ನವದೆಹಲಿ:ಐಡಿಬಿಐ ಬ್ಯಾಂಕ್ 920 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಪದವೀಧರರಿಗೆ ಗುಡ್‌ ನ್ಯೂಸ್‌ ಕೊಟ್ಟಿದೆ. ಬ್ಯಾಂಕ್‌ನ ವಿವಿಧ ಶಾಖೆಗಳಿಗೆ ಗುತ್ತಿಗೆ ಆಧಾರದ ಮೇಲೆ ವಿವಿಧ ಕಾರ್ಯನಿರ್ವಾಹಕ ಹುದ್ದೆಗಳು ಇವಾಗಿವೆ.
ಇದು ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ಕರೆದಿರುವ ಹುದ್ದೆ ಆಗಿದ್ದು, ಖಾಲಿ ಹುದ್ದೆಗಳ ಲಭ್ಯತೆಯ ಆಧಾರದ ಮೇಲೆ ಎರಡು ವರ್ಷಗಳ ವಿಸ್ತರಣೆಯ ಸಾಧ್ಯತೆ ಇರುವುದಾಗಿ ಬ್ಯಾಂಕ್‌ ಹೇಳಿದೆ.
ಪರೀಕ್ಷೆ ಹಾಗೂ ಇತರ ವಿವರ ಇಲ್ಲಿದೆ:ಆನ್‌ಲೈನ್‌ನಲ್ಲಿ ಇದೇ 4ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಗಸ್ಟ್ 18 ಕೊನೆಯ ದಿನವಾಗಿದೆ.
ಒಟ್ಟು ಹುದ್ದೆಗಳು- 920
ವಯೋಮಿತಿ- 20 ರಿಂದ 25 ವರ್ಷ
ಶೈಕ್ಷಣಿಕ ಅರ್ಹತೆ- ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಾಮಾನ್ಯಕ್ಕೆ ಕನಿಷ್ಠ 55 ಪ್ರತಿಶತ ಮತ್ತು ಎಸ್ಸಿ/ಎಸ್ಟಿ/ಪಿಡಬ್ಲ್ಯೂಡಿ ವರ್ಗಗಳಿಗೆ 50 ಪ್ರತಿಶತದೊಂದಿಗೆ ಪದವಿ ಪಡೆದಿರಬೇಕು.
ಅರ್ಜಿ ಶುಲ್ಕ: ಎಸ್ಸಿ / ಎಸ್ಟಿ / ಪಿಡಬ್ಲ್ಯೂಡಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 200 ಪಾವತಿಸಬೇಕು, ಇತರ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 1000 ಪಾವತಿಸಬೇಕಾಗುತ್ತದೆ.
ಅರ್ಜಿ ಸಲ್ಲಿಕೆ ವಿವರ:Step 1:http://idbibank.inವೆಬ್‌ಸೈಟ್‌ಗೆ ಲಾಗಿನ್‌ ಆಗಿ.
Step 2: ‘Careers’ ಲಿಂಕ್ ಮೇಲೆ ಕ್ಲಿಕ್‌ ಮಾಡಿ
Step 3: ‘Current Opening’ link ಮೇಲೆ ಕ್ಲಿಕ್ಕಿಸಿ
Step 4: ‘Recruitment Notification for Executive on Contract – 2021-22 ಕ್ಲಿಕ್ಕಿಸಿ
Step 5: ಇಲ್ಲಿ ಸಂಪೂರ್ಣ ವಿವರ ಭರ್ತಿ ಮಾಡಿ
Step 6: ಶುಲ್ಕವನ್ನು ಪಾವತಿಸಿ, ಅರ್ಜಿಯ ಒಂದು ಕಾಪಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
ಎಸ್​ಜೆವಿಎನ್​ನಲ್ಲಿ 129 ಫೀಲ್ಡ್ ಆಫೀಸರ್ ಹುದ್ದೆಗೆ ಆಹ್ವಾನ: ವಿದೇಶದಲ್ಲಿಯೂ ಅವಕಾಶ

ಡಿಪ್ಲೋಮಾ ಪದವೀಧರರಿಗೆ ಇಂಡಿಯನ್ ಆಯಿಲ್‍ನಲ್ಲಿ ನೇಮಕ: 480 ಹುದ್ದೆಗಳಿಗೆ ಅಹ್ವಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + fourteen =
Remember me
