂದೂ ಕರೆಯುತ್ತಾರೆ. ರಂಜಾನ್‌ನ ಕೊನೆಯ ದಿನವಾದ ಚಾಂದ್ ರಾತ್‌ನಲ್ಲಿ ಚಂದ್ರನ ದರ್ಶನದವರೆಗೆ ಒಂದು ತಿಂಗಳು ಪೂರ್ತಿ ಉಪವಾಸ ಆಚರಿಸುವುದು ಮುಂದುವರೆದಿರುತ್ತದೆ.
ಇಸ್ಲಾಂ ಧರ್ಮವನ್ನು ಆಚರಿಸುವ ಜನರು ಅಲ್ಲಾಹನಿಂದ ಶಾಂತಿ ಮತ್ತು ಆಶೀರ್ವಾದ ಪಡೆಯಲು ಧನ್ಯವಾದಗಳನ್ನು ಅರ್ಪಿಸಲು ಇಡೀ ತಿಂಗಳನ್ನು ಮೀಸಲಿಡುತ್ತಾರೆ. ರೋಜಾ ಎಂದು ಕರೆಯಲ್ಪಡುವ ಉಪವಾಸವು ಸಾಮಾನ್ಯವಾಗಿ ರಂಜಾನ್‌ನ 30ನೇ ದಿನದಂದು ಅರ್ಧಚಂದ್ರನ ರಾತ್ರಿಯ ಆಚರಣೆಗಳೊಂದಿಗೆ ಕೊನೆಗೊಳ್ಳುತ್ತವೆ.
ಗಂಡ ಮೂರ್ನಾಲ್ಕು ಮದ್ವೆಯಾಗೋದು ಪತ್ನಿಗೆ ಇಷ್ಟ ಅಂದ್ಕೊಂಡ್ರಾ? ಇಂಥ ಕಾನೂನು ಯಾಕೆ ಬೇಕು ಎಂದ ಸಿಎಂ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 9 =
Remember me
