ಚೆನ್ನೈ:ಒಂದು ವಾರದ ಮಗುವನ್ನು ದುಡ್ಡಿನ ಆಸೆಗೆ ಕೊಟ್ಟು, ಮಗುವನ್ನೂ ಕಳೆದುಕೊಂಡು ನಂತರ ದುಡ್ಡನ್ನೂ ಕಳೆದುಕೊಂಡು ಇದೀಗ ಗೋಳೋ ಎನ್ನುತ್ತ ಪೊಲೀಸ್ ಠಾಣೆ ಅಲೆಯುತ್ತಿರುವ ಮಹಿಳೆಯೊಬ್ಬಳ ಘಟನೆ ಚೆನ್ನೈನಲ್ಲಿ ನಡೆದಿದೆ.
28 ವರ್ಷದ ಯಾಸ್ಮಿನ್ ವೆಪೇರಿ ಎಂಬಾಕೆ ಮಗು ಮತ್ತು ದುಡ್ಡನ್ನು ಕಳೆದುಕೊಂಡಿದ್ದಾಳೆ. ಈಕೆ ಹಣದ ಆಸೆಗೆ ತನ್ನ ಒಂದು ವಾರದ ಮಗುವನ್ನು 2.5 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾಳೆ. ಆ ಹಣ ಪಡೆದು ಕನಸು ಕಾಣುತ್ತಾ ದಾರಿಯಲ್ಲಿ ಬರುತ್ತಿರುವಾಗ ದರೋಡೆಕೋರರು ಬಂದು ಆ ಹಣವನ್ನು ಲೂಟಿ ಮಾಡಿ ಹೋಗಿದ್ದಾರೆ!
ಇತ್ತ ಮಗುವೂ ಇಲ್ಲ, ಅತ್ತ ಹಣವೂ ಇಲ್ಲದ ಸ್ಥಿತಿಯಲ್ಲಿರೋ ಯಾಸ್ಮಿನ್‌ ಈ ಸಂಬಂಧ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾಳೆ. ಮಗುವನ್ನು ಪಡೆದಾಕೆಯೇ ದರೋಡೆಕೋರರನ್ನು ಬಿಟ್ಟು ಹಣವನ್ನು ದೋಚಿ ಹೋಗಿದ್ದಾಳೆ ಎಂದು ದೂರಿನಲ್ಲಿ ಆಕೆ ಹೇಳಿಕೆ ನೀಡಿದ್ದಾಳೆ.
ಈಗ ಅನಿವಾರ್ಯವಾಗಿ ಪೊಲೀಸರ ಮುಂದೆ ಮಗುವನ್ನು ಅಕ್ರಮವಾಗಿ ಮಾರಾಟ ಮಾಡಿದ ದುಷ್ಕೃತ್ಯವನ್ನು ಹೇಳಿಕೊಳ್ಳಬೇಕಾದ ಸ್ಥಿತಿ ಬಂದಿದೆ. ಹಣಕ್ಕಾಗಿ ಮಗುವನ್ನು ಕೊಟ್ಟೆ ಎಂದು ಆಕೆ ಒಪ್ಪಿಕೊಂಡಿದ್ದು, ಹಣ ಕೊಟ್ಟು ಬರುತ್ತಿರುವಾಗಲೇ ಇಬ್ಬರು ಬೈಕ್‌ನಲ್ಲಿ ನನ್ನನ್ನು ಹಿಂಬಾಲಿಸಿಕೊಂಡು ಬಂದು ಪುರಸಾವಲ್ಕಮ್‌ ಸಮೀಪ ಬೆದರಿಸಿ ಹಣ ದೋಚಿ ಹೋದರು ಎಂದು ನಡೆದ ಘಟನೆಯನ್ನು ಹೇಳಿದ್ದಾಳೆ. ಖಾಲಿ ಪೇಪರ್‌ ಮೇಲೆ ಸಹಿ ಹಾಕಿಸಿಕೊಂಡು ಮಗು ಪಡೆದುಕೊಂಡಿರುವುದಾಗಿಯೂ ಹೇಳಿದ್ದಾಳೆ.
‘ನನ್ನ ಗಂಡ ಬಿಟ್ಟು ಹೋಗಿದ್ದಾನೆ. ಈ ಸಂದರ್ಭದಲ್ಲಿ ನಾನು ಗರ್ಭಿಣಿಯಾಗಿದ್ದು, ಹಣವಿಲ್ಲದೇ ಮಗುವನ್ನು ತೆಗೆಸಿಕೊಳ್ಳಲು ಹೋಗಿದ್ದೆ. ಆಗ ಜಯಗೀತಾ ಎನ್ನುವವರು ಭೇಟಿಯಾಗಿ ಮಗುವನ್ನು ಹೆತ್ತರೆ ಅದನ್ನು ಮಾರಾಟ ಮಾಡಿ ದುಡ್ಡು ಕೊಡಿಸುವುದಾಗಿ ಹೇಳಿದ್ದರು. ಅದರಂತೆ ನಾನು ಮಗುವನ್ನು ಹೆತ್ತೆ. ನಂತರ ಅವರ ಕೈಗೆ ಅದನ್ನು ಕೊಟ್ಟೆ ಎಂದು ದೂರಿನಲ್ಲಿ ಆಸ್ಮಿನ್‌ ಹೇಳಿದ್ದಾಳೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹವಾಮಾನದಲ್ಲಿ ಏರುಪೇರು: ಕಡಲುಕೋಳಿಗಳಲ್ಲಿ ಹೆಚ್ಚುತ್ತಿವೆ ಡಿವೋರ್ಸ್‌! ಪಕ್ಷಿತಜ್ಞರಿಂದ ಅಚ್ಚರಿಯ ಸಂಶೋಧನಾ ವರದಿ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me